

Belagavi DCC Bank Recruitment 2026: ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ ಯುವಕರಿಗೆ ಅದರಲ್ಲೂ, ಉತ್ತರ ಕರ್ನಾಟಕದ ಯುವಕರಿಗೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತವು (Belagavi DCC Bank) ಒಟ್ಟು 104 ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. SSLC ಪಾಸಾದವರಿಂದ ಹಿಡಿದು, ಪದವೀಧರರವರೆಗೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಗರಿಷ್ಠ ವೇತನ ₹1,15,150 ರವರೆಗೆ ಇರಲಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಯ ವಿವರ:
ದ್ವಿತೀಯ ದರ್ಜೆ ಗುಮಾಸ್ತರು: 83 ಹುದ್ದೆಗಳು
ಬಂದೂಕುಧಾರಿ: 1
ಸಿಪಾಯಿ: 20
ಒಟ್ಟು: 104
ಅರ್ಹತೆ:
ದ್ವಿತೀಯ ದರ್ಜೆ ಗುಮಾಸ್ತರು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ
ಬಂದೂಕುಧಾರಿ ಮತ್ತು ಸಿಪಾಯಿ: SSLC ಪಾಸಾಗಿದ್ದರೆ ಸಾಕು (ಗನ್‌ಮ್ಯಾನ್ ಹುದ್ದೆಗೆ ಮಾಜಿ ಸೈನಿಕರು ಹಾಗೂ ಗನ್ ಲೈಸೆನ್ಸ್ ಹೊಂದಿರುವವರಿಗೆ ಆದ್ಯತೆ)
ಎಲ್ಲಾ ಹುದ್ದೆಗಳಿಗೂ ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಡ್ಡಾಯವಾಗಿ ತಿಳಿದಿರಬೇಕು.
ವಯೋಮಿತಿ:
ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ (ಸರ್ಕಾರಿ ನಿಯಮಾವಳಿಗಳ ಪ್ರಕಾರ SC/ST ಹಾಗೂ Cat-1ಗೆ 5 ವರ್ಷ, ಇತರೆ OBC ವರ್ಗಕ್ಕೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ).
ಸಂಬಳ:
ದ್ವಿತೀಯ ದರ್ಜೆ ಗುಮಾಸ್ತರು: ₹53,150 ರಿಂದ ₹1,15,150
ಬಂದೂಕುಧಾರಿ: ₹42,650 ರಿಂದ ₹96,650
ಸಿಪಾಯಿ: ₹47,650 ರಿಂದ ₹1,05,650
ಅರ್ಜಿ ಶುಲ್ಕ:
SC/ST ಹಾಗೂ Cat-1: ₹500
ಇತರೆ ವರ್ಗಕ್ಕೆ: ₹1000
ಪ್ರಮುಖ ದಿನಾಂಕ:
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 27 ಜುಲೈ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಆಗಸ್ಟ್ 2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 27 ಆಗಸ್ಟ್ 2026
ನೇಮಕಾತಿ ಅಧಿಸೂಚನೆ ಲಿಂಕ್: