
ಮುಂಬೈ: ತನು ವೆಡ್ಸ್ ಮೆನು, ಕ್ವೀನ್ ಮುಂತಾದ ಸೂಪರ್‍ಹಿಟ್ ಚಿತ್ರಗಳ ಖ್ಯಾತಿಯ ಕಂಗನಾ ರಣಾವತ್ ಬಾಲಿವುಡ್‍ನ ಸದ್ಯದ ನಂ.1 ನಟಿ ಎನ್ನುವುದು ನಿಸ್ಸಂಶಯ. ರು.11 ಕೋಟಿ ಚೆಕ್ ಸ್ವೀಕರಿಸಿರುವ ಈಕೆ ಹಿಂದಿ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆದ ನಟಿಯೆಂಬ ದಾಖಲೆಗೆ ಪಾತ್ರಳಾಗಿದ್ದಾಳೆ. ಸಾಲುಸಾಲು ಯಶಸ್ಸು ಕಂಡಿರುವ ಆಕೆ ಹೊಸ ಚಿತ್ರಕ್ಕೆ ಈ ದುಬಾರಿ ಸಂಭಾವನೆ ಪಡೆದಿರುವುದು ಸುಳ್ಳು ಅನಿಸುತ್ತಿಲ್ಲವಾದರೂ, ಕಂಗನಾ ಮಾತ್ರ ಈ ಸುದ್ದಿಯನ್ನು ದೃಢಪಡಿಸಿಲ್ಲ. ಬಿಡುಗಡೆಗೆ ಸಿದ್ಧವಿರುವ ಹೊಸ ಚಿತ್ರ ಕಟ್ಟಿ ಬಟ್ಟಿಯ ಪ್ರಚಾರ ಕಾರ್ಯಕ್ರಮದಲ್ಲಿರುವ ಕಂಗನಾ, ``ನನಗೆ ಸಿಕ್ಕಿರುವ ಯಶಸ್ಸು ಹಾಗೂ ನನ್ನ ಅಬಿsನಯ ಆ ಮೊತ್ತದ ಸಂಭಾವನೆ ತಂದುಕೊಟ್ಟಲ್ಲಿಅಚ್ಚರಿ ಬೇಡ'' ಎಂದಿದ್ದಾಳೆ
Advertisement