

ಮುಂಬೈ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ದುರ್ಬಲ ಮತ್ತು ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರ ಕಡಿತದ ನಿರೀಕ್ಷೆಗಳ ಮಧ್ಯೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್(MCX)ನಲ್ಲಿ, ಬೆಳ್ಳಯ ಮಾರ್ಚ್ ಒಪ್ಪಂದವು 12,638 ರೂ. ಅಥವಾ ಸುಮಾರು ಶೇ. 4 ರಷ್ಟು ಏರಿಕೆಯಾಗಿ, ಪ್ರತಿ ಕೆಜಿಗೆ 3,39,927 ರೂ.ಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಬುಧವಾರದ ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಪ್ರತಿ ಕೆಜಿಗೆ 3,35,521 ರೂ.ಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು.
ಇನ್ನೂ ಚಿನ್ನದ ಬೆಲೆ ಸಹ ಸತತ ಐದನೇ ದಿನವೂ ಹೆಚ್ಚಾಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಫೆಬ್ರವರಿ ವಿತರಣೆಗೆ ಚಿನ್ನವು MCX ನಲ್ಲಿ 10 ಗ್ರಾಂಗೆ 2,885 ರೂ. ಅಥವಾ ಶೇಕಡಾ 1.84 ಏರಿಕೆಯಾಗಿ 1,59,226 ರೂ.ಗೆ ತಲುಪಿದೆ. ಗುರುವಾರ ಅದು 10 ಗ್ರಾಂಗೆ 1,56,341 ರೂ.ಗಳಲ್ಲಿ ಸ್ಥಿರವಾಗಿತ್ತು.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,46,400 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,59,226 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 34,000 ರುಪಾಯಿ ಇದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,46,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 34,000 ರುಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಬೆಳ್ಳಿ ಬೆಲೆ 36,000 ರೂ ಇದೆ.
Advertisement