
ಹೃತಿಕ್ ರೋಷನ್, ಅಮೀರ್ ಖಾನ್, ಶಾರುಖ್ ಖಾನ್ ಎಲ್ಲ ಒಂದಲ್ಲ ಒಂದೆಡೆ ತಮ್ಮ ಮಕ್ಕಳೊಂದಿಗೆ ಕಾಣಿಸಿಕೊಂಡಾಯಿತು. ಈ ಎಲ್ಲಕ್ಕಿಂತ ಉತ್ತಮ ವಿಲನ್ ನಟ ಕಮಲ್ ಹಾಸನ್ ತನ್ನ ಮಗಳು ಶೃತಿ ಹಾಸನ್‍ನೊಂದಿಗೆ ಇತ್ತೀಚಿಗೆ ವಿಜಯ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡು ನೆರೆದವರನ್ನು ಮನರಂಜಿಸಿದ್ದು ವಿಭಿನ್ನವಾಗಿತ್ತು.
ಕಮಲ್‍ನ ಖ್ಯಾತ ತಮಿಳು ಚಿತ್ರ `ಮೈಕಲ್ ಮದನ ಕಾಮ ರಾಜನ್'ನ `ರಂ ಬಮ್ ಬಮ್ ಅರಾಂ ಬಮ್' ಹಾಡಿಗೆ ಅಪ್ಪ ಮಗಳು ಕುಣಿದು, ವೀಕ್ಷಕರನ್ನು ಸೀಟಿ ಹಾಕಿ, ಚಪ್ಪಾಳೆ ಹೊಡೆದು ಕುಣಿಯುವಂತೆ ಮಾಡಿದರು. ಇದು ಜನರಲ್ಲಿ ಅದೆಷ್ಟು ಮೋಡಿ ಮಾಡಿದೆ ಎಂದರೆ ಎಲ್ಲರೂ ಈ ಇಬ್ಬರದ್ದೊಂದು ಸಿನಿಮಾ ನಿರೀಕ್ಷಿಸುತ್ತಿದ್ದಾರಂತೆ. ಅಷ್ಟೇ ಅಲ್ಲ, ಈ ಜೋಡಿ ಸೆಲ್ಫಿ ತೆಗೆದುಕೊಂಡ ಶೈಲಿಯೂ ಕೂಲ್ ಅಪ್ಪ ಮಗಳು ಎನಿಸುವಂತಿತ್ತು. `ಗಬ್ಬರ್ ಈಸ್ ಬ್ಯಾಕ್' ನಟಿಯೊಂದಿಗೆ `ಚಾಚಿ 420' ನಟನ ಚಿತ್ರದ ಕಾಲ್‍ಶೀಟ್‍ಗೆ ನಿರ್ಮಾಪಕರು ಕ್ಯೂ ನಿಲ್ಲಬಹುದಾ?
Advertisement