ಚಿನ್ನದ ಬೆಲೆ ಭಾರೀ ಕುಸಿತ: ಕಳೆದ 10 ತಿಂಗಳಲ್ಲಿ ₹42 ಸಾವಿರ ಇಳಿಕೆ; ಇನ್ನೂ ಕಮ್ಮಿ ಆಗುತ್ತಾ ಬಂಗಾರ?

10 ಗ್ರಾಂ ಚಿನ್ನದ ಬೆಲೆ 1,400 ರೂಪಾಯಿಗಳಷ್ಟು ಇಳಿಕೆಯಾಗಿ 1.38 ಲಕ್ಷ ರೂಪಾಯಿಗೆ ತಲುಪಿದೆ. ಅದೇ ರೀತಿ, ಬೆಳ್ಳಿ ಬೆಲೆಯು ಶೇಕಡಾ 5ರಷ್ಟು ಕುಸಿದು, ಪ್ರತಿ ಕೆಜಿಗೆ 1.69 ಲಕ್ಷ ರೂಪಾಯಿ ಇಳಿಕೆಯೊಂದಿಗೆ ಕಳೆದ ಒಂದು ವರ್ಷದ ಕನಿಷ್ಠ ಮಟ್ಟವನ್ನು ತಲುಪಿದೆ.
Gold sinks to Rs 1.38 lakh/10gm; silver at one-year low
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ಮಂದ ಸ್ಥಿತಿ ಮತ್ತು ರೂಪಾಯಿಯ ಮೌಲ್ಯ ಬಲಗೊಂಡಿರುವ ಹಿನ್ನೆಲೆಯಲ್ಲಿ, ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಸತತ ಆರನೇ ಬಾರಿ ಮಹಾ ಕುಸಿತ ಕಂಡಿದೆ.

10 ಗ್ರಾಂ ಚಿನ್ನದ ಬೆಲೆ 1,400 ರೂಪಾಯಿಗಳಷ್ಟು ಇಳಿಕೆಯಾಗಿ 1.38 ಲಕ್ಷ ರೂಪಾಯಿಗೆ ತಲುಪಿದೆ. ಅದೇ ರೀತಿ, ಬೆಳ್ಳಿ ಬೆಲೆಯು ಶೇಕಡಾ 5ರಷ್ಟು ಕುಸಿದು, ಪ್ರತಿ ಕೆಜಿಗೆ 1.69 ಲಕ್ಷ ರೂಪಾಯಿ ಇಳಿಕೆಯೊಂದಿಗೆ ಕಳೆದ ಒಂದು ವರ್ಷದ ಕನಿಷ್ಠ ಮಟ್ಟವನ್ನು ತಲುಪಿದೆ.

ಈ ವರ್ಷದ ಆರಂಭದಲ್ಲಿ 10 ಗ್ರಾಂಗೆ 1.80 ಲಕ್ಷ ರೂಪಾಯಿಗೆ ತಲುಪಿದ್ದ ಚಿನ್ನದ ಬೆಲೆ ಈಗ ಸುಮಾರು 1.38 ಲಕ್ಷಕ್ಕೆ ಕುಸಿದಿದೆ. ಅಂದರೆ, ಸುಮಾರು ಶೇಕಡಾ 23 ರಷ್ಟು ಅಂದರೆ 42 ಸಾವಿರ ರೂ. ಇಳಿಕೆಯಾಗಿದೆ. ಅದೇ ರೀತಿ, ಪ್ರತಿ ಕೆಜಿಗೆ 4.20 ಲಕ್ಷ ರೂಪಾಯಿ ಗರಿಷ್ಠ ಮಟ್ಟಕ್ಕೆ ಏರಿದ್ದ ಬೆಳ್ಳಿ ಈಗ 1.69 ಲಕ್ಷ ರೂಪಾಯಿಗೆ ವಹಿವಾಟು ನಡೆಸುತ್ತಿದೆ.

Gold sinks to Rs 1.38 lakh/10gm; silver at one-year low
ಆಭರಣ ಪ್ರಿಯರಿಗೆ ಸಿಹಿಸುದ್ದಿ: ಚಿನ್ನದ ಬೆಲೆಯಲ್ಲಿ ಕುಸಿತ; ಒಂದೇ ದಿನದಲ್ಲಿ ಬೆಳ್ಳಿಯ ಬೆಲೆ 5 ಸಾವಿರ ರೂ ಇಳಿಕೆ!

ಮಂಗಳವಾರ ವಹಿವಾಟಿನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್​​ಗೆ 3,865 ಡಾಲರ್​​ ಮತ್ತು ಬೆಳ್ಳಿ ಪ್ರತಿ ಔನ್ಸ್​​ಗೆ 47.4 ಡಾಲರ್​​ ಇತ್ತು. ಇದು ಕಳೆದ 13-14 ತಿಂಗಳ ಕನಿಷ್ಠ ಮಟ್ಟವಾಗಿದೆ.

ನವೆಂಬರ್ 9ರಿಂದೀಚೆಗೆ ಚಿನ್ನದ ಬೆಲೆಯಲ್ಲಿ 8,300 ರೂಪಾಯಿ ಅಥವಾ ಸುಮಾರು ಶೇಕಡಾ 6ರಷ್ಟು ಇಳಿಕೆಯಾಗಿದೆ.

ಇನ್ನೂ ಕಮ್ಮಿ ಆಗುತ್ತಾ ಬಂಗಾರ?

ಈಗಿನ ಪರಿಸ್ಥಿತಿ ನೋಡಿದ್ರೆ ಬಂಗಾರ ಮತ್ತು ಬೆಳ್ಳಿಯ ಬೆಲೆ ಇನ್ನೂ ಕಮ್ಮಿ ಆಗುವ ಸಾಧ್ಯತೆ ಇದೆ. ಕಳೆದು ಒಂದು ತಿಂಗಳಿಂದ ನೀವು ನೋಡಿರಬಹುದು, ಬಂಗಾರದ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ದೀಪಾವಳಿ ಹಬ್ಬದಲ್ಲೂ ಕೂಡ ಚಿನ್ನದ ಬೆಲೆ ಏರಿಕೆಯಾಗಿಲ್ಲ, ಇದು ಜನರಿಗೆ ಸಿಹಿ ಸುದ್ದಿಯಾದ್ರೆ, ಹೂಡಿಕೆದಾರರಿಗೆ ಸಂಕಷ್ಟ. ಹೌದು.. ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 70 ಪರ್ಸೆಂಟ್‌ಗಿಂತಲೂ ಹೆಚ್ಚು ರಿಟರ್ನ್ಸ್ ಕೊಟ್ಟ ಚಿನ್ನ, ಇವತ್ತು ಕ್ರಿಟಿಕಲ್‌ ಸ್ಥಿತಿಗೆ ಬಂದು ನಿಂತಿದೆ. ಈಗ ಹೂಡಿಕೆದಾರರಿಗೆ ದೊಡ್ಡ ಗೊಂದಲ ಶುರುವಾಗಿದೆ.

2027ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1.31 ಲಕ್ಷದಿಂದ 1.32 ಲಕ್ಷ ರೂಪಾಯಿ ಮಟ್ಟದಲ್ಲಿ ವಹಿವಾಟು ನಡೆಸಬಹುದು. ಬೆಳ್ಳಿ 1.60 ರಿಂದ 1.80 ಲಕ್ಷ ರೂಪಾಯಿ ನಡುವೆ ಇರಬಹುದು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X