ಇಂಜಿನಿಯರಿಂಗ್ ಪದವಿಧರರಿಗೆ ಗುಡ್ ನ್ಯೂಸ್; ಕೇಂದ್ರ ಸರ್ಕಾರಿ ಸಂಸ್ಥೆ NTPC ಯಲ್ಲಿ ಬಂಪರ್ ಉದ್ಯೋಗಾವಕಾಶ, ಲಕ್ಷಗಳಲ್ಲಿ ವೇತನ

ಇಂಜಿನಿಯರಿಂಗ್ ಪದವಿಧರರಿಗೆ ಗುಡ್ ನ್ಯೂಸ್; ಭಾರತ ಸರ್ಕಾರದ ಸಾರ್ವಜನಿಕ ವಲಯದ ಪ್ರಮುಖ ಸಂಸ್ಥೆಯಾದ ಎನ್‌ಟಿಪಿಸಿ ಲಿಮಿಟೆಡ್ ಇಂಜಿನಿಯರಿಂಗ್ ವೃತ್ತಿಪರರಿಗಾಗಿ ಒಟ್ಟು 135 ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:
NTPC
ಎನ್‌ಟಿಪಿಸಿ ಲಿಮಿಟೆಡ್
Updated on

NTPC Recruitment 2026: ಇಂಜಿನಿಯರಿಂಗ್ ಪದವಿಧರರಿಗೆ ಗುಡ್ ನ್ಯೂಸ್; ಭಾರತ ಸರ್ಕಾರದ ಸಾರ್ವಜನಿಕ ವಲಯದ ಪ್ರಮುಖ ಸಂಸ್ಥೆಯಾದ ಎನ್‌ಟಿಪಿಸಿ ಲಿಮಿಟೆಡ್ (NTPC Limited) ಇಂಜಿನಿಯರಿಂಗ್ ವೃತ್ತಿಪರರಿಗಾಗಿ ಒಟ್ಟು 135 ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ವಿವಿಧ ಇಂಜಿನಿಯರಿಂಗ್ ವಿಭಾಗಗಳಲ್ಲಿ ಒಟ್ಟು 135 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ:

  • ಡೆಪ್ಯುಟಿ ಮ್ಯಾನೇಜರ್ (ಮೆಕ್ಯಾನಿಕಲ್ - Mechanical): 55 ಹುದ್ದೆಗಳು

  • ಡೆಪ್ಯುಟಿ ಮ್ಯಾನೇಜರ್ (ಎಲೆಕ್ಟ್ರಿಕಲ್ - Electrical): 40 ಹುದ್ದೆಗಳು

  • ಡೆಪ್ಯುಟಿ ಮ್ಯಾನೇಜರ್ (ಕಂಟ್ರೋಲ್ & ಇನ್ಸ್ಟ್ರುಮೆಂಟೇಶನ್ - C&I): 40 ಹುದ್ದೆಗಳು

ಅರ್ಹತೆ:

  • ವಿದ್ಯಾಭ್ಯಾಸ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪೂರ್ಣಾವಧಿ B.E / B.Tech ಪದವಿ ಹೊಂದಿರಬೇಕು.

  • ಕಾರ್ಯಾನುಭವ: ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ವಿದ್ಯುತ್ ವಲಯ ಅಥವಾ ಪ್ರಕ್ರಿಯೆ ಉದ್ಯಮದಲ್ಲಿ ಕನಿಷ್ಠ 10 ವರ್ಷಗಳ ಎಕ್ಸಿಕ್ಯೂಟಿವ್ ಅನುಭವ ಕಡ್ಡಾಯವಾಗಿದೆ.

  • ಸರ್ಕಾರಿ ನೌಕರರಿಗೆ: ಪ್ರಸ್ತುತ ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಎಕ್ಸಿಕ್ಯೂಟಿವ್ ಹುದ್ದೆಯಲ್ಲಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸಿರಬೇಕು ಮತ್ತು NOC ಸಲ್ಲಿಸಬೇಕು.

  • ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ವರ್ಷಗಳ ಒಳಗಿರಬೇಕು. (ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ಜಾತಿಗೆ ಸೇರಿದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ).

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ E4 ಗ್ರೇಡ್ ಅಡಿಯಲ್ಲಿ ತಿಂಗಳಿಗೆ ₹70,000 ರಿಂದ ₹2,00,000 ವರೆಗೆ ಮೂಲ ವೇತನ ಶ್ರೇಣಿ ಸಿಗಲಿದೆ. ಇದರೊಂದಿಗೆ DA, HRA, ವೈದ್ಯಕೀಯ ಸೌಲಭ್ಯಗಳು ಹಾಗೂ ಇತರೆ ಭತ್ಯೆಗಳು ಸೇರಿ ವಾರ್ಷಿಕ CTC ಅಂದಾಜು ₹18 ರಿಂದ ₹22 ಲಕ್ಷ ಇರಲಿದೆ.

NTPC
ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣ ಅವಕಾಶ; 233 ನರ್ಸಿಂಗ್, ಫಾರ್ಮಸಿ ಆಫೀಸರ್ ಹುದ್ದೆಗಳಿಗೆ KEA ಅರ್ಜಿ ಆಹ್ವಾನ

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ ಮತ್ತು EWS ಅಭ್ಯರ್ಥಿಗಳಿಗೆ ₹500 ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ, ವಿಕಲಚೇತನರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಹ ಅಭ್ಯರ್ಥಿಗಳು ಎನ್‌ಟಿಪಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಆಗಸ್ಟ್ 12, 2026 ರಿಂದ ಆಗಸ್ಟ್ 26, 2026 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಆಯ್ಕೆ ವಿಧಾನ:

ಬಂದಿರುವ ಅರ್ಜಿಗಳ ಶಾರ್ಟ್‌ಲಿಸ್ಟಿಂಗ್, ಕಂಪ್ಯೂಟರ್ ಆಧಾರಿತ ಪರೀಕ್ಷೆ (ಅವಶ್ಯಕತೆ ಇದ್ದಲ್ಲಿ), ವೈಯಕ್ತಿಕ ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ಮೂಲಕ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು:

  • ಎನ್‌ಟಿಪಿಸಿ ಅಧಿಕೃತ ಕೆರಿಯರ್ಸ್ ಪೋರ್ಟಲ್ ಆದ NTPC Careers Website ಅಥವಾ NTPC Official Site ಗೆ ಭೇಟಿ ನೀಡಿ.

  • ಹೋಮ್ ಪೇಜ್‌ನಲ್ಲಿರುವ 'Careers' ಟ್ಯಾಬ್ ಕ್ಲಿಕ್ ಮಾಡಿ, ಡೆಪ್ಯುಟಿ ಮ್ಯಾನೇಜರ್ ನೇಮಕಾತಿ ಜಾಹೀರಾತು (Advt No. 10/26) ಲಿಂಕ್ ಆಯ್ಕೆ ಮಾಡಿಕೊಳ್ಳಿ.

  • ನಿಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆ ಬಳಸಿ ನೋಂದಣಿ ಮಾಡಿಕೊಂಡು, ಆನ್‌ಲೈನ್ ಫಾರ್ಮ್ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಶುಲ್ಕ ಪಾವತಿಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com