

ಹೆಚ್ಚುತ್ತಿರುವ ಇಂಧನ ಬೆಲೆ, ಹಣದುಬ್ಬರದ ಆತಂಕ ಹಾಗೂ ಅಮೆರಿಕದ ಕಠಿಣ ಹಣಕಾಸು ನೀತಿಯ ನಿರೀಕ್ಷೆಗಳು ಹೂಡಿಕೆದಾರರ ಮೇಲೆ ಪರಿಣಾಮ ಬೀರಿರುವುದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಅಖಿಲ ಭಾರತ ಸರಾಫಾ ಸಂಘದ ಮಾಹಿತಿ ಪ್ರಕಾರ, ಶೇ.99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 3,200 ರೂ. ಇಳಿಕೆಯಾಗಿದ್ದು, 1,42,000 ರೂ.ಗೆ ತಲುಪಿದೆ. ಇದಕ್ಕೂ ಮುನ್ನ ಕಳೆದ ಡಿಸೆಂಬರ್ 26ರಂದು 10 ಗ್ರಾಂ ಚಿನ್ನದ ಬೆಲೆ 1,42,300 ರೂ. ಇತ್ತು.
ಇನ್ನು ಬೆಳ್ಳಿ ಬೆಲೆಯೂ ಇಳಿಕೆಯ ಹಾದಿ ಮುಂದುವರಿಸಿದ್ದು, ಪ್ರತಿ ಕೆ.ಜಿಗೆ 4,200 ರೂ. ಕಡಿಮೆಯಾಗಿ 1,86,000 ರೂ.ಗೆ ತಲುಪಿದೆ. 2025ರ ಡಿಸೆಂಬರ್ 8ರಂದು ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 1,85,000 ರೂ. ಇದ್ದು, ಇದೇ ಮಟ್ಟದಲ್ಲಿ ಕೊನೆಯದಾಗಿ ವಹಿವಾಟು ನಡೆಸಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಭಾರಿ ಕುಸಿತ ಕಂಡಿದೆ. ಮೊನ್ನೆ ಶುಕ್ರವಾರ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 145.84 ಡಾಲರ್ ಅಥವಾ ಶೇ.4ರಷ್ಟು ಕುಸಿದು 3,875.55 ಡಾಲರ್‌ಗೆ ತಲುಪಿದೆ. ಇದು ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲೇ ದಾಖಲಾದ ಕನಿಷ್ಠ ಮಟ್ಟವಾಗಿದೆ. ಸ್ಪಾಟ್ ಬೆಳ್ಳಿ ಬೆಲೆಯೂ ಪ್ರತಿ ಔನ್ಸ್‌ಗೆ 3.04 ಡಾಲರ್ ಅಥವಾ ಶೇ.6ರಷ್ಟು ಇಳಿಕೆಯಾಗಿ 49.12 ಡಾಲರ್‌ಗೆ ತಲುಪಿದೆ.
ಬ್ರಿಕ್‌ವರ್ಕ್ ರೇಟಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ರಾಜೀವ್ ಶರಣ್ ಅವರ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತ ಕಂಡುಬಂದಿದೆ. ಹೂಡಿಕೆದಾರರು ಲಾಭಾಂಶವನ್ನು ನಗದೀಕರಿಸಿದ್ದು, ಅಮೆರಿಕದ ಡಾಲರ್ ಮೌಲ್ಯ ಬಲಗೊಂಡಿರುವುದು, ಬಾಂಡ್‌ಗಳ ಇಳುವರಿ ಹೆಚ್ಚಳ ಹಾಗೂ ಬಡ್ಡಿದರ ಕಡಿತದ ನಿರೀಕ್ಷೆಗಳು ಕ್ಷೀಣಿಸಿರುವುದು ಅಮೂಲ್ಯ ಲೋಹಗಳ ಬೆಲೆ ಇಳಿಕೆಗೆ ಕಾರಣವಾಗಿವೆ.
ಈ ಹಿನ್ನೆಲೆಯಲ್ಲಿ ಇಂದು ನವೆಂಬರ್ 1ರ ಭಾನುವಾರದಂದು ದೇಶದ ಪ್ರಮುಖ ನಗರಗಳಾದ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬೈನಲ್ಲಿ 18, 22 ಹಾಗೂ 24 ಕ್ಯಾರೆಟ್ ಚಿನ್ನ ಮತ್ತು 999 ಶುದ್ಧತೆಯ ಬೆಳ್ಳಿಯ ದರಗಳು ಈ ಕೆಳಗಿನಂತಿವೆ.
ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,38,590 ರೂ. ಇದೆ. 22 ಕ್ಯಾರೆಟ್ ಚಿನ್ನದ ಬೆಲೆ 1,27,041 ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ 1,03,943 ರೂ. ಇದೆ.
ಇಂದು ನವೆಂಬರ್ 1ರಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,38,700 ರೂ. ಇದೆ. 22 ಕ್ಯಾರೆಟ್ ಚಿನ್ನದ ಬೆಲೆ 1,27,142 ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ 1,04,025 ರೂ. ಇದೆ.
ಬೆಂಗಳೂರಿನಲ್ಲಿ 999 ಶುದ್ಧತೆಯ ಬೆಳ್ಳಿಯ ಬೆಲೆ ಪ್ರತಿ ಕೆ.ಜಿಗೆ 1,79,260 ರೂ. ಇದೆ.
ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,38,400 ರೂ. ಇದೆ. 22 ಕ್ಯಾರೆಟ್ ಚಿನ್ನದ ಬೆಲೆ 1,26,867 ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ 1,03,800 ರೂ. ಇದೆ.
ಇಲ್ಲಿ 999 ಶುದ್ಧತೆಯ ಬೆಳ್ಳಿಯ ಬೆಲೆ ಪ್ರತಿ ಕೆ.ಜಿಗೆ 1,78,880 ರೂ. ಇದೆ.
ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,38,990 ರೂ. ಇದೆ. 22 ಕ್ಯಾರೆಟ್ ಚಿನ್ನದ ಬೆಲೆ 1,27,408 ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ 1,04,243 ರೂ. ಇದೆ.
ಚೆನ್ನೈನಲ್ಲಿ 999 ಶುದ್ಧತೆಯ ಬೆಳ್ಳಿಯ ಬೆಲೆ ಪ್ರತಿ ಕೆ.ಜಿಗೆ 1,79,640 ರೂ. ಇದೆ.
ಹೈದರಾಬಾದ್‌ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,38,810 ರೂ. ಇದೆ. 22 ಕ್ಯಾರೆಟ್ ಚಿನ್ನದ ಬೆಲೆ 1,27,243 ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ 1,04,108 ರೂ. ಇದೆ.
ಇಲ್ಲಿ 999 ಶುದ್ಧತೆಯ ಬೆಳ್ಳಿಯ ಬೆಲೆ ಪ್ರತಿ ಕೆ.ಜಿಗೆ 1,79,400 ರೂ. ಇದೆ.
ಅಹಮದಾಬಾದ್‌ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,38,770 ರೂ. ಇದೆ. 22 ಕ್ಯಾರೆಟ್ ಚಿನ್ನದ ಬೆಲೆ 1,27,206 ರೂ. ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ 1,04,078 ರೂ. ಇದೆ.
ಇಲ್ಲಿ 999 ಶುದ್ಧತೆಯ ಬೆಳ್ಳಿಯ ಬೆಲೆ ಪ್ರತಿ ಕೆ.ಜಿಗೆ 1,79,350 ರೂ. ಇದೆ.