
ಟೊರಾಂಟೋ: ಟೊರಾಂಟೋ ಫಿಲ್ಮ್ ಕ್ರಿಟಿಕ್ಸ್‌ನಲ್ಲಿ ರಿತೇಶ್ ಬಾತ್ರಾ ಅವರ 'ದ ಲಂಚ್ ಬಾಕ್ಸ್ 'ಸಿನಿಮಾ ಬೆಸ್ಟ್ ಫಸ್ಟ್ ಫಿಲ್ಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ ಚಿತ್ರ 2013ರ ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಕ್ರಿಟಿಕ್ಸ್ ವೀಕ್ ವ್ಯೂವರ್ಸ್ ಚಾಯ್ಸ್ ಅವಾರ್ಡ್ ಗಿಟ್ಟಿಸಿಕೊಂಡಿತ್ತು.
ಒಂಟಿತನ ಅನುಭವಿಸುವ ಗೃಹಿಣಿ ಮತ್ತು ಇನ್ನೇನು ನಿವೃತ್ತನಾಗಲಿರುವ ವಿಧುರನೊಬ್ಬನ ನಡುವೆ ತಪ್ಪಾಗಿ ಕೈ ಸೇರಿದ ಲಂಚ್‌ಬಾಕ್ಸ್ ಮೂಲಕ ನಡುವೆ ನಡೆಯುವ ವಿಚಾರ ವಿನಿಮಯವೇ ಲಂಚ್ ಬಾಕ್ಸ್ ಚಿತ್ರ ಕಥಾ ವಸ್ತು.
ಇರ್ಫಾನ್ ಖಾನ್, ನಮ್ರತಾ ಕೌರ್ ಮತ್ತು ನಾವಜುದ್ದೀನ್ ಸಿದ್ಧಿಖಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬಾತ್ರಾ ಈ ಮೊದಲು 'ದ ಮಾರ್ನಿಂಗ್ ರಿಚ್ಯುಲ್', 'ಗರೀಬ್ ನವಾಜ್ ಕಿ ಟ್ಯಾಕ್ಸಿ ', 'ಕೆಫೆ ಕೈರೋ' ಮೊದಲಾದ ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ.
2013 ಸೆಪ್ಟೆಂಬರ್ 20ರಂದು ಭಾರತದಲ್ಲಿ ತೆರೆಕಂಡ 'ದ ಲಂಚ್ ಬಾಕ್ಸ್ ' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತ್ತು.
Advertisement