ಇಂಟರ್ನೆಟ್ ಬೇಡ, ಕೇವಲ ಕರೆ ಸಾಕು ಎನ್ನುವವರಿಗೆ ಬಂಪರ್; Jio, Airtel ಹಾಗೂ Viನಿಂದ ಹೊಸ ವಾಯ್ಸ್ ಪ್ಲಾನ್ ಲಾಂಚ್!

TRAI ನೀಡಿರುವ ಕಡ್ಡಾಯ ನಿರ್ದೇಶನದನ್ವಯ, ಜಿಯೋ, ಏರ್‌ಟೆಲ್ ಮತ್ತು ವಿ ಕಂಪನಿಗಳು ಇಂಟರ್ನೆಟ್/ಮೊಬೈಲ್ ಡೇಟಾ ಇಲ್ಲದ, ಕೇವಲ ಅನಿಯಮಿತ ಧ್ವನಿ ಕರೆಗಳು ಮತ್ತು ಎಸ್‌ಎಂಎಸ್ ಸೌಲಭ್ಯವಿರುವ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಅಧಿಕೃತವಾಗಿ ಪ್ರಾರಂಭಿಸಿವೆ. ಆ ಕುರಿತ ವರದಿ ಇಲ್ಲಿದೆ:
Jio, Airtel, and Vi Launch Low-Cost Recharge Packs Without Internet Data for Feature Phone Users
Jio, Airtel ಹಾಗೂ Viನಿಂದ ಹೊಸ ವಾಯ್ಸ್ ಪ್ಲಾನ್ ಲಾಂಚ್!AI Image
Updated on: 

ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಆದೇಶದ ಬೆನ್ನಲ್ಲೇ, ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (Vi) ಕಂಪನಿಗಳು ಇಂಟರ್ನೆಟ್ ಡೇಟಾ ಇಲ್ಲದ, ಕೇವಲ ಧ್ವನಿ ಕರೆ ಮತ್ತು ಎಸ್‌ಎಂಎಸ್‌ಗೆ ಸೀಮಿತವಾದ ವಾಯ್ಸ್ ಓನ್ಲಿ ಪ್ರಿಪೇಡ್ ಯೋಜನೆಗಳನ್ನು ಅಧಿಕೃತವಾಗಿ ಪರಿಚಯಿಸಿವೆ. ಅದರಂತೆ, ಕೇವಲ ಕರೆ ಮಾಡಲು ಮಾತ್ರ ಮೊಬೈಲ್ ಬಳಸುವ ಹಿರಿಯ ನಾಗರಿಕರಿಗೆ, ಬೇಸಿಕ್ ಕೀಪ್ಯಾಡ್ ಫೋನ್ ಹೊಂದಿರುವವರಿಗೆ ಮತ್ತು ತಮ್ಮ ಎರಡನೇ ಸಿಮ್ ಕಾರ್ಡ್ ಅನ್ನು ಕಡಿಮೆ ಖರ್ಚಿನಲ್ಲಿ ಆಕ್ಟಿವ್ ಆಗಿ ಇಟ್ಟುಕೊಳ್ಳಲು ಬಯಸುವ ಗ್ರಾಹಕರಿಗೆ ಈ ಯೋಜನೆಗಳು ಅತ್ಯಂತ ಸೂಕ್ತವಾಗಿವೆ. ಆ ಕುರಿತ ವರದಿ ಇಲ್ಲಿದೆ:

ರಿಲಯನ್ಸ್ ಜಿಯೋ ವಾಯ್ಸ್ ಪ್ಲಾನ್‌ಗಳು:

ಜಿಯೋ ತನ್ನ ಬಳಕೆದಾರರಿಗೆ ಅತಿ ಕಡಿಮೆ ಬೆಲೆಯಿಂದ ಹಿಡಿದು ದೀರ್ಘಾವಧಿಯವರೆಗಿನ ಹಲವು ಆಯ್ಕೆಗಳನ್ನು ನೀಡಿದೆ:

  • ₹147 ಪ್ಲಾನ್: 22 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆಗಳು ಮತ್ತು ಒಟ್ಟು 300 SMS.

  • ₹177 ಪ್ಲಾನ್: 28 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆಗಳು ಮತ್ತು 300 SMS.

  • ₹196 ಪ್ಲಾನ್: 30 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆಗಳು ಮತ್ತು 300 SMS.

  • ₹197 ಪ್ಲಾನ್: ಒಂದು ಪೂರ್ತಿ ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿ (ಉದಾಹರಣೆಗೆ ನವೆಂಬರ್ 5 ರಂದು ರೀಚಾರ್ಜ್ ಮಾಡಿದರೆ ಡಿಸೆಂಬರ್ 5 ರವರೆಗೆ ಇರುತ್ತದೆ).

  • ದೀರ್ಘಾವಧಿ ಪ್ಲಾನ್‌ಗಳು: ₹448 (84 ದಿನಗಳು) ಮತ್ತು ₹1,748 (336 ದಿನಗಳ ವ್ಯಾಲಿಡಿಟಿ) ಯೋಜನೆಗಳೂ ಲಭ್ಯವಿವೆ.

Jio, Airtel, and Vi Launch Low-Cost Recharge Packs Without Internet Data for Feature Phone Users
ಡೇಟಾ ಬೇಡ, ಕೇವಲ ಕಾಲ್ ಮಾಡೋಕೆ ಮಾತ್ರ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ತನ್ನಿ: ಜಿಯೋ, ಏರ್‌ಟೆಲ್‌ಗೆ ಟ್ರಾಯ್ ಖಡಕ್ ಆದೇಶ

ಭಾರ್ತಿ ಏರ್‌ಟೆಲ್ ವಾಯ್ಸ್ ಪ್ಲಾನ್‌ಗಳು:

ಏರ್‌ಟೆಲ್ ಬಿಡುಗಡೆ ಮಾಡಿರುವ ಯೋಜನೆಗಳಲ್ಲಿ ಅನಿಯಮಿತ ಕರೆಗಳು, 300 SMS ಜೊತೆಗೆ ಉಚಿತವಾಗಿ ಹಲೋ ಟ್ಯೂನ್ಸ್ ಸೌಲಭ್ಯವೂ ಸಿಗಲಿದೆ:

  • ₹185 ಪ್ಲಾನ್: 28 ದಿನಗಳ ವ್ಯಾಲಿಡಿಟಿ.

  • ₹203 ಪ್ಲಾನ್: 30 ದಿನಗಳ ವ್ಯಾಲಿಡಿಟಿ.

  • ₹206 ಪ್ಲಾನ್: ಒಂದು ಪೂರ್ತಿ ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿ.

  • ದೀರ್ಘಾವಧಿ ಪ್ಲಾನ್‌ಗಳು: ₹469 (84 ದಿನಗಳು) ಮತ್ತು ₹1,849 (365 ದಿನಗಳು).

ವೊಡಾಫೋನ್ ಐಡಿಯಾ (Vi) ವಾಯ್ಸ್ ಪ್ಲಾನ್‌ಗಳು:

Vi ಕಂಪನಿಯು ಸಹ ಏರ್‌ಟೆಲ್‌ಗೆ ತಕ್ಕ ಪೈಪೋಟಿ ನೀಡುವಂತೆ ಯೋಜನೆಗಳನ್ನು ರೂಪಿಸಿದೆ:

  • ₹179 ಪ್ಲಾನ್: 25 ದಿನಗಳ ವ್ಯಾಲಿಡಿಟಿ.

  • ₹185 ಪ್ಲಾನ್: 28 ದಿನಗಳ ವ್ಯಾಲಿಡಿಟಿ.

  • ₹203 ಪ್ಲಾನ್: 30 ದಿನಗಳ ವ್ಯಾಲಿಡಿಟಿ.

  • ₹206 ಪ್ಲಾನ್: ಒಂದು ಪೂರ್ತಿ ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿ.

  • ದೀರ್ಘಾವಧಿ ಪ್ಲಾನ್‌ಗಳು: ₹470 (84 ದಿನಗಳು) ಮತ್ತು ₹1,849 (365 ದಿನಗಳು)

ಒಂದು ವೇಳೆ ಈ ಪ್ಲಾನ್ ಮಾಡಿಸಿದ ನಂತರ ನಿಮಗೆ ಎಂದಾದರೂ ತುರ್ತಾಗಿ ಇಂಟರ್ನೆಟ್ ಬೇಕಿದ್ದರೆ, ನೀವು ಪ್ರತ್ಯೇಕವಾಗಿ ₹55 ಕ್ಕೆ 3GB ಅಥವಾ ₹100 ಕ್ಕೆ 6GB ಯಂತಹ ಡೇಟಾ ಆಡ್-ಆನ್ ಪ್ಯಾಕ್‌ಗಳನ್ನು ರೀಚಾರ್ಜ್ ಮಾಡಿಕೊಳ್ಳಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X