

B.E ಅಥವಾ B.Tech ಮುಗಿಸಿದ್ದೀರಾ? ಯೂನಿಫಾರ್ಮ್ ಹಾಕಿ ದೇಶ ಸೇವೆ ಮಾಡಬೇಕು ಅಂತ ಕನಸಿದೆಯಾ? ಹಾಗಾದ್ರೆ, ಭಾರತೀಯ ಸೇನೆ SSC-Techಗಾಗಿ ಅರ್ಜಿ ಆಹ್ವಾನಿಸಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಇಂಟರ್ವ್ಯೂ ಮೂಲಕ ಸೇನೆಗೆ ಸೇರುವ ನೇರ ಆಯ್ಕೆ; ಆ ಕುರಿತ ವರದಿ ಇಲ್ಲಿದೆ:
ಹುದ್ದೆಯ ವಿವರ:
ಒಟ್ಟು ಹುದ್ದೆಗಳು: 381 ಹುದ್ದೆಗಳು
ಸಿವಿಲ್ / ಬಿಲ್ಡಿಂಗ್ ಕನ್‌ಸ್ಟ್ರಕ್ಷನ್: 75 ಹುದ್ದೆಗಳು
ಮೆಕ್ಯಾನಿಕಲ್ / ಪ್ರೊಡಕ್ಷನ್ / ಆಟೋಮೊಬೈಲ್: 101 ಹುದ್ದೆಗಳು
ಎಲೆಕ್ಟ್ರಾನಿಕ್ಸ್ / ಟೆಲಿಕಾಂ / ಕಮ್ಯುನಿಕೇಷನ್: 64 ಹುದ್ದೆಗಳು
ಕಂಪ್ಯೂಟರ್ ಸೈನ್ಸ್ / ಐಟಿ / AI ಮತ್ತು ಡಾಟಾ ಸೈನ್ಸ್: 60 ಹುದ್ದೆಗಳು
ಎಲೆಕ್ಟ್ರಿಕಲ್ / ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್: 33 ಹುದ್ದೆಗಳು
ಇತರೆ ತಾಂತ್ರಿಕ ವಿಭಾಗಗಳು (Plastics, Remote Sensing, Metallurgy, etc.): 17 ಹುದ್ದೆಗಳು
ಅರ್ಹತೆ:
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಇ ಅಥವಾ ಬಿ.ಟೆಕ್ ಪದವಿ ಹೊಂದಿರಬೇಕು. (ಎಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ)
ವೈವಾಹಿಕ ಸ್ಥಿತಿ:
ಅವಿವಾಹಿತ ಪುರುಷ ಮತ್ತು ಅವಿವಾಹಿತ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
ವಯೋಮಿತಿ:
1 ಏಪ್ರಿಲ್ 2027 ಕ್ಕೆ ಅನ್ವಯಿಸುವಂತೆ 20 ರಿಂದ 27 ವರ್ಷಗಳು (ಅಂದರೆ, 1 ಏಪ್ರಿಲ್ 2000 ರಿಂದ 31 ಮಾರ್ಚ್ 2007 ರ ನಡುವೆ ಜನಿಸಿರಬೇಕು).
ಕನಿಷ್ಠ ಶಾರೀರಿಕ ಕ್ಷಮತೆ:
ಅಭ್ಯರ್ಥಿಗಳು ತರಬೇತಿ ಕೇಂದ್ರಕ್ಕೆ ಸೇರುವ ಮೊದಲು ಕೆಳಗಿನ ಶಾರೀರಿಕ ಸಾಮರ್ಥ್ಯಗಳನ್ನು ಹೊಂದಿರಬೇಕು:
2.4 ಕಿ.ಮೀ ಓಟ: 10 ನಿಮಿಷ 30 ಸೆಕೆಂಡುಗಳಲ್ಲಿ
ಪುಷ್-ಅಪ್ಸ್ (Push-ups): 40 ಬಾರಿಗೆ
ಪುಲ್-ಅಪ್ಸ್ (Pull-ups): 06
ಸಿಟ್-ಅಪ್ಸ್ (Sit-ups): 30
ಜೊತೆಗೆ ಸ್ವಿಮ್ಮಿಂಗ್
ಆಯ್ಕೆ ಪ್ರಕ್ರಿಯೆ:
ಅರ್ಜಿಗಳ ಶಾರ್ಟ್‌ಲಿಸ್ಟಿಂಗ್: ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿಯಲ್ಲಿ ಗಳಿಸಿದ ಅಂಕಗಳ (Cut-off %) ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
SSB ಸಂದರ್ಶನ: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಪ್ರಯಾಗ್‌ರಾಜ್, ಭೋಪಾಲ್, ಬೆಂಗಳೂರು ಅಥವಾ ಜಲಂಧರ್ ಕೇಂದ್ರಗಳಲ್ಲಿ 5 ದಿನಗಳ SSB ಸಂದರ್ಶನ ನಡೆಯುತ್ತದೆ.
ವೈದ್ಯಕೀಯ ತಪಾಸಣೆ ಮತ್ತು ಮೆರಿಟ್ ಪಟ್ಟಿ: SSB ಯಲ್ಲಿ ಆಯ್ಕೆಯಾದವರಿಗೆ ವೈದ್ಯಕೀಯ ತಪಾಸಣೆ ನಡೆಸಿ, ಅಂತಿಮ ಮೆರಿಟ್ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.
ಸಂಬಳ:
ತರಬೇತಿಯ ಸಮಯದಲ್ಲಿ ಸ್ಟೈಫಂಡ್: ₹56,100 (ಪ್ರತಿ ತಿಂಗಳು)
ಲೆಫ್ಟಿನೆಂಟ್ ಆಗಿ ನಿಯೋಜನೆಗೊಂಡ ನಂತರ: Level 10 ಅಡಿಯಲ್ಲಿ ₹56,100 ರಿಂದ ₹1,77,500 ಮೂಲ ವೇತನ + ₹15,500 ಪ್ರತಿ ತಿಂಗಳು ಮಿಲಿಟರಿ ಸರ್ವಿಸ್ ಪೇ ಹಾಗೂ ಇತರೆ ಭತ್ಯೆಗಳು ಸಿಗಲಿವೆ.
ಪ್ರಮುಖ ದಿನಾಂಕ:
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ:
ಪುರುಷರಿಗೆ: 9 ಜುಲೈ 2026 (ಮಧ್ಯಾಹ್ನ 3:00 ರಿಂದ)
ಮಹಿಳೆಯರಿಗೆ: 8 ಜುಲೈ 2026 (ಮಧ್ಯಾಹ್ನ 3:00 ರಿಂದ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಮಹಿಳೆಯರಿಗೆ: 6 ಆಗಸ್ಟ್ 2026 (ಮಧ್ಯಾಹ್ನ 3:00 ಗಂಟೆಯವರೆಗೆ)
ಪುರುಷರಿಗೆ: 7 ಆಗಸ್ಟ್ 2026 (ಮಧ್ಯಾಹ್ನ 3:00 ಗಂಟೆಯವರೆಗೆ)
ಎಸ್‌ಎಸ್‌ಬಿ (SSB) ಸಂದರ್ಶನ ಸಮಯ: ಅಕ್ಟೋಬರ್ ರಿಂದ ಡಿಸೆಂಬರ್ 2026
ತರಬೇತಿ ಪ್ರಾರಂಭ: ಏಪ್ರಿಲ್ 2027 (ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ - OTA, ಚೆನ್ನೈ)
ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್‌ಸೈಟ್ www.joinindianarmy.nic.in ಗೆ ಭೇಟಿ ನೀಡಿ, 'Officers Entry Apply/Login' ವಿಭಾಗದಲ್ಲಿ ಉಚಿತವಾಗಿ ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಬಹುದು.