
ಮುಂಬೈ: ಒಂದು ಕಾಲದಲ್ಲಿ ನಟಿ ಕರೀನಾ ಕಪೂರ್ ಜೊತೆ ಡೇಟ್ ಮಾಡುತ್ತಿದ್ದ ನಟ ಶಾಹಿದ್ ಕಪೂರ್, ಕರೀನಾ ಜೊತೆ ನಟಿಸಲು ಎಂದೂ ನಿರಾಕರಿಸಿಲ್ಲ ಎಂದಿದ್ದಾರೆ ಹಾಗೂ "ಉಡ್ತಾ ಪಂಜಾಬ್" ಚಿತ್ರ ತಂಡವನ್ನು ಕರೀನಾ ಸೇರಲಿದ್ದಾರೆಯೇ ಎಂಬುದು ತಿಳಿದಿಲ್ಲ ಎಂದಿದ್ದಾರೆ.
ಅಭಿಷೇಕ್ ಚೌಬೆ ನಿರ್ದೇಶನದ "ಉಡ್ತಾ ಪಂಜಾಬ್" ಚಲನಚಿತ್ರದಲ್ಲಿ ಶಾಹಿದ್ ಮತ್ತು ಕರಿನಾ ಒಟ್ಟಿಗೆ ನಟಿಸಲು ಒಪ್ಪಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.
ಫಿದಾ, ೩೬ ಚೈನಾ ಟೌನ್, ಮಿಲೇಂಗೆ ಮಿಲೇಂಗೆ ಮತ್ತು ಚುಪ್ ಚುಪ್ಕೆ ಮುಂತಾದ ಸಿನೆಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅವರಿಬ್ಬರ ಸಂಬಂಧದ ವದಂತಿ ಹರಡಿತ್ತು. ಆದರೆ ಇದು ೨೦೦೭ ರಲ್ಲಿ ಮುರಿದು ಬಿದ್ದಿತ್ತು. ಇದರ ನಂತರ ಅವರ ಕೊನೆಯ ಸಿನೆಮಾ "ಜಬ್ ವಿ ಮೆಟ್"
Advertisement