
ಕ್ರಿಸ್‌ಮಸ್ ಹೊತ್ತಿಗೆ ಬಾಲಿವುಡ್‌ನ ದೊಡ್ಡ ಸಿನಿಮಾವೊಂದು ಬಿಡುಗಡೆಯಾಗುವುದು ವಾಡಿಕೆಯಾಗಿ ಹೋಗಿದೆ. ಈ ವರ್ಷ ಆ ಪಟ್ಟಿಯಲ್ಲಿ ಕಾಣುತ್ತಿರುವುದು ಪೀಕೆ. ಆಮೀರ್ ಖಾನ್ ಮತ್ತು ರಾಜ್ ಕುಮಾರ್ ಹಿರಾನಿ ಕಾಂಬಿನೇಷನ್ನಿನ ಮೇಲೆ
ನಿರೀಕ್ಷೆಯ ಭಾರವೇರಿದೆ. ಐದು ವರ್ಷಗಳ ನಂತರ ಮತ್ತೆ ಈ ಜೋಡಿ ಒಂದಾಗಿದೆ. ಅಂದು ಇದೇ ಜೋಡಿಯ ಥ್ರೀ ಈಡಿಯಟ್ಸ್ ಬಿಡುಗಡೆಯಾದ ನಾಲ್ಕೇ ವಾರದಲ್ಲಿ ಬಾಲಿವುಡ್‌ನ ಎಲ್ಲ ದಾಖಲೆಗಳನ್ನು ಪುಡಿಗಟ್ಟಿತ್ತು. ಇದೀಗ ತಮ್ಮದೇ ದಾಖಲೆಯನ್ನು ಮೊದಲನೇ ವಾರದಲ್ಲೇ ಮುರಿಯುವ ಹುಮ್ಮಸ್ಸಿನಲ್ಲಿದ್ದಾರೆ ಪೀಕೆ ಟೀಮ್.
ಇಡೀ ಭಾರತದಾದ್ಯಂತ 5200 ಥೇಟರುಗಳಲ್ಲಿ ಈ ಚಿತ್ರವನ್ನು ಬಿಡುಗಡೆಗೊಳಿಸಲಿದ್ದು, ಬಹುಶಃ ಮೊದಲ ಪ್ರದರ್ಶನದಲ್ಲೇ ತನ್ನ ಬಂಡವಾಳವನ್ನು ವಾಪಸು ಪಡೆಯುವ ಹಾಗೂ ಮೊದಲನೇ ದಿನವೇ ಕೋಟಿಗಟ್ಟಲೇ ಲಾಭ ಗಳಿಸುವ ಲೆಕ್ಕಾಚಾರ ಪೀಕೆ ತಂಡದ್ದಿರಹುದು. ಇದರ ಜೊತೆಗೆ ವಿದೇಶದಲ್ಲಿಯೂ ಒಟ್ಟು 820 ಚಿತ್ರ ಮಂದಿರಗಳಲ್ಲಿ ಚಿತ್ರ ತೆರೆ ಕಾಣುತ್ತಿದ್ದು, ದಿನಕ್ಕೆ 20 ಸಾವಿರ ಪ್ರದರ್ಶನ ಏರ್ಪಡಿಸಲಾಗಿದೆ. ಬಿಡುಗಡೆಯ ವಿಚಾರದಲ್ಲಿ ಇದು ಕೂಡ ಸದ್ಯದ ದಾಖಲೆ.
ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಗೆದ್ದಿದ್ದು, ವಿವಾದಗಳಿಂದಲೂ ಒಂದಷ್ಟು ಸುದ್ದಿ ಮಾಡಿರುವ ಪೀಕೆ ವರ್ಷದ ಕೊನೆಯಲ್ಲಿ ತೆರೆ ಕಾಣುತ್ತಿದ್ದರೂ ಮುಂದಿನ ವರ್ಷವೂ ದರ್ಬಾರ್ ಮುಂದುವರಿಸುವಂತೆ ಕಾಣುತ್ತಿದೆ.
Advertisement