
ಬಾಲಿವುಡ್ ಚೆಂದುಳ್ಳಿ ಚೆಲುವೆ ಕತ್ರಿನಾ ಕೈಫ್ ಮತ್ತು ಚಾಕೋಲೇಟ್ ಬಾಯ್ ರಣ್‌ಬೀರ್ ಕಪೂರ್ ಅವರಿಬ್ಬರ ನಡುವಿನ ಪ್ರೇಮ ಸಂಬಂಧದ ಕುರಿತು ಬಿ ಟೌನ್‌ನಲ್ಲಿ ಈಗಾಗಲೇ ಹಲವು ಬಣ್ಣ ಬಣ್ಣದ ಗಾಸಿಪ್‌ಗಳು ಹರಿದಾಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.
ಅದಕ್ಕೆ ಪುಷ್ಠಿ ನೀಡುವಂತೆ ಇದೀಗ ಈ ಜೋಡಿ ಹೊಸ ಸುದ್ದಿಗೆ ಗ್ರಾಸವಾಗಿದೆ.
ಬಾಲಿವುಡ್ಡಿನ ಈ ಹಾಟ್ ಜೋಡಿ ಹೊಸ ಅಪಾರ್ಟ್‌ಮೆಂಟ್‌ವೊಂದನ್ನು ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಹಲವು ದಿನಗಳ ಹುಡುಕಾಟದ ನಂತರ ಮುಂಬೈನ ಬಾಂದ್ರದಲ್ಲಿ ಸಹಜೀವನಕ್ಕಾಗಿ ಉತ್ತಮ ಅಪಾರ್ಟ್‌ಮೆಂಟ್‌ವೊಂದನ್ನು ಆಯ್ಕೆ ಮಾಡಿರುವ ಮಾಹಿತಿ ಹೊರಬಿದ್ದಿದೆ. ಎರಡು ಮಹಡಿಗಳು ಹಾಗೂ ವಿಶಾಲ ಅಂಗಳ ಹೊಂದಿರುವ ಈ ಅಪಾರ್ಟ್‌ಮೆಂಟ್ ಸ್ಟಾರ್‌ಗಳ ಮನೆಗಳ ರೀತಿಯಲ್ಲೇ ಅತ್ಯಂತ ಸೊಗಸಾಗಿದೆ.
ತಾರಾ ಜೋಡಿ ತಮ್ಮ ಅಭಿರುಚಿಗೆ ತಕ್ಕಂತೆ ಮನೆಯ ಒಳಾಂಗಣವನ್ನು ಮತ್ತಷ್ಟು ಸುಂದರ ಹಾಗೂ ಆಕರ್ಷಣೆಗೊಳಿಸಲು ಹಲವು ತಜ್ಞರ ಮೊರೆ ಹೋಗಿದ್ದರಂತೆ. ಅಲ್ಲದೆ ಈ ಅಪಾರ್ಟ್‌ಮೆಂಟ್ ಖರೀದಿಗೆ ಮುನ್ನಾ ಇಂಟೀರಿಯರ್ ಡಿಸೈನರ್ ಆಶೀಶ್ ಶಾ ಅವರ ಸಲಹೆ ಪಡಿದಿದ್ದು, ಈ ಕುರಿತು ಮತ್ತಷ್ಟು ಮಾಹಿತಿ ಪಡೆಯಲು ರಣ್‌ಬೀರ್ ತನ್ನ ಸ್ನೇಹಿತ ಅಯ್ಯನ್ ಮುಖರ್ಜಿ ಅವರನ್ನು ಸಂಪರ್ಕಿಸಿದ್ದಾರೆ.
ಈ ಮಧ್ಯೆ ಮದುವೆಯಾಗುತ್ತಾರೆ ಎಂಬ ಸುದ್ದಿಯನ್ನು ತಳ್ಳಿಹಾಕಿರುವ ಈ ಜೋಡಿ, ಈ ಅಪಾರ್ಟ್‌ಮೆಂಟ್ ಸಿದ್ಧವಾದ ಬಳಿಕ ವಾರಾಂತ್ಯವನ್ನು ಇಲ್ಲಿ ಕಳೆಯಲು ಉದ್ದೇಶಿಸಿರುವುದಾಗಿ ವಿವರಿಸಿದ್ದಾರೆ.
ರಣಬೀರ್‌ನ ಸಹೋದರಿ ಕರೀನಾ ಕಪೂರ್ ಹಾಗೂ ನಟ ಸೈಫ್ ಅಲಿ ಖಾನ್ ತಮ್ಮ ಮದುವೆಗೆ ಮುನ್ನಾ ಧೀರ್ಘಕಾಲ ಒಟ್ಟಿಗೆ ವಾಸವಾಗಿದ್ದರು ಎಂಬುದು ಎಲ್ಲರಿಗೂ ಗೊತ್ತೆ ಇದೆ. ಒಟ್ಟಿನಲ್ಲಿ ಕತ್ರಿನಾ-ರಣ್‌ಬೀರ್ ಸ್ವೀಟ್ ಜೋಡಿ ತಮ್ಮ ಪ್ರೀತಿಯ ಗೂಡನ್ನು ಸೇರಿಕೊಳ್ಳುವ ಸಮಯ ಬಂದೊದಗಿದೆ ಎಂದು ಬಾಲಿವುಡ್ ಮಂದಿ ಮಾತಡಿಕೊಳ್ಳುತ್ತಿದ್ದಾರೆ.
Advertisement