'ಕೋರ್ ಬ್ಯಾಂಕಿಂಗ್ ಸೇವೆಗಳಿಗೆ ಮರಳಿ, ಗ್ರಾಹಕರನ್ನು ತಪ್ಪು ಹೂಡಿಕೆಗಳಿಗೆ ಸೆಳೆಯಬೇಡಿ': ಬ್ಯಾಂಕ್ ಗಳಿಗೆ ಸಚಿವೆ Nirmala Sitharaman ಪಾಠ

ನಿಮ್ಮ ಗ್ರಾಹಕರ ನಾಡಿಮಿಡಿತ ತಿಳಿದುಕೊಳ್ಳಿ, ಅವರೊಂದಿಗೆ ಸಂಪರ್ಕದಲ್ಲಿರಿ, ಠೇವಣಿಗಳನ್ನು ಸಂಗ್ರಹಿಸಿ ನೀವು ಮಾಡಬೇಕಾದ ಮೂಲ ಕೆಲಸಗಳಿಂದಲೇ ಆದಾಯ ಗಳಿಸಿ. ಅದೇ ಮೂಲ ಬ್ಯಾಂಕಿಂಗ್ ಎಂದು ವಿವರಿಸಿದರು.
Nirmala Sitharaman
ನಿರ್ಮಲಾ ಸೀತಾರಾಮನ್
Updated on

ಬ್ಯಾಂಕ್‌ಗಳು ಮೂಲ ಬ್ಯಾಂಕಿಂಗ್ ಚಟುವಟಿಕೆಗಳ ಮೇಲೆ ಗಮನ ಹರಿಸಬೇಕೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೆ ಕರೆ ನೀಡಿದ್ದಾರೆ. ಅತಿಯಾದ ವಿಭಿನ್ನ ಕ್ಷೇತ್ರಗಳಿಗೆ ವಿಸ್ತರಣೆ, ಆಕ್ರಮಣಕಾರಿ ಸಾಲ ವಿತರಣಾ ಕ್ರಮಗಳು ಹಾಗೂ ಹಣಕಾಸು ಉತ್ಪನ್ನಗಳ ತಪ್ಪು ಮಾರಾಟ, ಗ್ರಾಹಕರಿಗೆ ತಪ್ಪು ಹೂಡಿಕೆಗೆ ಒತ್ತಾಯಿಸುವುದರಿಂದ ದೂರ ಉಳಿಯಬೇಕೆಂದು ಅವರು ಕಿವಿಮಾತು ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಬ್ಯಾಂಕ್‌ಗಳು ಠೇವಣಿ ಸಂಗ್ರಹ, ಗ್ರಾಹಕರೊಂದಿಗೆ ಸಂಪರ್ಕ ಮತ್ತು ಜಾಣ್ಮೆಯ ಸಾಲ ವಿತರಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಇವುಗಳನ್ನೇ ಅವರು ಮೂಲ ಬ್ಯಾಂಕಿಂಗ್ ಎಂದು ವಿವರಿಸಿದರು.

ನಿಮ್ಮ ಗ್ರಾಹಕರ ನಾಡಿಮಿಡಿತ ತಿಳಿದುಕೊಳ್ಳಿ, ಅವರೊಂದಿಗೆ ಸಂಪರ್ಕದಲ್ಲಿರಿ, ಠೇವಣಿಗಳನ್ನು ಸಂಗ್ರಹಿಸಿ ನೀವು ಮಾಡಬೇಕಾದ ಮೂಲ ಕೆಲಸಗಳಿಂದಲೇ ಆದಾಯ ಗಳಿಸಿ. ಅದೇ ಮೂಲ ಬ್ಯಾಂಕಿಂಗ್ ಎಂದು ವಿವರಿಸಿದರು.

Nirmala Sitharaman
ಚಿನ್ನದ ಬೆಲೆ ಏರಿಕೆಯಾಗಿದೆ ಆದರೆ 'ಮಿತಿ ಮೀರಿಲ್ಲ', ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ: ನಿರ್ಮಲಾ ಸೀತಾರಾಮನ್

ಕೆಲವು ವರ್ಷಗಳ ಹಿಂದೆ ಹಲವು ಬ್ಯಾಂಕ್‌ಗಳು ತಮ್ಮ ಸಾಂಪ್ರದಾಯಿಕ ಕಾರ್ಯಗಳಾಚೆಗೆ ವಿಸ್ತರಿಸಿ, ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಿಂದ ಕಡಿಮೆ ವೆಚ್ಚದ CASA (ಚಾಲ್ತಿಯಲ್ಲಿರುವ ಮತ್ತು ಉಳಿತಾಯ ಖಾತೆ) ಠೇವಣಿಗಳ ಸೌಲಭ್ಯವನ್ನು ಕಳೆದುಕೊಂಡವು. ಇದೇ ಸಮಯದಲ್ಲಿ, ಸರ್ಕಾರವು ಮೇಲ್ವಿಚಾರಣೆಯನ್ನು ಕಠಿಣಗೊಳಿಸಿ, ಸಾಲ ಮೌಲ್ಯಮಾಪನ ಮತ್ತು ಕಾರ್ಯಕ್ಷಮತಾ ಮಾನದಂಡಗಳನ್ನು ಹೆಚ್ಚು ವೃತ್ತಿಪರ ರೀತಿಯಲ್ಲಿ ನಿರ್ವಹಿಸಲು ಒತ್ತಾಯಿಸಿತು.

ಸಾಕಷ್ಟು ಆಸ್ತಿ ಭದ್ರತೆ ಇಲ್ಲದೆ ನೀಡಲಾದ ಸಾಲಗಳಂತಹ “ಅತಿವೇಗವಾಗಿ” ಕೈಗೊಳ್ಳಲಾದ ಆಕ್ರಮಣಕಾರಿ ಸಾಲ ಕ್ರಮಗಳನ್ನು ಅವರು ಟೀಕಿಸಿದರು. ಇಂತಹ ಕ್ರಮಗಳು, ಸರ್ಕಾರದಿಂದ ಸ್ವಯಂಚಾಲಿತ ಬಂಡವಾಳ ನೆರವು ಸಿಗುವುದಿಲ್ಲ ಎಂಬ ಸ್ಪಷ್ಟನೆ ಇದ್ದ ಸಂದರ್ಭದಲ್ಲಿ, ಬ್ಯಾಂಕ್‌ಗಳ ಬ್ಯಾಲೆನ್ಸ್ ಶೀಟ್‌ಗಳನ್ನು ದುರ್ಬಲಗೊಳಿಸಿವೆ ಎಂದು ಹೇಳಿದರು.

ಬ್ಯಾಂಕ್‌ಗಳು ಬಂಡವಾಳ ನೆರವು ಕೇಳಿದ ಸಂದರ್ಭಗಳನ್ನು ಉಲ್ಲೇಖಿಸಿದ ಸಚಿವೆ, ಸರ್ಕಾರದ ಹಣದ ಮೇಲೆ ಅವಲಂಬಿಸದೆ, ಉತ್ತಮ ಆಡಳಿತ ಮತ್ತು ಕಾರ್ಯಕ್ಷಮತೆಯನ್ನು ತೋರಿಸಿ ಮಾರುಕಟ್ಟೆಯಿಂದಲೇ ಬಂಡವಾಳ ಸಂಗ್ರಹಿಸಬೇಕು ಎಂದು ಹೇಳಿದ್ದನ್ನು ನೆನಪಿಸಿಕೊಂಡರು.

ಬ್ಯಾಂಕ್‌ಗಳು ವಿಮಾ ಉತ್ಪನ್ನಗಳನ್ನು ತಪ್ಪಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ವಿಷಯಕ್ಕೂ ಅವರು ಆತಂಕ ವ್ಯಕ್ತಪಡಿಸಿದರು. ಇದು ಗ್ರಾಹಕರಿಗೆ ಹಾನಿ ಉಂಟುಮಾಡುವ ಪ್ರಮುಖ ಸಮಸ್ಯೆಯಾಗಿದೆ ಎಂದು ಹೇಳಿದರು.

ಗೃಹ ಸಾಲ ಪಡೆಯುವವರು ತಮ್ಮ ಆಸ್ತಿಯನ್ನು ಈಗಾಗಲೇ ಜಾಮೀನಾಗಿ ಇಟ್ಟಿದ್ದರೂ, ಅವರಿಗೆ ಹೆಚ್ಚುವರಿ ವಿಮಾ ಉತ್ಪನ್ನಗಳನ್ನು ಖರೀದಿಸಲು ಒತ್ತಾಯಿಸಲಾಗುತ್ತಿರುವ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು. ಈಗಾಗಲೇ ಜೀವ ವಿಮೆ, ಆರೋಗ್ಯ ವಿಮೆ ಮತ್ತು ಅಗ್ನಿ ವಿಮೆ ಇದ್ದಾಗ ಮತ್ತೊಂದು ವಿಮೆ ಏಕೆ ಬೇಕು ಎಂದು ಪ್ರಶ್ನಿಸಿದರು.

ಬ್ಯಾಂಕ್‌ಗಳ ಮೂಲಕ ನಡೆಯುವ ವಿಮಾ ಮಾರಾಟವು ಕೆಲವೊಮ್ಮೆ ಬ್ಯಾಂಕಿಂಗ್ ಮತ್ತು ವಿಮಾ ನಿಯಂತ್ರಣ ಸಂಸ್ಥೆಗಳ ನಡುವಿನ ಮೇಲ್ವಿಚಾರಣಾ ಅಂತರದಿಂದ ಇಂತಹ ಸಮಸ್ಯೆಗಳು ಮುಂದುವರಿಯಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ತಪ್ಪು ಮಾರಾಟದ ವಿರುದ್ಧ ಮಾರ್ಗಸೂಚಿ ಹೊರಡಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕ್ರಮವನ್ನು ಅವರು ಸ್ವಾಗತಿಸಿ, ಬ್ಯಾಂಕ್‌ಗಳು ಇಂತಹ ಕ್ರಮಗಳನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com