ಜಾನ್ಸನ್ ಬೇಬಿ ಪೌಡರ್​ನಿಂದ ಕ್ಯಾನ್ಸರ್​? 53 ಸಾವಿರ ಕೋಟಿ ರೂ. ಪರಿಹಾರ ನೀಡಲು Johnson ಕಂಪೆನಿ ಒಪ್ಪಿಗೆ; ಏನಿದು ಪ್ರಕರಣ?

ಜಾನ್ಸನ್ & ಜಾನ್ಸನ್ ಕಂಪನಿಯ ಟಾಲ್ಕ್ ಆಧಾರಿತ ಬೇಬಿ ಪೌಡರ್ ಅಂಡಾಶಯದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಆರೋಪಿಸಿ 2009 ರಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಯಿತು.
Johnson & Johnson baby powder causing cancer? Company offers $5.5 billion to settle lawsuits
ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್
Updated on

1894 ರಲ್ಲಿ ಪರಿಚಯಿಸಲಾದ ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ಜಾಗತಿಕವಾಗಿ ಅತ್ಯಂತ ಪ್ರಸಿದ್ಧವಾದ ಶಿಶು ಆರೈಕೆ ಉತ್ಪನ್ನಗಳಲ್ಲಿ ಒಂದಾಗಿದೆ. ಆದಾಗ್ಯೂ, ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯು ಕಳೆದ ಒಂದು ದಶಕದಿಂದ ಆಸ್ಬೆಸ್ಟೋಸ್(ಕಾರ್ಸಿನೋಜೆನ್) ಮಾಲಿನ್ಯಕ್ಕೆ ಸಂಬಂಧಿಸಿದಂತೆ ಜಾಗತಿಕ ವಿವಾದದ ಕೇಂದ್ರಬಿಂದುವಾಗಿದೆ.

ಜಾನ್ಸನ್ & ಜಾನ್ಸನ್ ಕಂಪನಿಯ ಟಾಲ್ಕ್ ಆಧಾರಿತ ಬೇಬಿ ಪೌಡರ್ ಅಂಡಾಶಯದ ಕ್ಯಾನ್ಸರ್‌ಗೆ ಕಾರಣವಾಗಿದೆ ಎಂದು ಆರೋಪಿಸಿ ಅಮೆರಿಕದಲ್ಲಿ ಸಲ್ಲಿಕೆಯಾಗಿರುವ ಸಾವಿರಾರು ದೀರ್ಘಕಾಲದ ಮೊಕದ್ದಮೆಗಳನ್ನು ಇತ್ಯರ್ಥಪಡಿಸಲು ಕಂಪನಿಯು ಬರೋಬ್ಬರಿ 5.5 ಬಿಲಿಯನ್ ಡಾಲರ್(53 ಸಾವಿರ ಕೋಟಿ ರೂ.) ಪರಿಹಾರ ನೀಡಲು ಒಪ್ಪಿಕೊಂಡಿದೆ.

ಟಾಲ್ಕ್ ಆಧಾರಿತ ಬೇಬಿ ಪೌಡರ್ ಮೆಸೊಥೆಲಿಯೊಮಾ ಮತ್ತು ಅಂಡಾಶಯದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಆರೋಪಿಸಿ 2009 ರಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಯಿತು. ಒಂದು ಮಾದರಿಯಲ್ಲಿ ಸಣ್ಣ ಮಟ್ಟದ ಆಸ್ಬೆಸ್ಟೋಸ್ ಕಂಡುಬಂದ ನಂತರ ಜಾನ್ಸನ್ & ಜಾನ್ಸನ್ 2019 ರಲ್ಲಿ ಸಾಗಣೆಯನ್ನು ಹಿಂತೆಗೆದುಕೊಂಡಿದೆ ಎಂದು ಅಮೆರಿಕ ಆಹಾರ ಮತ್ತು ಔಷಧ ಆಡಳಿತದ ಸಲಹೆ ಬಹಿರಂಗಪಡಿಸಿದೆ.

Johnson & Johnson baby powder causing cancer? Company offers $5.5 billion to settle lawsuits
ಉಪ್ಪಿ ದಾದ ಬೆಡಗಿಗೆ ಸ್ತನ ಕ್ಯಾನ್ಸರ್: ಶಾಕಿಂಗ್ ಪೋಸ್ಟ್ ಹಂಚಿಕೊಂಡ ನಟಿ ಉಮಾ ಶಂಕರಿ; ಹೇಳಿದ್ದೇನು?

ನಂತರ, ಉತ್ಪನ್ನವನ್ನು 2020 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮತ್ತು 2023 ರಲ್ಲಿ ಇತರ ದೇಶಗಳಲ್ಲಿ ಸ್ಥಗಿತಗೊಳಿಸಲಾಯಿತು ಮತ್ತು ಸ್ಟಾರ್ಚ್ ಆಧರಿತ ಪೌಡರ್‌ಗೆ ಬದಲಾವಣೆ ಮಾಡಿಕೊಂಡಿದೆ. ಆದರೆ ಕಂಪನಿಯು ತನ್ನ ಉತ್ಪನ್ನಗಳು ಸುರಕ್ಷಿತವೆಂದು ವಾದಿಸುತ್ತಲೇ ಇದೆ.

ಪ್ರಸ್ತಾವಿತ ಇತ್ಯರ್ಥವು ಅಮೆರಿಕದ ಫೆಡರಲ್‌ ಹಾಗೂ ರಾಜ್ಯ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಸುಮಾರು 76,000 ಮೊಕದ್ದಮೆಗಳನ್ನು ಒಳಗೊಂಡಿದೆ. ಇವು ಕಂಪನಿ ವಿರುದ್ಧ ಬಾಕಿ ಉಳಿದಿರುವ ಬಹುತೇಕ ಎಲ್ಲಾ ಅಂಡಾಶಯದ ಕ್ಯಾನ್ಸರ್‌ ಪ್ರಕರಣಗಳಾಗಿವೆ. ಆದರೆ, ಈ ಒಪ್ಪಂದ ಜಾರಿಗೆ ಬರಬೇಕಾದರೆ ಕನಿಷ್ಠ ಶೇ.95ರಷ್ಟು ಹಕ್ಕುದಾರರು ಇದಕ್ಕೆ ಒಪ್ಪಿಗೆ ಸೂಚಿಸಬೇಕಿದೆ.

ಒಂದು ವೇಳೆ ಈ ಒಪ್ಪಂದ ಜಾರಿಗೆ ಬಂದರೆ, ಅಮೆರಿಕದ ಕಾರ್ಪೊರೇಟ್‌ ಇತಿಹಾಸದಲ್ಲೇ ಅತಿದೊಡ್ಡ ಹಾಗೂ ದೀರ್ಘಕಾಲದಿಂದ ಮುಂದುವರಿದಿರುವ ಉತ್ಪನ್ನದಿಂದ ಹಾನಿಯಾಗಿದೆ ಎಂಬ ಆರೋಪದ ಪ್ರಕರಣಗಳಲ್ಲಿ ಒಂದಕ್ಕೆ ತೆರೆ ಬೀಳುವ ಸಾಧ್ಯತೆ ಇದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com