
ಮುಂಬೈ: ಅಮೀರ್ ಖಾನ್ ನಟಿಸಿರುವ 'ಪಿಕೆ' ಸಿನೆಮಾವನ್ನು ಜಾಣ ಸಿನೆಮಾ ಎಂದಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ಧರ್ಮ ಎಂಬ ವಿಷಯವನ್ನು ಅತಿ ಸೂಕ್ಷವಾಗಿ ಹಾಸ್ಯಮಯವಾಗಿ ಚಲನಚಿತ್ರದಲ್ಲಿ ನಿಭಾಯಿಸಿರುವುದಕ್ಕೆ ರಾಜಕುಮಾರ್ ಹಿರಾನಿ "ಧೈರ್ಯವಂತ ನಿರ್ದೇಶಕ" ಎಂದು ಬಣ್ಣಿಸಿದ್ದಾರೆ.
ಬಾಕ್ಸ್ ಆಫಿಸ್ ನಲ್ಲಿ ಉತ್ತಮ ಗಳಿಕೆ ಹೊಂದಿರುವ 'ಪಿಕೆ' ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಹಿಂದೂ ಸಂಪ್ರದಾಯಗಳನ್ನು ಗೇಲಿ ಮಾಡಿರುವುದಕ್ಕೆ ಕೆಲವರು ಸಿನೆಮಾವನ್ನು ದೂಷಿಸುತ್ತಿದ್ದರೆ, ಇನ್ನೂ ಕೆಲವರು ೨೦೧೪ರ ಅತ್ಯುತ್ತಮ ಸಿನೆಮಾ ಎನ್ನುತ್ತಿದ್ದಾರೆ.
ಈ ರೀತಿಯ ವಿವಾದಗಳನ್ನು ಸೃಷ್ಟಿಸುವುವರ ಬಗ್ಗೆ ಮಾತನಾಡಿದ ಕಶ್ಯಪ್ "ಯಾರಿಗಾದರೂ ಕನ್ನಿಡಿ ತೋರಿಸಿದರೆ ಅದು ಅಹಿತಕರವಾಗಿರುತ್ತದೆ. ಆದರೆ ಈ ಸಿನೆಮಾ ಅದ್ಭುತ ಗುಣ ಎಂದರೆ ಇದು ಜಾಣತನದಿಂದ ಕೂಡಿದೆ. ಈ ಸಿನೆಮಾ ನೋಡಿ ಇದು ನನಗೆ ನೋವುಂಟು ಮಾಡಿತು ಎಂದರೆ ಈ ಸಿನೆಮಾ ಸರಿ ಇದೆ ಮತ್ತು ಪರಿಣಾಮಕಾರಿಯಾಗಿದೆ ಎಂಬುದು ಸ್ಪಷ್ಟ" ಎಂದಿದ್ದಾರೆ.
ಸಿನೆಮಾದ ಕಂಟೆಂಟ್ ನಿಂದ ಆಗಾಗ ಅವಮಾನಿತರಾಗುವುದರಿಂದ ಜನ ನಿಲ್ಲಿಸಬೇಕು ಅನುರಾಗ್, ಸಮಾಜದಲ್ಲಿ ಎಲ್ಲ ರೀತಿಯ ಚರ್ಚೆ ಮತ್ತು ಭಿನಾಭಿಪ್ರಾಯಗಳನ್ನು ಇರಲು ಬಿಡಿ ಎಂದಿದ್ದಾರೆ.
Advertisement