

ಚೆನ್ನೈ: ಟಾಲಿವುಡ್ ನಟ ಜಯಂ ರವಿ (ರವಿ ಮೋಹನ್) ತನ್ನ ಪತ್ನಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮೊದಲ ಬಾರಿಗೆ ನಟ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. "ನನ್ನ ಪತ್ನಿ ನನ್ನನ್ನು ಗುಲಾಮನಂತೆ ನಡೆಸಿಕೊಂಡಿದ್ದಾಳೆ" ಎಂದು ರವಿ ಆರೋಪಿಸಿದ್ದಾರೆ.
ರವಿ ಮೋಹನ್ ತಮ್ಮ ಮಕ್ಕಳು ಮತ್ತು ಕುಟುಂಬದ ಹಿತದೃಷ್ಟಿಯಿಂದ ಪತ್ನಿಯ ಕಿರುಕುಳವನ್ನು ದೀರ್ಘಕಾಲ ಸಹಿಸಿಕೊಂಡಿದ್ದಾಗಿ ಹೇಳಿದ್ದಾರೆ. ಮೌನ ವಹಿಸಿದ್ದ ತಮ್ಮ ನಿರ್ಧಾರವನ್ನು ಸಾರ್ವಜನಿಕ ವಲಯದಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಅವರು ಹೇಳಿದರು. ವಿವಾಹವಾದ ಬಳಿಕ ಪತ್ನಿ ಹಾಗೂ ನನ್ನದು ಜಂಟಿ ಬ್ಯಾಂಕ್ ಖಾತೆಯಾಗಿತ್ತು. ಅದರಿಂದ ಹಣ ತೆಗೆಯುವುದಕ್ಕೂ ಪತ್ನಿ ವಿರೋಧಿಸುತ್ತಿದ್ದಳು, ಗುಲಾಮನಂತೆ ನಡೆಸಿಕೊಳ್ಳುತ್ತಿದ್ದಳು ಎಂದು ರವಿ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ "ಹಣ ಇಲ್ಲದೇ ಮನೆಯಿಂದ ಹೊರಹೋಗಬೇಕಾಯಿತು ಮತ್ತು ಹೊರಬಂದ ನಂತರ ಮಕ್ಕಳನ್ನು ನೋಡದೇ ಇರುವುದಕ್ಕೆ ಸಾಧ್ಯವಾಗುತ್ತಿಲ್ಲ. ಭಾವನಾತ್ಮಕ ಮತ್ತು ವೈಯಕ್ತಿಕ ಯಾತನೆಯನ್ನು ಅನುಭವಿಸುತ್ತಿದ್ದೇನೆ, ಈ ನೋವಿನಿಂದ ಕೈ ಕೊಯ್ದುಕೊಂಡಿದ್ದೆ ಎಂದು ಜಯಂ ರವಿ ಹೇಳಿದ್ದಾರೆ.
ತಮ್ಮ ವೈಯಕ್ತಿಕ ಜೀವನ ಸ್ಥಿರವಾಗುವವರೆಗೆ ನಟನೆಯನ್ನು ತ್ಯಜಿಸುವುದಾಗಿ ಮತ್ತು ಚಲನಚಿತ್ರಗಳಿಗೆ ಮರಳುವ ಮೊದಲು ತಮ್ಮ ಖಾಸಗಿ ವಿಷಯಗಳನ್ನು ಮೊದಲು "ಸ್ವಚ್ಛಗೊಳಿಸುವುದಾಗಿ" ಇದೇ ವೇಳೆ ಅವರು ಹೇಳಿದ್ದಾರೆ.
ರವಿ ಮೋಹನ್ ಗೆ ಸೈಬರ್ ಬೆದರಿಕೆ
ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ಬಗ್ಗೆ ಕಥೆಗಳನ್ನು ಸೃಷ್ಟಿಸಿದ್ದನ್ನು ನಟ ರವಿ ಖಂಡಿಸಿದ್ದಾರೆ. ತಮಗೆ ಸೈಬರ್ ಬೆದರಿಕೆ ಇದೆ ಸಾರ್ವಜನಿಕಬಾಗಿ ನನ್ನನ್ನು ತಪ್ಪಾಗಿ ತೋರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಸುದ್ದಿಗೋಷ್ಠಿಯಲ್ಲಿ ನಟ ಪತ್ನಿ ವಿರುದ್ಧ ಕಿರುಚಾಡಿ, ಕಣ್ಣೀರು ಹಾಕಿರುವುದೂ ವರದಿಯಾಗಿದೆ.
ಆನ್‌ಲೈನ್‌ನಲ್ಲಿ ಚಿತ್ರಿಸಲಾದ ಚಿತ್ರ ನಿಜವಲ್ಲ ಮತ್ತು ಪದೇ ಪದೇ ಟ್ರೋಲ್ ಮಾಡುವುದು ಮತ್ತು ತಮ್ಮ ಬಗ್ಗೆ ನಿರ್ಣಯಕ್ಕೆ ಬರುವುದು ತೀವ್ರವಾಗಿ ನೋಯಿಸಿದೆ ಎಂದು ಅವರು ಹೇಳಿದ್ದಾರೆ. ಜನರು ಸತ್ಯವನ್ನು ತಿಳಿಯದೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕಥೆಗಳನ್ನು ಹೇಳುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರವಿ ಮೋಹನ್ 2 ದಶಕಗಳಿಂದ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದಾರೆ ಮತ್ತು ತಮ್ಮ ಜೀವನದುದ್ದಕ್ಕೂ ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದಾರೆ ಎಂದು ಹೇಳಿದರು. ಪ್ರತಿಕೂಲವಾದ ಸಾರ್ವಜನಿಕ ಅಭಿಪ್ರಾಯ ಮತ್ತು ಆನ್‌ಲೈನ್ ಟೀಕೆಗಳಿಂದಾಗಿ ಪ್ರಸ್ತುತ ಪರಿಸ್ಥಿತಿಯನ್ನು ಕಠಿಣಗೊಳಿಸಲಾಗಿದೆ ಎಂದು ಅವರು ಹೇಳಿದರು.
Advertisement