SBIನಲ್ಲಿ ಬೃಹತ್ ನೇಮಕಾತಿ; 1,538 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ದೇಶದ ಅತಿ ದೊಡ್ಡ ಬ್ಯಾಂಕ್

ಅದೆಷ್ಟೋ ಜನರಿಗೆ ಬ್ಯಾಂಕ್ ಕೆಲಸಬೇಕು, ಆದ್ರೆ ಕಾಮರ್ಸ್ ಸಂಬಂಧಿತ ಪದವಿ ಇಲ್ಲ! ಹೀಗೆ ಅನ್ನೋರಿಗೆ SBI ಅತಿ ದೊಡ್ಡ ಗುಡ್ ನ್ಯೂಸ್ ಕೊಟ್ಟಿದೆ! ಹೌದು, ತನ್ನ ಕ್ಲೆರಿಕಲ್ ಕ್ಯಾಡರ್‌ನಲ್ಲಿ ಖಾಲಿ ಇರುವ ಒಟ್ಟು 1,538 ಜೂನಿಯರ್ ಅಸೋಸಿಯೇಟ್ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗಾಗಿ SBI ಅರ್ಜಿ ಆಹ್ವಾನಿಸಿದೆ.
SBI Recruitment
ಎಸ್‌ಬಿಐ ನೇಮಕಾತಿ
Updated on

SBI Recruitment 2026: ಅದೆಷ್ಟೋ ಜನರಿಗೆ ಬ್ಯಾಂಕ್ ಕೆಲಸಬೇಕು, ಆದ್ರೆ ಕಾಮರ್ಸ್ ಸಂಬಂಧಿತ ಪದವಿ ಇಲ್ಲ! ಹೀಗೆ, ಅನ್ನೋರಿಗೆ ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅತಿ ದೊಡ್ಡ ಗುಡ್ ನ್ಯೂಸ್ ಕೊಟ್ಟಿದೆ! ಹೌದು, ತನ್ನ ಕ್ಲೆರಿಕಲ್ ಕ್ಯಾಡರ್‌ನಲ್ಲಿ ಖಾಲಿ ಇರುವ ಒಟ್ಟು 1,538 ಜೂನಿಯರ್ ಅಸೋಸಿಯೇಟ್ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗಾಗಿ SBI ಬೃಹತ್ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಯ ವಿವರಗಳು:

  • ಹುದ್ದೆಯ ಹೆಸರು: ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್).

  • ಒಟ್ಟು ಹುದ್ದೆಗಳು: 1,538 (SC: 207, ST: 1,219, OBC: 112).

  • ಕರ್ನಾಟಕದ ಹುದ್ದೆಗಳು: 120 (SC: 85, ST: 35).

ಅರ್ಹತೆ

  • ಶೈಕ್ಷಣಿಕ ಅರ್ಹತೆ

    • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಶಿಸ್ತಿನಲ್ಲಿ ಪದವಿ (Graduation) ಪಾಸ್ ಆಗಿರಬೇಕು.

    • ಪದವಿ ಕೊನೆಯ ವರ್ಷದ ಸೆಮಿಸ್ಟರ್‌ನಲ್ಲಿರುವ ವಿದ್ಯಾರ್ಥಿಗಳೂ ಸಹ ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಬಹುದು (ಆದರೆ ಡಿಸೆಂಬರ್ 31, 2026 ರೊಳಗೆ ಉತ್ತೀರ್ಣರಾದ ದಾಖಲೆ ಸಲ್ಲಿಸಬೇಕು).

    • ಅಭ್ಯರ್ಥಿಗಳಿಗೆ ಸ್ಥಳೀಯ ಭಾಷೆಯ (ಕರ್ನಾಟಕಕ್ಕೆ ಕನ್ನಡ) ಜ್ಞಾನ (ಓದಲು, ಬರೆಯಲು, ಮಾತನಾಡಲು) ಕಡ್ಡಾಯವಾಗಿದೆ.

  • ವಯೋಮಿತಿ (1 ಏಪ್ರಿಲ್ 2026 ಕ್ಕೆ ಅನ್ವಯಿಸುವಂತೆ): ಕನಿಷ್ಠ ವಯಸ್ಸು: 20 ವರ್ಷಗಳು, ಗರಿಷ್ಠ ವಯಸ್ಸು: 28 ವರ್ಷಗಳು. (ಸರ್ಕಾರದ ನಿಯಮಗಳ ಪ್ರಕಾರ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ).

  • ಗಮನಿಸಿ: ಇದು ಬ್ಯಾಕ್‌ಲಾಗ್ ಹುದ್ದೆಗಳಾಗಿದ್ದರಿಂದ ಕೇವಲ SC, ST ಮತ್ತು OBC ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: ಆಗಸ್ಟ್ 7, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 27, 2026

  • ಪೂರ್ವಭಾವಿ ಪರೀಕ್ಷೆ: ಸೆಪ್ಟೆಂಬರ್ 2026 (ತಾತ್ಕಾಲಿಕ)

  • ಮುಖ್ಯ ಪರೀಕ್ಷೆ: ಅಕ್ಟೋಬರ್ / ನವೆಂಬರ್ 2026 (ತಾತ್ಕಾಲಿಕ)

SBI Recruitment
ಪದವೀಧರರಿಗೆ ಗುಡ್ ನ್ಯೂಸ್: 11 ಸಾವಿರ ಬ್ಯಾಂಕ್ ಕ್ಲರ್ಕ್ ಹುದ್ದೆಗಳಿಗೆ IBPS ಅರ್ಜಿ ಆಹ್ವಾನ; ಸಂಬಳ 65 ಸಾವಿರ ರೂ

ಅರ್ಜಿ ಶುಲ್ಕ:

  • OBC ಅಭ್ಯರ್ಥಿಗಳಿಗೆ: ₹750.

  • SC / ST / PwBD / ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ಇರುವುದಿಲ್ಲ (ಉಚಿತ).

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು ಎಸ್‌ಬಿಐ ಅಧಿಕೃತ ವೆಬ್‌ಸೈಟ್‌ನ SBI Current Openings Section ಗೆ ಭೇಟಿ ನೀಡಿ.

  • "Special Recruitment Drive for Junior Associates 2026" ಲಿಂಕ್ ಕ್ಲಿಕ್ ಮಾಡಿ.

  • "Click here for New Registration" ಆಯ್ಕೆ ಮಾಡಿ, ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನೀಡಿ ನೋಂದಾಯಿಸಿಕೊಳ್ಳಿ.

  • ನಂತರ ಲಾಗಿನ್ ಆಗಿ ನಿಮ್ಮ ವೈಯಕ್ತಿಕ, ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ ಮತ್ತು ಅರ್ಹ ವಲಯ/ರಾಜ್ಯವನ್ನು ಆಯ್ಕೆ ಮಾಡಿ.

  • ನಿಗದಿತ ನಮೂನೆಯಲ್ಲಿ ಫೋಟೋ, ಸಹಿ, ಎಡಗೈ ಹೆಬ್ಬೆರಳಿನ ಗುರುತು ಮತ್ತು ಕೈಬರಹದ ಘೋಷಣೆಯನ್ನು (Handwritten Declaration) ಅಪ್‌ಲೋಡ್ ಮಾಡಿ.

  • ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ (ಅನ್ವಯಿಸಿದರೆ) ಅರ್ಜಿಯನ್ನು ಸಬ್ಮಿಟ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

ಹೆಚ್ಚಿನ ವಿವರಗಳಿಗಾಗಿ ಮತ್ತು ಅಧಿಕೃತ ಪ್ರಕಟಣೆಯನ್ನು ಡೌನ್‌ಲೋಡ್ ಮಾಡಲು SBI Detailed Notification PDF ಅನ್ನು ಪರಿಶೀಲಿಸಬಹುದು.

SBI Recruitment
KPSCಯಿಂದ ಭರ್ಜರಿ ಉದ್ಯೋಗಾವಕಾಶ; 319 KAS ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸರ್ಕಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com