ಪದವೀಧರರಿಗೆ ಸುವರ್ಣ ಅವಕಾಶ; ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಿಂದ 250 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಇಲ್ಲಿದೆ ಸೂಕ್ತ ಉದ್ಯೋಗಾವಕಾಶ: ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 250 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, 85,000 ರೂ.ವರೆಗೂ ಸಂಬಳ ಸಿಗುವ ಸರ್ಕಾರಿ ಬ್ಯಾಂಕ್ ಕೆಲಸಕ್ಕೆ ಇಂದೇ ಅರ್ಜಿ ಹಾಕಿ!
Jobs (file pic)
ಉದ್ಯೋಗ (ಸಾಂಕೇತಿಕ ಚಿತ್ರ)online desk
Updated on

IOB Recruitment 2026: ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಭಾರತದ ಪ್ರಮುಖ ಸರ್ಕಾರಿ ಬ್ಯಾಂಕ್‌ಗಳಲ್ಲಿ ಒಂದಾದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಭಾರಿ ಸಂಖ್ಯೆಯ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಅದರಲ್ಲೂ, ಕರ್ನಾಟಕದಲ್ಲೇ ಸರ್ಕಾರಿ ಮಾದರಿಯ ಬ್ಯಾಂಕ್ ಕೆಲಸ ಗಿಟ್ಟಿಸಿಕೊಳ್ಳಲು ಕಾಯುತ್ತಿರುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ಹುದ್ದೆಯ ಹೆಸರು: ಜೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್ ಸ್ಕೇಲ್-1- ಲೋಕಲ್ ಬ್ಯಾಂಕ್ ಆಫೀಸರ್

  • ಒಟ್ಟು ಹುದ್ದೆಗಳು: 250. ಈ ಪೈಕಿ ಕರ್ನಾಟಕಕ್ಕೆ 50 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಕನ್ನಡ ಗೊತ್ತಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

  • ವಿಶೇಷ ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳನ್ನು ಅವರು ಅರ್ಜಿ ಸಲ್ಲಿಸಿದ ರಾಜ್ಯದಲ್ಲೇ ನಿಯೋಜಿಸಲಾಗುವುದು. ಜೊತೆಗೆ ಮೊದಲ 12 ವರ್ಷಗಳ ಕಾಲ ಅದೇ ರಾಜ್ಯದಲ್ಲಿ ಕೆಲಸ ಮಾಡಬೇಕಾಗುತ್ತದೆ.

ಅರ್ಹತೆ:

  • ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಸ್ಥಳೀಯ ಭಾಷಾ ಪ್ರಾವೀಣ್ಯತೆ ಅಂದ್ರೆ 10ನೇ ಅಥವಾ 12ನೇ ತರಗತಿಯಲ್ಲಿ ಆ ಭಾಷೆಯನ್ನು ಒಂದು ವಿಷಯವಾಗಿ ವ್ಯಾಸಂಗ ಮಾಡದಿರುವ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷಾ ಪರೀಕ್ಷೆ (LPT) ನಡೆಸಲಾಗುತ್ತದೆ. ಇದರಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.

  • ವಯೋಮಿತಿ (01.08.2026 ಕ್ಕೆ ಅನ್ವಯಿಸುವಂತೆ): ಕನಿಷ್ಠ ವಯಸ್ಸು: 20 ವರ್ಷಗಳು ಹಾಗೂ ಗರಿಷ್ಠ ವಯಸ್ಸು: 30 ವರ್ಷಗಳು (SC / ST: 5 ವರ್ಷ, OBC (Non-Creamy Layer): 3 ವರ್ಷ, ಮಾಜಿ ಸೈನಿಕರು: 5 ವರ್ಷ, ವಿಕಲಚೇತನರು 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ)

ಸಂಬಳ:

ಆಯ್ಕೆಯಾದ ಸ್ಥಳೀಯ ಬ್ಯಾಂಕ್ ಅಧಿಕಾರಿಗಳಿಗೆ ಆರಂಭಿಕ ಮೂಲ ವೇತನ ತಿಂಗಳಿಗೆ ₹48,480 ಇರಲಿದ್ದು, ಬ್ಯಾಂಕಿಂಗ್ ನಿಯಮಾವಳಿಗಳ ಪ್ರಕಾರ ಇತರ ಭತ್ಯೆಗಳು ಸೇರಿ ಒಟ್ಟು ವೇತನವು ₹85,920 ವರೆಗೆ ಸಿಗಬಹುದು.

Jobs (file pic)
ಪ್ರಾಧ್ಯಾಪಕರಾಗುವ ಕನಸು ಕಂಡವರಿಗೆ ಗುಡ್ ನ್ಯೂಸ್; K-SETಗೆ ಅರ್ಜಿ ಆಹ್ವಾನಿಸಿದ KEA

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: ಆಗಸ್ಟ್ 8, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 24, 2026

ಅರ್ಜಿ ಶುಲ್ಕ

  • ಎಸ್‌ಸಿ/ಎಸ್‌ಟಿ/ಅಂಗವಿಕಲ (PwBD) ಅಭ್ಯರ್ಥಿಗಳಿಗೆ: ₹175

  • ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ₹850

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಮೂರು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:

  • ಆನ್‌ಲೈನ್ ಲಿಖಿತ ಪರೀಕ್ಷೆ

  • ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT) (ಅನ್ವಯಿಸುವವರಿಗೆ ಮಾತ್ರ)

  • ವೈಯಕ್ತಿಕ ಸಂದರ್ಶನ.

ಸೇವಾ ಬಾಂಡ್: ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ 3 ವರ್ಷಗಳ ಕಾಲ ಸೇವೆ ಸಲ್ಲಿಸಲು ₹2,00,000/- (ಎರಡು ಲಕ್ಷ ರೂಪಾಯಿ) ಬಾಂಡ್ ಸಹಿ ಮಾಡಬೇಕಾಗುತ್ತದೆ.

Jobs (file pic)
ಪದವೀಧರರಿಗೆ ಗುಡ್ ನ್ಯೂಸ್: 11 ಸಾವಿರ ಬ್ಯಾಂಕ್ ಕ್ಲರ್ಕ್ ಹುದ್ದೆಗಳಿಗೆ IBPS ಅರ್ಜಿ ಆಹ್ವಾನ; ಸಂಬಳ 65 ಸಾವಿರ ರೂ

ಅರ್ಜಿ ಸಲ್ಲಿಸುವ ವಿಧಾನ:

  • ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ www.iob.bank.in ಗೆ ಭೇಟಿ ನೀಡಿ.

  • Careers ವಿಭಾಗದಲ್ಲಿ Recruitment of Local Bank Officers - 2026-27 ಲಿಂಕ್ ಕ್ಲಿಕ್ ಮಾಡಿ.

  • ನಿಮ್ಮ ಮೂಲ ವಿವರಗಳನ್ನು ನೀಡಿ Register Online ಮಾಡಿ.

  • ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಪಡೆದ ನಂತರ ಲಾಗಿನ್ ಆಗಿ ಅರ್ಜಿ ನಮೂದಿಸಿ.

  • ನಿಮ್ಮ ಇತ್ತೀಚಿನ ಭಾವಚಿತ್ರ, ಸಹಿ, ಎಡಗೈ ಹೆಬ್ಬೆರಳ ಗುರುತು ಮತ್ತು ಕೈಬರಹದ ಘೋಷಣೆ ಅಪ್‌ಲೋಡ್ ಮಾಡಿ.

  • ಅರ್ಜಿ ಶುಲ್ಕ ಪಾವತಿಸಿ, ಅರ್ಜಿ ಭರ್ತಿ ಪ್ರಕ್ರಿಯೆ ಪೂರ್ಣಗೊಳಿಸಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com