ಕ್ರೀಡಾಪಟುಗಳಿಗೆ ಗುಡ್‌ನ್ಯೂಸ್: ಎಕ್ಸಾಂ ಇಲ್ಲದೆ ಭಾರತೀಯ ಸೇನೆಯಲ್ಲಿ ಕೆಲಸ; 521 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ CRPF

ಕೇಂದ್ರೀಯ ಮೀಸಲು ಪೊಲೀಸ್ ಪಡೆಯು ಅರ್ಹ ಕ್ರೀಡಾಪಟುಗಳಿಗಾಗಿ ಸ್ಪೋರ್ಟ್ಸ್ ಕೋಟಾದಡಿ ಒಟ್ಟು 521 ಕಾನ್‌ಸ್ಟೇಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ದೇಶದಾದ್ಯಂತ ಇರುವ ಅರ್ಹ ಕ್ರೀಡಾಪಟುಗಳು ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆ ಕುರಿತ ವರದಿ ಇಲ್ಲಿದೆ:
CRPF Recruitment
AI Image
Updated on: 

CRPF Recruitment 2026: ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (CRPF) ಉದ್ಯೋಗದೊಂದಿಗೆ ದೇಶಸೇವೆಯ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಭರ್ಜರಿ ಸುವರ್ಣಾವಕಾಶ ಲಭಿಸಿದೆ. ಅರ್ಹ ಕ್ರೀಡಾಪಟುಗಳಿಗಾಗಿ ಕ್ರೀಡಾ ಕೋಟಾದಡಿ ಒಟ್ಟು 521 ಹೆಡ್ ಕಾನ್‌ಸ್ಟೇಬಲ್ ಮತ್ತು ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ನೇಮಕಾತಿ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ಒಟ್ಟು 521 ಹುದ್ದೆಗಳು

    • ಹೆಡ್ ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ - GD): 182 ಹುದ್ದೆಗಳು (150 ಪುರುಷರು, 32 ಮಹಿಳೆಯರು)

    • ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ - GD): 339 ಹುದ್ದೆಗಳು (258 ಪುರುಷರು, 81 ಮಹಿಳೆಯರು)

ಅರ್ಹತೆ:

  • ಶೈಕ್ಷಣಿಕ ಅರ್ಹತೆ:

    • ಹೆಡ್ ಕಾನ್‌ಸ್ಟೇಬಲ್ ಹುದ್ದೆಗೆ: ಮಾನ್ಯತೆ ಪಡೆದ ಬೋರ್ಡ್‌ನಿಂದ 12ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಆಗಿರಬೇಕು.

    • ಕಾನ್‌ಸ್ಟೇಬಲ್ ಹುದ್ದೆಗೆ: 10ನೇ ತರಗತಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

  • ಕ್ರೀಡಾ ಅರ್ಹತೆ:

    • ಅಭ್ಯರ್ಥಿಗಳು ನಿಗದಿಪಡಿಸಲಾದ 22 ಕ್ರೀಡಾ ವಿಭಾಗಗಳಲ್ಲಿ (ಅಥ್ಲೆಟಿಕ್ಸ್, ಈಜು, ಕಬಡ್ಡಿ, ಶೂಟಿಂಗ್, ಹಾಕಿ, ಕುಸ್ತಿ, ಯೋಗ ಇತ್ಯಾದಿ) ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸಾಧನೆ ಹಾಗೂ ಪ್ರಮಾಣಪತ್ರ ಹೊಂದಿರಬೇಕು.

  • ವಯೋಮಿತಿ:

    • 1 ಆಗಸ್ಟ್ 2026 ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 23 ವರ್ಷ ಮೀರಿರಬಾರದು (ಮೀಸಲಾತಿ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ)

  • ದೈಹಿಕ ಮಾನದಂಡಗಳು:

    • ಎತ್ತರ (Height):

      • ಪುರುಷರು: 170 ಸೆಂ.ಮೀ (ST ಅಭ್ಯರ್ಥಿಗಳಿಗೆ 162.5 ಸೆಂ.ಮೀ, ಈಶಾನ್ಯ ರಾಜ್ಯಗಳ ಅಭ್ಯರ್ಥಿಗಳಿಗೆ ನಿಯಮಾನುಸಾರ ಸಡಿಲಿಕೆ ಇದೆ)

      • ಮಹಿಳೆಯರು: 157 ಸೆಂ.ಮೀ (ST ಅಭ್ಯರ್ಥಿಗಳಿಗೆ 150.0 ಸೆಂ.ಮೀ)

    • ಎದೆ ಸುತ್ತಳತೆ (ಪುರುಷರಿಗೆ ಮಾತ್ರ):

      • ಸಾಮಾನ್ಯ/OBC/SC: ಸಾಮಾನ್ಯ ಸ್ಥಿತಿಯಲ್ಲಿ 80 ಸೆಂ.ಮೀ, ಕನಿಷ್ಠ 5 ಸೆಂ.ಮೀ ವಿಸ್ತರಣೆ (80-85 ಸೆಂ.ಮೀ) {ST ಅಭ್ಯರ್ಥಿಗಳಿಗೆ: 76 ಸೆಂ.ಮೀ (5 ಸೆಂ.ಮೀ ವಿಸ್ತರಣೆ)}

    • ತೂಕ: ಎತ್ತರ ಮತ್ತು ವಯಸ್ಸಿಗೆ ಅನುಗುಣವಾಗಿರಬೇಕು.

ಅರ್ಜಿ ಶುಲ್ಕ:

  • ಸಾಮಾನ್ಯ, ಒಬಿಸಿ ಮತ್ತು EWS ವರ್ಗದ ಪುರುಷ ಅಭ್ಯರ್ಥಿಗಳಿಗೆ ₹100 ಶುಲ್ಕ ಇರುತ್ತದೆ. ಎಲ್ಲಾ ಮಹಿಳಾ ಅಭ್ಯರ್ಥಿಗಳು, ಎಸ್‌ಸಿ, ಎಸ್‌ಟಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

CRPF Recruitment
ಪದವೀಧರರಿಗೆ ಕೇಂದ್ರ ಸರ್ಕಾರದಲ್ಲಿ ಬಂಪರ್ ಆಫರ್: 1,871 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ; 1 ಲಕ್ಷಕ್ಕೂ ಅಧಿಕ ಸಂಬಳ!

ಸಂಬಳ:

  • ಹೆಡ್ ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) -  ಪೇ ಲೆವೆಲ್ 4 ರಂತೆ ₹25,500 ರಿಂದ ₹81,100/-

  • ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) - ಪೇ ಲೆವೆಲ್ 3 ರಂತೆ ₹21,700 ರಿಂದ ₹69,100/-

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 12, 2026 (ಬೆಳಗ್ಗೆ 9:00 ಗಂಟೆಯಿಂದ)

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 11, 2026 (ರಾತ್ರಿ 11:59 ರವರೆಗೆ)

  • ತಿದ್ದುಪಡಿ ವಿಂಡೋ: ನವೆಂಬರ್ 12 ರಿಂದ ನವೆಂಬರ್ 14, 2026

ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ!

ಈ ನೇಮಕಾತಿಯ ವಿಶೇಷತೆಯೆಂದರೆ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಾಂಪ್ರದಾಯಿಕ ಸಂದರ್ಶನ ಇರುವುದಿಲ್ಲ. ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:

  • ದಾಖಲಾತಿಗಳ ಪರಿಶೀಲನೆ (ಕ್ರೀಡಾ ಪ್ರಮಾಣಪತ್ರಗಳ ಸ್ಕ್ರೂಟಿನಿ)

  • ದೈಹಿಕ ಪ್ರಮಾಣಿತ ಪರೀಕ್ಷೆ

  • ಕ್ರೀಡಾ ಸಾಮರ್ಥ್ಯದ ಪ್ರಾಯೋಗಿಕ ಪರೀಕ್ಷೆ

  • ವೈದ್ಯಕೀಯ ತಪಾಸಣೆ

ಅಧಿಸೂಚನೆ ಲಿಂಕ್

CRPF Recruitment
SSLC ಪಾಸಾದವರಿಗೆ ಗುಡ್‌ನ್ಯೂಸ್: ಕಾರಾಗೃಹ ಇಲಾಖೆಯಲ್ಲಿ 869 ಹುದ್ದೆಗಳ ಬೃಹತ್ ನೇಮಕಾತಿ, ತಿಂಗಳಿಗೆ ಬರೋಬ್ಬರಿ 76 ಸಾವಿರ ಸಂಬಳ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com