

CPRI Recruitment: ಕೇಂದ್ರ ಸರ್ಕಾರದ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆಯು ಒಟ್ಟು 110 ವಿವಿಧ ಎಕ್ಸಿಕ್ಯೂಟಿವ್ ಮತ್ತು ನಾನ್-ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ಸಿಪಿಆರ್‌ಐ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 12 ಕೊನೆಯ ದಿನಾಂಕವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ನೇಮಕಾತಿ ಸಂಸ್ಥೆ: ಸಂಸ್ಥೆ: ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CPRI)
ಒಟ್ಟು 110 ಹುದ್ದೆಗಳು
ಟೆಕ್ನಿಕಲ್ ಅಟೆಂಡೆಂಟ್ ಗ್ರೇಡ್ 1: 37 ಹುದ್ದೆಗಳು
ಅಸಿಸ್ಟೆಂಟ್ ಗ್ರೇಡ್ II: 29 ಹುದ್ದೆಗಳು
ಮಲ್ಟಿ-ಟಾಸ್ಕಿಂಗ್ ಸ್ಟಾಫ್: 14 ಹುದ್ದೆಗಳು
ಇಂಜಿನಿಯರಿಂಗ್ ಅಸಿಸ್ಟೆಂಟ್: 10 ಹುದ್ದೆಗಳು
ಇಂಜಿನಿಯರಿಂಗ್ ಆಫೀಸರ್ ಗ್ರೇಡ್ 1: 8 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ 1: 9 ಹುದ್ದೆಗಳು
ಸೈಂಟಿಫಿಕ್ ಅಸಿಸ್ಟೆಂಟ್: 2 ಹುದ್ದೆಗಳು
ಇಂಜಿನಿಯರಿಂಗ್ ಅಸಿಸ್ಟೆಂಟ್: 1 ಹುದ್ದೆ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಸೆಪ್ಟೆಂಬರ್ 19, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 12, 2026 (ಸಂಜೆ 5:00 ಗಂಟೆಯೊಳಗೆ)
ಅರ್ಹತೆ ಮತ್ತು ವಯಸ್ಸನ್ನು ನಿರ್ಧರಿಸುವ ದಿನಾಂಕ: 12.10.2026
ಅರ್ಹತೆ:
ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ, ಪದವಿ, ಬಿ.ಇ / ಬಿ.ಟೆಕ್ ಅಥವಾ ಎಂ.ಎಸ್ಸಿ ಪದವಿ ಪಡೆದಿರಬೇಕು. ಇಂಜಿನಿಯರಿಂಗ್ ಆಫೀಸರ್ ಹುದ್ದೆಗಳಿಗೆ ಗೇಟ್ ಸ್ಕೋರ್ ಕಡ್ಡಾಯವಾಗಿರುತ್ತದೆ.
ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ ವಯೋಮಿತಿ 25 ರಿಂದ 35 ವರ್ಷಗಳಾಗಿದ್ದು, ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ.
ಅರ್ಜಿ ಶುಲ್ಕ:
ಹುದ್ದೆಗಳ ವರ್ಗಕ್ಕೆ ಅನುಗುಣವಾಗಿ ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ ₹700 ಅಥವಾ ₹1,000 ನಿಗದಿಪಡಿಸಲಾಗಿದೆ.
ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಾಜಿ ಸೈನಿಕರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಹೈದರಾಬಾದ್, ಭೋಪಾಲ್, ದೆಹಲಿ, ಕೋಲ್ಕತ್ತಾ.
ಆಯ್ಕೆ ವಿಧಾನ:
GATE ಸ್ಕೋರ್, ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಪ್ರಾಯೋಗಿಕ ಕೌಶಲ್ಯ ಪರೀಕ್ಷೆ (Skill Test), ಟ್ರೇಡ್ ಪರೀಕ್ಷೆ ಹಾಗೂ ಪ್ರಾವೀಣ್ಯತೆ ಪರೀಕ್ಷೆ (ಹುದ್ದೆಗೆ ಅನುಗುಣವಾಗಿ).
ಸಂಬಳ:
7ನೇ ವೇತನ ಆಯೋಗದ (7th CPC) ಪೇ ಮ್ಯಾಟ್ರಿಕ್ಸ್ ಪ್ರಕಾರ ಹುದ್ದೆಗಳಿಗೆ ತಕ್ಕಂತೆ ಲೆವೆಲ್-1 ರಿಂದ ಲೆವೆಲ್-7 ರವರೆಗೆ ಅತ್ಯುತ್ತಮ ಮಾಸಿಕ ಸಂಬಳ ಸಿಗಲಿದೆ. ಅದರಂತೆ, ₹18,000 ರಿಂದ ₹1,42,400 (ಹುದ್ದೆಗಳಿಗೆ ಅನುಗುಣವಾಗಿ ಬದಲಾಗಲಿದೆ).
ಅರ್ಜಿ ಸಲ್ಲಿಸುವ ವಿಧಾನ:
CPRI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
'Careers' ವಿಭಾಗವನ್ನು ತೆರೆದು ಅಧಿಸೂಚನೆ ಸಂಖ್ಯೆ CPRI/06/2026 ಅನ್ನು ಆಯ್ಕೆಮಾಡಿ.
ಅಧಿಸೂಚನೆಯನ್ನು ಓದಿದ ನಂತರ ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
ಪ್ರಾಥಮಿಕ ನೋಂದಣಿ (Registration) ಪೂರ್ಣಗೊಳಿಸಿ.
ಲಾಗಿನ್ ಆಗಿ ವೈಯಕ್ತಿಕ, ಸಂಪರ್ಕ ಹಾಗೂ ಶೈಕ್ಷಣಿಕ ವಿವರಗಳನ್ನು ನಮೂದಿಸಿ.
ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಶುಲ್ಕ ಅನ್ವಯವಾದರೆ ಆನ್‌ಲೈನ್ ಮೂಲಕ ಪಾವತಿಸಿ.
ಎಲ್ಲ ವಿವರಗಳನ್ನು ಪರಿಶೀಲಿಸಿ 'Submit' ನೀಡಿ, ಭವಿಷ್ಯದ ಬಳಕೆಗಾಗಿ ಪ್ರತಿಯನ್ನು ಡೌನ್‌ಲೋಡ್ / ಪ್ರಿಂಟ್ ಮಾಡಿಕೊಳ್ಳಿ.