ಭರ್ಜರಿ ಕೇಂದ್ರ ಸರ್ಕಾರಿ ಉದ್ಯೋಗಾವಕಾಶ: 212 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ UPSC

UPSC Recruitment 2026: ಕೇಂದ್ರ ಸರ್ಕಾರದ ಕೆಲಸಕ್ಕೆ ಕಾಯುತ್ತಿರುವವರಿಗೆ ಭರ್ಜರಿ ಸುದ್ದಿ. UPSC ವಿವಿಧ ಸಚಿವಾಲಯಗಳಲ್ಲಿ ಖಾಲಿ ಇರುವ ಒಟ್ಟು 212 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:
JOB: UPSC Recruitment 2026
212 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ UPSCOnline Desk
Updated on

UPSC Recruitment 2026: ಕೇಂದ್ರ ಸರ್ಕಾರದ ಕೆಲಸಕ್ಕೆ ಕಾಯುತ್ತಿರುವವರಿಗೆ ಭರ್ಜರಿ ಸುದ್ದಿ. ಕೇಂದ್ರ ಲೋಕಸೇವಾ ಆಯೋಗ ಅಂದರೆ UPSC ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 212 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆ ಸೆಪ್ಟೆಂಬರ್ 12 ರಿಂದ ಆರಂಭವಾಗಿದ್ದು, ನೇಮಕಾತಿ ಕುರಿತ ವಿವರ ಇಲ್ಲಿದೆ:

ಹುದ್ದೆಗಳ ವಿವರ:

  • ನೇಮಕಾತಿ ಸಂಸ್ಥೆ: ಕೇಂದ್ರ ಲೋಕಸೇವಾ ಆಯೋಗ

  • ಒಟ್ಟು ಹುದ್ದೆಗಳು: 212 

    • ಸಹಾಯಕ ಸಾರ್ವಜನಿಕ ಅಭಿಯೋಜಕರು: 140 ಹುದ್ದೆಗಳು

    • ಸ್ಪೆಷಲಿಸ್ಟ್ ಗ್ರೇಡ್ 3 ಸಹಾಯಕ ಪ್ರಾಧ್ಯಾಪಕರು (ಜನರಲ್ ಮೆಡಿಸಿನ್): 60 ಹುದ್ದೆಗಳು

    • ಸ್ಪೆಷಲಿಸ್ಟ್ ಗ್ರೇಡ್ 3 ಸಹಾಯಕ ಪ್ರಾಧ್ಯಾಪಕರು (ಅಂಗರಚನಾಶಾಸ್ತ್ರ): 4 ಹುದ್ದೆಗಳು

    • ಸಾರ್ವಜನಿಕ ಕಾನೂನು ಅಧಿಕಾರಿ / ಜಿಲ್ಲಾ ಮೊಕದ್ದಮೆ ಅಧಿಕಾರಿ / ಕಾನೂನು ಅಧಿಕಾರಿ (ಲಡಾಖ್): 4 ಹುದ್ದೆಗಳು

    • ಸಹಾಯಕ ಸಂಪಾದಕರು (ಭಾರತೀಯ ಗಣಿ ಬ್ಯೂರೋ): 2 ಹುದ್ದೆಗಳು

    • ಸ್ಪೆಷಲಿಸ್ಟ್ ಗ್ರೇಡ್ 2 (ಜೂನಿಯರ್ ಸ್ಕೇಲ್ - ಅರಿವಳಿಕೆಶಾಸ್ತ್ರ): 1 ಹುದ್ದೆ

    • ಸ್ಪೆಷಲಿಸ್ಟ್ ಗ್ರೇಡ್ 2 (ಜೂನಿಯರ್ ಸ್ಕೇಲ್ - ಪೀಡಿಯಾಟ್ರಿಕ್ಸ್): 1 ಹುದ್ದೆ

ಅರ್ಹತೆ:

  • ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ MBBS, ಕಾನೂನು ಪದವಿ (Law Degree), ಸ್ನಾತಕೋತ್ತರ ಪದವಿ (PG in relevant subjects), ಅಥವಾ CA/ICWA/Master's Degree ಪಡೆದಿರಬೇಕು.

  • ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 50 ವರ್ಷಗಳು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

  • ಜೊತೆಗೆ ಲಡಾಖ್ ನಿವಾಸಿಗಳಿಗೆ ಲಡಾಖ್ ಕೇಂದ್ರಾಡಳಿತ ಪ್ರದೇಶದ ತಹಶೀಲ್ದಾರ್ ನೀಡಿರುವ ಸ್ಥಳೀಯ ವಾಸಸ್ಥಳ ಪ್ರಮಾಣಪತ್ರ ಕಡ್ಡಾಯ.

JOB: UPSC Recruitment 2026
ಇಂಜಿನಿಯರಿಂಗ್ ಪದವೀಧರರಿಗೆ ಬಂಪರ್ ಆಫರ್: BEL ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 1.40 ಲಕ್ಷದವರೆಗೆ ಸಂಬಳ; ಅರ್ಜಿ ಸಲ್ಲಿಕೆ ಹೇಗೆ?
JOB
Online Desk

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: 12-09-2026

  • ಕೊನೆಯ ದಿನಾಂಕ (ಸಾಮಾನ್ಯ ಹುದ್ದೆಗಳಿಗೆ): 02-10-2026 ( (ಲಡಾಖ್ ಆಡಳಿತದ ವ್ಯಾಪ್ತಿಯ ಹುದ್ದೆಗಳಿಗೆ ಅಕ್ಟೋಬರ್ 9 ರವರೆಗೆ ಅವಕಾಶವಿದೆ).

ಅರ್ಜಿ ಶುಲ್ಕ: ₹25 (ಮಹಿಳೆಯರು, SC, ST ಮತ್ತು PwBD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ).

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು UPSC ಯ ಅಧಿಕೃತ ಅಪ್ಲಿಕೇಶನ್ ಪೋರ್ಟಲ್ UPSC Online Portal ಗೆ ಭೇಟಿ ನೀಡಿ, 'ಒನ್ ಟೈಮ್ ರಿಜಿಸ್ಟ್ರೇಷನ್' (OTR) ಮಾಡಿಕೊಳ್ಳುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಲಿಂಕ್

JOB: UPSC Recruitment 2026
ಪರೀಕ್ಷೆಯಿಲ್ಲದೆ ರೈಲ್ವೆಯಲ್ಲಿ ಭರ್ಜರಿ ಜಾಬ್ ಆಫರ್; 4,471 ಹುದ್ದೆಗಳ ಬೃಹತ್ ನೇಮಕಾತಿ: ಅರ್ಜಿ ಸಲ್ಲಿಕೆಗೆ ಇಲ್ಲಿದೆ ಸಂಪೂರ್ಣ ವಿವರ

X
Kannada Prabha
www.kannadaprabha.com