ಇಂಜಿನಿಯರಿಂಗ್ ಪದವೀಧರರಿಗೆ ಗುಡ್ ನ್ಯೂಸ್; 1748 ಹುದ್ದೆಗಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ SSC, ಭರ್ಜರಿ ಸಂಬಳ

ಜೂನಿಯರ್ ಎಂಜಿನಿಯರ್ ಹಾಗೂ ಭಾರತೀಯ ಹವಾಮಾನ ಇಲಾಖೆಯ ಹುದ್ದೆಗಳ ಭರ್ತಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ಬೃಹತ್ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಪ್ರಕ್ರಿಯೆ ಈಗಾಗಲೇ ಚುರುಕುಗೊಂಡಿದೆ. ಪರೀಕ್ಷಾ ವೇಳಾಪಟ್ಟಿ ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಗಳ ವಿವರ ಇಲ್ಲಿದೆ:
JOBS
ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣ ಅವಕಾಶOnline Desk
Updated on

SSC Recruitment 2026: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರತಿಷ್ಠಿತ ಎಂಜಿನಿಯರಿಂಗ್ ಹುದ್ದೆಗಳನ್ನು ಅಲಂಕರಿಸಲು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಕನಸಿನ ಉದ್ಯೋಗದ ಬಾಗಿಲು ಈಗ ತೆರೆದಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಜೂನಿಯರ್ ಎಂಜಿನಿಯರ್ ಹಾಗೂ ಭಾರತೀಯ ಹವಾಮಾನ ಇಲಾಖೆಯ ಹುದ್ದೆಗಳ ಭರ್ತಿಗೆ ಬೃಹತ್ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಪ್ರಕ್ರಿಯೆ ಈಗಾಗಲೇ ಚುರುಕುಗೊಂಡಿದೆ. ಪರೀಕ್ಷಾ ವೇಳಾಪಟ್ಟಿ ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಗಳ ವಿವರ ಇಲ್ಲಿದೆ:

ಹುದ್ದೆಗಳ ವಿವರ:

ಒಟ್ಟು 1,748 ಹುದ್ದೆ

  • ಜೂನಿಯರ್ ಇಂಜಿನಿಯರ್ (ಸಿವಿಲ್ - Civil)

  • ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್ - Electrical)

  • ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್ - Mechanical)

  • ಜೂನಿಯರ್ ಇಂಜಿನಿಯರ್ (ಟೆಲಿಕಾಂ - Telecom) - (ಈ ವರ್ಷ ಹೊಸದಾಗಿ ಸೇರಿಸಲಾಗಿದೆ)

  • ಸೈಂಟಿಫಿಕ್ ಅಸಿಸ್ಟೆಂಟ್ (ಭಾರತೀಯ ಹವಾಮಾನ ಇಲಾಖೆ - IMD)

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಪೇ ಲೆವೆಲ್-6 (Pay Level-6) ಅನ್ವಯ ₹35,400 ರಿಂದ ₹1,12,400 ರವರೆಗೆ ಮಾಸಿಕ ಮೂಲ ವೇತನ ಹಾಗೂ ಇತರೆ ಭತ್ಯೆಗಳು ಸಿಗಲಿವೆ.

ಅರ್ಹತೆ:

  • ವಿದ್ಯಾರ್ಹತೆ:

    • ಅಭ್ಯರ್ಥಿಗಳು ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗದಲ್ಲಿ (Civil/Electrical/Mechanical/Telecom) ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ (B.E / B.Tech) ಅಥವಾ 3 ವರ್ಷಗಳ ಡಿಪ್ಲೊಮಾ ಹೊಂದಿರಬೇಕು. (ಗಮನಿಸಿ: ಕೆಲವು ಇಲಾಖೆಗಳಲ್ಲಿ ಡಿಪ್ಲೊಮಾ ಹೊಂದಿದವರಿಗೆ 2 ವರ್ಷಗಳ ಅನುಭವ ಕೇಳಲಾಗುತ್ತದೆ).

  • ವಯೋಮಿತಿ(01 ಆಗಸ್ಟ್ 2026 ಕ್ಕೆ ಅನ್ವಯಿಸುವಂತೆ):

    • ಬಹುತೇಕ ಹುದ್ದೆಗಳಿಗೆ ಗರಿಷ್ಠ ವಯಸ್ಸು 30 ವರ್ಷಗಳು.

    • CPWD ನಂತಹ ಕೆಲವು ನಿರ್ದಿಷ್ಟ ಹುದ್ದೆಗಳಿಗೆ ಗರಿಷ್ಠ ವಯಸ್ಸು 32 ವರ್ಷಗಳು.

    • ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

JOBS
SSLC ಪಾಸದವರಿಗೆ ಗುಡ್ ನ್ಯೂಸ್: ವಿಜಯಪುರ ಬ್ಯಾಂಕ್‌ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಬಳ ₹43 ಸಾವಿರ

ಆಯ್ಕೆ ಪ್ರಕ್ರಿಯೆ:

  • ಪೇಪರ್-1 (ಕಂಪ್ಯೂಟರ್ ಆಧಾರಿತ ಪರೀಕ್ಷೆ): ಇದು ಕೇವಲ ಅರ್ಹತಾ ಪರೀಕ್ಷೆ (Qualifying) ಆಗಿರುತ್ತದೆ. ಇದರಲ್ಲಿ ಪಡೆದ ಅಂಕಗಳನ್ನು ಅಂತಿಮ ಮೆರಿಟ್ ಲಿಸ್ಟ್‌ಗೆ ಪರಿಗಣಿಸುವುದಿಲ್ಲ.

  • ಪೇಪರ್-2 (ಕಂಪ್ಯೂಟರ್ ಆಧಾರಿತ ಪರೀಕ್ಷೆ): ನಿಮ್ಮ ಮುಖ್ಯ ಇಂಜಿನಿಯರಿಂಗ್ ವಿಷಯದ ಮೇಲಿನ ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆಯೇ ಅಂತಿಮ ಮೆರಿಟ್ ಪಟ್ಟಿ (Final Merit List) ಸಿದ್ಧಪಡಿಸಲಾಗುತ್ತದೆ.

  • ದಾಖಲಾತಿ ಪರಿಶೀಲನೆ (DV): ಅಂತಿಮವಾಗಿ ಆಯ್ಕೆಯಾದವರಿಗೆ ಆಯಾ ಇಲಾಖೆಗಳಿಂದ ನೇರವಾಗಿ ನಡೆಯುತ್ತದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: ಸೆಪ್ಟೆಂಬರ್ 2, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 22, 2026 (ರಾತ್ರಿ 11:00 ಗಂಟೆಯವರೆಗೆ)

  • ಆನ್‌ಲೈನ್ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 23, 2026

  • ಅರ್ಜಿ ತಿದ್ದುಪಡಿ ವಿಂಡೋ: ಸೆಪ್ಟೆಂಬರ್ 28 ರಿಂದ ಸೆಪ್ಟೆಂಬರ್ 30, 2026

  • ಪತ್ರಿಕೆ-1 (Paper-I) ಪರೀಕ್ಷೆ ದಿನಾಂಕ: ಅಕ್ಟೋಬರ್/ನವೆಂಬರ್ 2026 (ತಾತ್ಕಾಲಿಕ)

  • ಪತ್ರಿಕೆ-2 (Paper-II) ಪರೀಕ್ಷೆ ದಿನಾಂಕ: ಡಿಸೆಂಬರ್ 2026 (ತಾತ್ಕಾಲಿಕ)

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್‌ಸೈಟ್‌ ಆದ ssc.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಹೊಸ ಪೋರ್ಟಲ್‌ನಲ್ಲಿ ಒನ್-ಟೈಮ್ ರಿಜಿಸ್ಟ್ರೇಷನ್ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

JOBS
KAS Recruitment 2026: 319 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com