SIP vs STP vs SWP: Mutual Fundನಲ್ಲಿ ಯಾವುದು ಬೆಸ್ಟ್? ನಿಮಗೆ ಸರಿಹೊಂದೋದು ಯಾವುದು?

ಮ್ಯೂಚುವಲ್ ಫಂಡ್ ಅಂದ ತಕ್ಷಣ ನಮಗೆ ನೆನಪಾಗೋದು SIP. ಪ್ರತಿ ತಿಂಗಳು 500, 1000 ಹಾಕೋದು. ಆದರೆ SIP ಮಾತ್ರ ಒಂದೇ ದಾರಿ ಅಲ್ಲ. STP ಹಾಗೂ SWP ಎಂಬ 2 ಆಪ್ಷನ್ ಕೂಡ ಇದೆ; ಹಾಗಾದ್ರೆ, SIP, STP, SWP ನಡುವಿನ ವ್ಯತ್ಯಾಸ ಏನು? ನಿಮಗೆ ಯಾವುದು ಸರಿ?
Investment Tips
SIP vs STP vs SWP: ಯಾವುದು ಬೆಸ್ಟ್?Online Desk
Updated on

Investment Tips: ಮ್ಯೂಚುವಲ್ ಫಂಡ್ ಅಂದರೆ ನೆನಪಾಗೋದು ಮೊದಲು SIP. ಆದರೆ SIP ಮಾತ್ರವಲ್ಲ, STP ಮತ್ತು SWP ಕೂಡ ಇದೆ. ಪ್ರತಿ ತಿಂಗಳು ಸಂಬಳದಿಂದ ಉಳಿಸುವವರಿಗೆ SIP, ಒಟ್ಟಿಗೆ ದೊಡ್ಡ ಮೊತ್ತ ಬಂದವರಿಗೆ STP, ನಿವೃತ್ತಿಯ ನಂತರ ಪ್ರತಿ ತಿಂಗಳು ಆದಾಯ ಬೇಕಾದವರಿಗೆ SWP ಬೆಸ್ಟ್. ಹಾಗಾಗಿ, ನಿಮ್ಮ ಗುರಿ ಮತ್ತು ಆರ್ಥಿಕ ಸ್ಥಿತಿಗೆ ತಕ್ಕಂತೆ ಈ 3ರಲ್ಲಿ ಸರಿಯಾದ ವಿಧಾನ ಆಯ್ಕೆ ಮಾಡಿದರೆ ರಿಸ್ಕ್ ಕಡಿಮೆ, ಲಾಭ ಜಾಸ್ತಿ!

SIP:
ಇದು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಫಂಡ್‌ನಲ್ಲಿ ಹೂಡಿಕೆ ಮಾಡುವ ವಿಧಾನ. ಉದಾ: ಪ್ರತಿ ತಿಂಗಳು ₹2000. ಸಂಬಳ ಪಡೆಯುವವರು ಮತ್ತು ದೀರ್ಘಾವಧಿಗೆ ಸಂಪತ್ತು ಕಟ್ಟಲು ಬಯಸುವವರಿಗೆ ಇದು ಸೂಕ್ತ. SIP ಯ ದೊಡ್ಡ ಲಾಭವೆಂದರೆ ರೂಪಾಯಿ ಕಾಸ್ಟ್ ಸರಾಸರಿ. ಮಾರುಕಟ್ಟೆ ಕುಸಿದಾಗ ಹೆಚ್ಚು ಯೂನಿಟ್, ಏರಿದಾಗ ಕಡಿಮೆ ಯೂನಿಟ್ ಸಿಗುವುದರಿಂದ ಸರಾಸರಿ ವೆಚ್ಚ ಕಡಿಮೆಯಾಗುತ್ತದೆ. ಜೊತೆಗೆ ಕಂಪೌಂಡಿಂಗ್ ಪ್ರಯೋಜನದಿಂದ 10-15 ವರ್ಷದಲ್ಲಿ ದೊಡ್ಡ ಮೊತ್ತ ಕೈ ಸೇರುತ್ತದೆ. ಮಕ್ಕಳ ಶಿಕ್ಷಣ, ಮನೆ ಖರೀದಿ, ನಿವೃತ್ತಿ ಯೋಜನೆಗೆ SIP ಅತ್ಯುತ್ತಮ.

Investment Tips
FD or RD: ಯಾವುದರಲ್ಲಿ ಹೆಚ್ಚು ಲಾಭ? ಹೂಡಿಕೆಗೂ ಮುಂಚೆ ಈ ವಿಷಯ ತಿಳ್ಕೊಳಿ!

STP:
ಬೋನಸ್, ಆಸ್ತಿ ಮಾರಾಟ ಅಥವಾ FD ಮೆಚ್ಯೂರಿಟಿಯಿಂದ ಒಂದೇ ಸಾರಿ ₹5 ಲಕ್ಷ - ₹10 ಲಕ್ಷ ಬಂದಾಗ ನೇರವಾಗಿ ಈಕ್ವಿಟಿಯಲ್ಲಿ ಹೂಡಿಕೆ ಮಾಡುವುದು ರಿಸ್ಕ್. ಅಂತಹ ಸಂದರ್ಭದಲ್ಲಿ STP ಸಹಾಯ ಮಾಡುತ್ತದೆ. ಮೊದಲು ಆ ಮೊತ್ತವನ್ನು ಲಿಕ್ವಿಡ್ ಫಂಡ್ ಅಥವಾ ಡೆಬಿಟ್ ಫಂಡ್ ನಲ್ಲಿ ಇಡಲಾಗುತ್ತದೆ. ಅಲ್ಲಿಂದ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಈಕ್ವಿಟಿ ಫಂಡ್ ಗೆ ವರ್ಗಾಯಿಸಲಾಗುತ್ತದೆ. ಇದರಿಂದ ಮಾರುಕಟ್ಟೆ ಟೈಮಿಂಗ್ ರಿಸ್ಕ್ ಕಡಿಮೆಯಾಗುತ್ತದೆ. ವರ್ಗಾವಣೆ ಆಗುವವರೆಗೆ ಲಿಕ್ವಿಡ್ ಫಂಡ್ ನಲ್ಲಿ ಸಣ್ಣ ಲಾಭವೂ ಸಿಗುತ್ತದೆ. ಆದರೆ ಪ್ರತಿ ವರ್ಗಾವಣೆಗೆ ಕ್ಯಾಪಿಟಲ್ ಗೈನ್ಸ್ ಟ್ಯಾಕ್ಸ್ ಅನ್ವಯವಾಗಬಹುದು ಎಂಬುದನ್ನು ನೆನಪಿಡಿ.

How to know the time is right to invest
ಹೂಡಿಕೆOnline Desk
Investment Tips
ಹೂಡಿಕೆ ಮಾಡಲು ಸರಿಯಾದ ಸಮಯ ಯಾವುದು? ತಿಳಿಯುವುದು ಹೇಗೆ?

SWP:
SIP ಗೆ ಸಂಪೂರ್ಣ ವಿರುದ್ಧ. ಈಗಾಗಲೇ ಮಾಡಿರುವ ಹೂಡಿಕೆಯಿಂದ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಹಿಂತೆಗೆದುಕೊಳ್ಳುವುದು. ನಿವೃತ್ತರಿಗೆ ಮತ್ತು ಸ್ಥಿರ ಮಾಸಿಕ ಆದಾಯ ಬೇಕಾದವರಿಗೆ ಇದು ಬೆಸ್ಟ್. ಒಟ್ಟಿಗೆ ಎಲ್ಲಾ ಹಣ ತೆಗೆಯದೆ, ಅಗತ್ಯಕ್ಕೆ ತಕ್ಕಂತೆ ತೆಗೆದುಕೊಳ್ಳುವುದರಿಂದ ಕಾರ್ಪಸ್ ಬೆಳೆಯುತ್ತಲೇ ಇರುತ್ತದೆ. ತೆರಿಗೆಯೂ ಲಾಭದ ಭಾಗಕ್ಕೆ ಮಾತ್ರ ಅನ್ವಯವಾಗುವುದರಿಂದ ಟ್ಯಾಕ್ಸ್ ಎಫಿಷಿಯೆಂಟ್ ಕೂಡ.

ಒಟ್ಟಾರೆಯಾಗಿ, SIP ಸಂಪತ್ತು ಸೃಷ್ಟಿಸಲು, STP ದೊಡ್ಡ ಮೊತ್ತವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು, SWP ಸಂಪತ್ತಿನಿಂದ ಆದಾಯ ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ವಯಸ್ಸು, ಆದಾಯ ಮತ್ತು ಗುರಿ ಆಧರಿಸಿ ಆಯ್ಕೆ ಮಾಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com