
ಮುಂಬೈ: ಇಂದಿಗೆ ೪೦ ವರ್ಷ ತುಂಬಿರುವ ಬಾಲಿವುಡ್ ಬ್ಲಾಕ್ ಬಸ್ಟರ್ ಚಲನಚಿತ್ರ 'ಶೋಲೆ'ಯಲ್ಲಿ 'ಬಸಂತಿ' ಪಾತ್ರ ಪೋಷಿಸಿದ್ದ ನಟಿ-ರಾಜಕಾರಿಣಿ ಹೇಮಮಾಲಿನಿ, ಈಗಲೂ ತಮ್ಮನ್ನು ಆ ಪಾತ್ರದ ಹೆಸರಿನಿಂದಲೇ ಜನ ಗುರುತಿಸುತ್ತಾರೆ ಎಂದಿದ್ದಾರೆ.
"ಶೋಲೆಗೆ ೪೦ ವರ್ಷ ತುಂಬಿದ್ದರೂ ಇನ್ನು ಶಕ್ತಿಯುತವಾಗಿಯೇ ಮುನ್ನಡೆಯುತ್ತಿದೆ. ಇಂತಹ ದಂತಕತೆಯ ಭಾಗವಾಗಿದ್ದಕ್ಕೆ ಖುಷಿಯಾಗಿದೆ. ನನ್ನನ್ನು ಜನ ಇನ್ನೂ ಬಸಂತಿ ಎಂತಲೇ ಕರೆದು ಆ ಯುಗಕ್ಕೆ ಕೊಂಡೊಯುತ್ತಾರೆ" ಎಂದು ಹೇಮಮಾಲಿನಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ರಮೇಶ್ ಸಿಪ್ಪಿ ನಿರ್ದೇಶನದ 'ಶೋಲೆ' ೧೯೭೫ ರ ಸ್ವಾತಂತ್ರ್ಯ ದಿನಾಚರಣೆಯ ದಿನ ಬಿಡುಗಡೆಯಾಗಿತ್ತು.
ಹಳ್ಳಿ ಹುಡುಗಿ ಬಸಂತಿ ಪಾತ್ರ ಮಾಡಿದ್ದ ಹೇಮ ಮಾಲಿನಿ, ಚಲನಚಿತ್ರದಲ್ಲಿ ವೀರು ಪಾತ್ರ ವಹಿಸಿದ್ದ ಧರ್ಮೇಂದ್ರನ ಎದುರು ನಟಿಸಿದ್ದರು.
'ಜಬ್ ತಕ ಹೈ ಜಾನ್' ಹಾಡಿನ ನೃತ್ಯಕ್ಕಾಗಿ ಹೇಮ ಮಾಲಿನಿ ಪ್ರೇಕ್ಷಕರ ಮನಸೂರೆಗೊಂಡಿದ್ದರು.
Advertisement