ದೇವ್‌ನಿಂದ "ಫ್ರೀ'ಡಾ
ಆತ್ಮ ಬಂಧುಗಳು ಎನ್ನುವಷ್ಟು ಒಬ್ಬರಿಗೊಬ್ಬರನ್ನು ಬೆಸೆದಿದ್ದು "ಸ್ಲಂ ಡಾಗ್ ಮಿಲಿಯನೇರ್' ಎಂಬ ಚಿತ್ರ. ತೆರೆ ಮೇಲೆ ಕಾಣಿಸಿಕೊಂಡ ಕೃಷ್ಣ ಸುಂದರಿ ಫ್ರೀಡಾ ಪಿಂಟೋ ಹಾಗೂ ಮುದ್ದು ಮುದ್ದಾದ ದೇವ್ ಪಟೇಲ್ ಜೋಡಿ ತಮ್ಮ ರೊಮ್ಯಾಂಟಿಕ್ ಬದುಕನ್ನು ತೆರೆಯ ಹಿಂದೆಯೂ ಮುಂದುವರಿಸಿತ್ತು. ಕಂಡ ಕಂಡಲ್ಲಿ ಜೊತೆ ಜೊತೆಯಾಗಿಯೇ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದರು.
ಪ್ರಶಸ್ತಿಗಳನ್ನು ಬಾಚಿಕೊಂಡ ಸ್ಲಂ ಡಾಗ್ ಸಿನಿಮಾ ರಿಲೀಸ್ ಆಗಿ ಸುಮಾರು ಆರು ವರ್ಷಗಳಾದರೂ ಎಲ್ಲವೂ ಸರಿಯಾಗಿಯೇ ಇದ್ದವು. ಫ್ರೀಡಾ ಬದುಕಲ್ಲಿ ಮೂರನೆಯವರ ಪ್ರವೇಶವಾಗಿದ್ದರಿಂದಲೋ ಅಥವಾ ಬೇರ್ಯಾವ ಕಾರಣವೋ ಗೊತ್ತಿಲ್ಲ. ಈಗ ಇವರಿಬ್ಬರೂ ಆತ್ಮಬಂಧುಗಳಾಗಿ ಉಳಿದಿಲ್ಲ ಎನ್ನಲಾಗುತ್ತಿದೆ. ಕೆಲವು ಫ್ರೀಡಾ ಇನ್ನೂ ಸಿಂಗಲ್ ಆಗಿಯೇ ಇದ್ದಾಳೆ ಎನ್ನುತ್ತಿದ್ದಾರೆ. ಆದರೆ, ಒಬ್ಬರಿಗೊಬ್ಬರು ಪರಿಚಯವಾದಾಗಿನಿಂದಲೂ ಫ್ರೀಡಾ ದೇವ್ ಇಲ್ಲದೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಆದರೆ ಮೊನ್ನೆ ಅಕ್ಟೋಬರ್‌ನಲ್ಲಿ 30ನೇ ಬರ್ತ್‌ಡೇಯನ್ನು ಆಕೆ ಲಾಸ್ ಏಂಜಲೀಸ್‌ನಲ್ಲಿ ಆಚರಿಸಿಕೊಂಡಾಗ ಆಕೆಯ ಪಕ್ಕದಲ್ಲಿ ದೇವ್ ಇರಲಿಲ್ಲ. ಅದರ ಬದಲಾಗಿ ಇದ್ದವನು ಕರ್ನಾಟಕ ಉದ್ಯಮಿ ವಿಜಯ್ ಮಲ್ಯ ಮಗ ಸಿದ್ಧಾರ್ಥ್ ಮಲ್ಯ. ಫ್ರೀಡಾ ಕೂಡ ಬೇಜಾರಿನಲ್ಲೇನೂ ಇದ್ದಂತಿರಲಿಲ್ಲ.
ಪಕ್ಕದ್ಮನೆ ಹುಡುಗಿ ಎನಿಸುವ ಫ್ರೀಡಾಗೆ ಒಮ್ಮೆ ಪ್ರೇಮಿಗಳ ದಿನವನ್ನು ಹೇಗೆ ಆಚರಿಸುತ್ತೀರಿ ಎಂದು ಕೇಳಿದಾಗ 'ಅದ್ರದಲ್ಲೇನಿದೆ ಆಚರಿಸಿಕೊಳ್ಳಲ್ಲಿಕ್ಕೆ? ನಮಗೆ ಪ್ರತಿ ದಿನವೂ ಪ್ರೇಮಿಗಳ ದಿನವೇ' ಎಂದು ದೇವ್‌ನನ್ನು ಅತೀವ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಳು.
ಇಷ್ಟೆಲ್ಲ ಅಕ್ಕರೆ ಪ್ರೀತಿ ತೋರುತ್ತಿದ್ದ ಒಬ್ಬರಿಗೊಬ್ಬರಿಗೆ ಅದೇನು ಆಯಿತೋ ಗೊತ್ತಿಲ್ಲ. ಕಭಿ ಅಲ್ವಿದಾ ನಾ ಕೆಹನಾ ಎನ್ನುತ್ತಲೇ ಸೂಕ್ತ ಸಂಗಾತಿಯ ಹುಡುಕಾಟಕ್ಕೆ ಇಬ್ಬರೂ ಮುಂದಾಗಿದ್ದಾರೆ. ಅಲ್ಲಿಗೆ ಜಮಾಲ್ ಮಲಿಕ್ ಹಾಗೂ ಲತಿಕಾ ಜೋಡಿಯಾಗಿ ಎಲ್ಲರ ಮನ ಗೆದ್ದು, ಎಲ್ಲೆಡೆ ಡ್ಯುಯಟ್ ಹಾಡಿಕೊಂಡು ಸುತ್ತಾಡುತ್ತಿದ್ದ ಈ ಜೋಡಿಯೀಗ ತಮ್ಮ ಪಯಣವನ್ನು ವಿರುದ್ಧ ದಿಕ್ಕಿನಲ್ಲಿ ಮುಂದುವರಿಸಿದ್ದಾರೆ.
ಪೂರ್ವಿಕಲ್ಯಾಣಿ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ