ಪಿಕೆ ಕಲಿಸಿದ ಪಾಠ

ಏಲಿಯನ್‌ಗಳೆಂದರೆ ವಿಚಿತ್ರ, ವಿಕಾರಗಳಾಗೇ ಎಲ್ಲ ಚಿತ್ರಗಳಲ್ಲೂ ಸೃಷ್ಟಿಸಿರುವಾಗ ಅವರೂ...
ಪಿಕೆ ಚಿತ್ರ
ಪಿಕೆ ಚಿತ್ರ

ಏಲಿಯನ್‌ಗಳೆಂದರೆ ವಿಚಿತ್ರ, ವಿಕಾರಗಳಾಗೇ ಎಲ್ಲ ಚಿತ್ರಗಳಲ್ಲೂ ಸೃಷ್ಟಿಸಿರುವಾಗ ಅವರೂ ನಮ್ಮಂತೆಯೇ ಇರಬಹುದು ಎನ್ನುತ್ತದೆ. ಪಿಕೆ. ನಾವು ಬೇರೆ ಗ್ರಹಗಳಲ್ಲಿ ಮನುಷ್ಯರಿದ್ದಾರೆಯೇ ಎಂದು ಹುಡುಕಲು ಹೋದಂತೆ ಬೇರೆ ಗ್ರಹದ ಜೀವಿಗಳೂ ಹುಡುಕಾಟ ನಡೆಸಿರಬಹುದಲ್ಲವೇ?

ಆ ಜೀವಿಗಳಲ್ಲಿ ಸುಳ್ಳಿಲ್ಲ, ಕಪಟವಿಲ್ಲ, ಆದರೆ ವಿಚಾರತರ್ಕವಿದೆ ಎಂಬಂತೆ ಏಲಿಯನ್‌ಗಳನ್ನು ಸುಸಂಸ್ಕೃತರಾಗಿ ತೋರಿಸಿದ್ದಾರೆ ರಾಜ್‌ಕುಮಾರ್ ಹಿರಾನಿ. ಆಮೀರ್‌ಖಾನ್‌ನ ಮಗುವಿನಂಥಾ ಕುತೂಹಲದ ಮೂಲಕ ಹಾಸ್ಯಮಯ ಧಾಯಿಯಲ್ಲೇ ಪಿಕೆ ಹಲವಾರು ವಿಚಾರಗಳನ್ನು ನಮ್ಮ ಮುಂದಿಡುತ್ತದೆ. ಖಂಡಿತವಾಗಿ ನಮ್ಮ ಅಂಥ ಶ್ರದ್ಧೆಗಳನ್ನು ಬಡಿದೇಳಿಸುತ್ತದೆ. ಹಾಗಿದ್ದರೆ ಚಿತ್ರದಿಂದ ಕಲಿಯಬಹುದಾದದ್ದೇನು?

ಹುಟ್ಟಿನಿಂದ ಮಾಡಿಕೊಂಡು ಬಂದದ್ದೇ ಇರಬಹುದು. ನಿಮ್ಮ ಧರ್ಮ ಅದನ್ನೇ ಹೇಳಿಕೊಂಡು ಬಂದಿರಬಹುದು. ಹಾಗೆಂದು ಅಂಧಶ್ರದ್ಧೆಗಳನ್ನು ಪ್ರಶ್ನಿಸುವುದು ತಪ್ಪಲ್ಲ. ಕುತೂಹಲ ತಣಿಸಿಕೊಳ್ಳುವುದು ಜ್ಞಾನಕ್ಕೆ ದಾರಿ. ನಮಗೆ ಕಲಿಸಿದ್ದೆಲ್ಲ ಸರಿಯೇ ಇರಬೇಕೆಂದಿಲ್ಲ. ಹಿರಿಯರ ಮಾತಿಗಿಂತ ಲಾಜಿಕ್‌ಗೆ, ನಿಮ್ಮ ಮನಸ್ಸು ಹೇಳಿದಂತೆ ಕೇಳಿ.

ಶಾಸ್ತ್ರ ಸಂಪ್ರದಾಯವನ್ನು ಪ್ರಶ್ನಿಸುವುದು ಪಾಪವೇನಲ್ಲ. ಏಕೆ ಮಾಡುತ್ತೇವೆಂದೇ ತಿಳಿಯದೆ ಮಾಡುವುದು ತಪ್ಪು. ನೋಡಿದ್ದು, ಕೇಳಿದ್ದು,  ಓದಿದ್ದನ್ನು ಅನುಮಾನಿಸಿ, ತರ್ಕಿಸಿ.

ನಿಮ್ಮನ್ನು ನೀವು ನಂಬಿ. ದೇವರ ಮ್ಯಾನೇಜರ್‌ಗಳನ್ನಲ್ಲ. ದೇವರಿಗೂ ನಮಗೂ ಮೀಡಿಯೇಟರ್‌ಗಳ ಅವಶ್ಯಕತೆಯಿಲ್ಲ. ದೇವರನ್ನು ಕಾಪಾಡಲು ಯಾರೂ ಬೇಕಿಲ್ಲ. ವಿಶ್ವವನ್ನೇ ಸೃಷ್ಟಿಸಿದವನ ಕಾಪಾಡಲು ನಾವೆಷ್ಟರವರು? ಮೀಡಿಯೇಟರ್‌ಗಳು ಸೃಷ್ಟಿಸಿದ ದೇವರೇ ಬೇರೆ, ನಮ್ಮನ್ನು ಸೃಷ್ಟಿಸಿದವನೇ ಬೇರೆ.

ಇನ್ನೊಬ್ಬರನ್ನು ಪ್ರೀತಿಸುತ್ತೇವೆಂದರೆ ಅವರು ನಮಗೆ ಸಿಗಲೇಬೇಕೆಂದು ಹಟ ಹಿಡಿಯುವುದಲ್ಲ. ಅವರ ಖುಷಿಗಾಗಿ ಏನು ಮಾಡಬಹುದೋ ಅದನ್ನು ಮಾಡುವುದು. ಒಂದು ವೇಳೆ ದೂರ ಹೋಗುವುದೇ ಅವರನ್ನು ಖುಷಿ ಪಡಿಸುತ್ತದೆಂದರೆ, ಅದನ್ನೂ ಮಾಡಿ. ಇದರಿಂದ ಅವರ ಕಣ್ಣಿನಲ್ಲಿ ದೊಡ್ಡ ಮನುಷ್ಯರಾಗುತ್ತೀರಿ.

ಯಾವ ಮನುಷ್ಯನ ಮೇಲೂ ಈತ ಯಾವ ಧರ್ಮದವನೆಂಬ ಹಚ್ಚೆಮಚ್ಚೆಗಳಿರುವುದಿಲ್ಲ. ಹಿಂದೂವೇ ಗಡ್ಡ ಬಿಟ್ಟರೆ ಮುಸಲ್ಮಾನನಾಗುತ್ತಾನೆ. ಮೀಸೆ ಸೇರಿ, ಪೇಟ ಧರಿಸಿದರೆ ಸಿಖ್ ಆಗುತ್ತಾನೆ. ಹುಡುಗಿ ಬುರ್ಖಾ ತೊಟ್ಟರೆ ಮುಸ್ಲಿಂ ಎನ್ನುತ್ತೇವೆ. ನಾವೇ ಸೃಷ್ಟಿಸಿದ ಧರ್ಮವನ್ನು ಹೊರತು ಪಡಿಸಿದರೆ ಮನುಷ್ಯರಾಗಿ ಬಾಳಲು ಸಾಧ್ಯ.

- ರೇಶ್ಮಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com