ರಕ್ಷಿತ್ ಶೆಟ್ಟಿ ಪರಮಾವ್ ಸ್ಟುಡಿಯೋದಿಂದ ಮೊದಲ ವೆಬ್ ಸಿರೀಸ್ 'ಏಕಮ್' ನಿರ್ಮಾಣ

ಸ್ಯಾಂಡಲ್ ವುಡ್ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಸಿನಿಮಾಗಳ ಜೊತೆ ಜೊತೆಗೆ ಆನ್ ಲೈನ್ ಸ್ಟ್ರೀಮಿಂಗ್  ಕಡೆಗೂ ಗಮನ ಹರಿಸುತ್ತಿದ್ದಾರೆ.

Published: 05th November 2020 11:44 AM  |   Last Updated: 05th November 2020 01:03 PM   |  A+A-


Rakshit shetty

ರಕ್ಷಿತ್ ಶೆಟ್ಟಿ

Posted By : Shilpa D
Source : The New Indian Express

ಸ್ಯಾಂಡಲ್ ವುಡ್ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಸಿನಿಮಾಗಳ ಜೊತೆ ಜೊತೆಗೆ ಆನ್ ಲೈನ್ ಸ್ಟ್ರೀಮಿಂಗ್ ಕಡೆಗೂ ಗಮನ ಹರಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಒಡೆತನದ ಪರಮಾವ್ ಸ್ಟುಡಿಯೋ ನಿರ್ಮಾಣ ಸಂಸ್ಥೆಯಿಂದ ವೆಬ್ ಸಿರಿಸ್ ಗೆ ಸಿದ್ಧತೆ ನಡೆಸಲಾಗುತ್ತಿದೆ. 

ಉತ್ತಮ ವೆಬ್ ಸಿರೀಸ್ ನಿರ್ಮಾಣ ಮಾಡಲು ಕನ್ನಡ ಚಿತ್ರರಂಗ ಇನ್ನೂ ಪ್ರಯತ್ನ ಮಾಡುತ್ತಲೇ ಇದೆ.ರಕ್ಷಿತ್ ಶೆಟ್ಟಿ ಬ್ಯಾನರ್ ನಲ್ಲಿ ಬರುತ್ತಿರುವ ಮೊಟ್ಟ ಮೊದಲ ವೆಬ್ ಸಿರೀಸ್ ಇದಾಗಿದೆ, ಏಕಂ ವೆಬ್ ಸಿರೀಸ್ 8 ಎಪಿಸೋಡ್ ಇದ್ದು, ನಟ, ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿರುವ ರಕ್ಷಿತ್ ಶೆಟ್ಟಿ ತಮ್ಮ ವೆಬ್ ಸಿರೀಸ್ ಗಾಗಿ ಹೊಸ ಪ್ರತಿಭೆಗಳಿಗಾಗಿ ಶೋಧ ನಡೆಸಿದ್ದಾರೆ, ಸುಮಂತ್ ಭಟ್ ಇದರಲ್ಲಿ ನಟಿಸಲಿದ್ದಾರೆ.

ದಿ ಸೆವೆನ್ ಓಡ್ಸ್  ಬರಹಗಾರರಲ್ಲಿ ಸುಮಂತ್ ಭಟ್ ಒಬ್ಬರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು. ಏಕಂ ಕರಾವಳಿಯಲ್ಲಿ ಬೆಲ್ಟ್ ನ ಕಥೆಯಾಗಿದೆ, ಇಡೀ ಕಥೆ ಕರಾವಳಿ ಭಾಗ ಆಧರಿಸಿದೆ ಎಂದು ಸುಮಂತ್ ತಿಳಿಸಿದ್ದಾರೆ.  ಕರಾವಳಿ ಪ್ರದೇಶದಲ್ಲಿಯೇ ಎಲ್ಲಾ ಶೂಟಿಂಗ್ ನಡೆಯಲಿದ್ದು, ಈ ಭಾಗದ ಜನರೊಂದಿಗೆ ಇದು ಕನೆಕ್ಟ್ ಆಗಲಿದೆ. ನಾವು ಕಥೆ ಬಗ್ಗೋ ನೋಡುವುದಾದರೇ ಇದೊಂದು ಪ್ಯಾನ್ ಇಂಡಿಯಾ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಮಾಲ್ಗುಡಿ ಡೇಸ್‌ನ ಕಥೆ ಬಹಳ ಪ್ರಾದೇಶಿಕವಾಗಿದ್ದು, ಎಲ್ಲಾ ಪಾತ್ರಗಳನ್ನು ಕನ್ನಡ ನಟರು ನಿರ್ವಹಿಸಿದ್ದರು, ಅದರ ಜೊತೆಗೆ ಕಥೆಯ ತಿರುಳು ಇಡೀ ಭಾರತೀಯರನ್ನು ಆಕರ್ಷಿಸಿತು.  ಭಾಷಾ ಅಡೆತಡೆಗಳನ್ನು ಮೀರಿ ಏಕಮ್ ಅನ್ನು ತಳ್ಳಲು ನಾವು ಪ್ರಯತ್ನಿಸುತ್ತೇವೆ ಎಂದು ಬರಹಗಾರ-ನಿರ್ದೇಶಕ ಹೇಳುತ್ತಾರೆ.

Stay up to date on all the latest ಸಿನಿಮಾ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp