ರೈತರ ಆತ್ಮಹತ್ಯೆ: ಕ್ರಾಂತಿಗೆ ಇದು ಸಮಯ ಎಂದ ನಟ ನಾನಾ ಪಾಟೇಕರ್

'ವೆಲ್ಕಂ ಬ್ಯಾಕ್' ಸಿನೆಮಾದ ಬಿಡುಗಡೆಗೆ ಕಾಯುತ್ತಿರುವ ನಟ ನಾನಾ ಪಾಟೇಕರ್ ಅವರಿಗೆ ತಮ್ಮ ವೃತಿಪರ ಜೀವನದ ಬಗ್ಗೆ ಸ್ಪಷ್ಟತೆ ಇದೆ. ಒಳ್ಳೆಯ ಹಣ ನೀಡಿದರಷ್ಟೇ
ನಟ ನಾನಾ ಪಾಟೇಕರ್
ನಟ ನಾನಾ ಪಾಟೇಕರ್

ಮುಂಬೈ: 'ವೆಲ್ಕಂ ಬ್ಯಾಕ್' ಸಿನೆಮಾದ ಬಿಡುಗಡೆಗೆ ಕಾಯುತ್ತಿರುವ ನಟ ನಾನಾ ಪಾಟೇಕರ್ ಅವರಿಗೆ ತಮ್ಮ ವೃತಿಪರ ಜೀವನದ ಬಗ್ಗೆ ಸ್ಪಷ್ಟತೆ ಇದೆ. ಒಳ್ಳೆಯ ಹಣ ನೀಡಿದರಷ್ಟೇ ಹಾಲಿವುಡ್ ನಲ್ಲಿ ನಟಿಸುತ್ತಾರಂತೆ. ೯೦ರ ದಶಕದ ವರದಿಯೊಂದು ನೆನಪಿಗೆ ಬರುತ್ತದೆ. ವಾಣಿಜ್ಯ ಕೇಂದ್ರವನ್ನು ಉದ್ಘಾಟಿಸಲು ೬ ಅಂಕೆಯ ಮೊತ್ತವನ್ನು ಇವರು ಕೇಳಿದ್ದು, ಅದು ನನಗಲ್ಲ ಚ್ಯಾರಿಟಿಗಾಗಿ ಚೆಕ್ ಬರೆಯಿರಿ ಎಂದದ್ದು!

"ನಾನು ಐದನೇ ತರಗತಿ ಪಾಸ್ ಮಾಡಿರುವ ಮರಾಠಿಯ ಹಳ್ಳಿ ಮನುಷ್ಯ, ಆದುದರಿಂದ ನನಗೆ ಈಗಲೂ ಇಂಗ್ಲಿಶ್ ಸರಿಯಾಗಿ ಬರುವುದಿಲ್ಲ" ಎನ್ನುತ್ತಾರೆ ನಟ.

ಇತ್ತೀಚೆಗೆ ಕನ್ನಡ ಸಿನೆಮಾವೊಂದರಲ್ಲಿ ನಟಿಸಿ ಮುಗಿಸಿದ್ದು, ಅದು ಡಬ್ಬಿಂಗ್ ಹಂತದಲ್ಲಿದೆಯಂತೆ.

ತಮ್ಮ ಹೊಸ ಚಿತ್ರದ ಬಗ್ಗೆ "ಈ ಸಿನೆಮಾ ಸ್ವಾತಂತ್ರ್ಯಪೂರ್ವ ದಿನಗಳಲ್ಲಿ ಭಾರತೀಯ ರಾಜಕಾರಣದ ಬಗ್ಗೆ. ಎಲ್ಲ ನಟರು ಭಾರತೀಯರೇ ಆದರೆ ನಿರ್ದೇಶಕ ಹಾಲಿವುಡ್ ನವರು" ಎನ್ನುತ್ತಾರೆ.

ಇತ್ತೀಚೆಗೆ ರೈತರ ಆತ್ಮಹತ್ಯೆ ಬಗ್ಗೆ ತಲೆ ಕೆಡಿಸಿಕೊಂಡಿರುವ ನಾನ ಪಾಟೇಕರ್, ಮೃತ ರೈತರ ಕುಟುಂಬಗಳಿಗೆ ಸಾವಿರಾರು ರುಪಾಯಿಗಳ ದಾನ ಮಾಡಿದ್ದಾರೆ. ವೈಭವಯುತ ಕಾರುಗಳನ್ನು ಕೊಳ್ಳದೆ ಆಟೋ ರಿಕ್ಷಾಗಳಲ್ಲಿ ಚಲಿಸುವ ನಟ, ಇದು ಕೋಟಿ ಕೋಟಿ ದುಡಿಯುವುದಕ್ಕಿಂತಲೂ ಅರ್ಥಪೂರ್ಣ ಎಂದು ಟ್ಯಾಬ್ಲಾಯ್ಡ್ ಪತ್ರಿಕೆಯೊಂದಕ್ಕೆ ತಿಳಿಸಿದ್ದರು.

"ಇದು ಕ್ರಾಂತಿಗೆ ಸಮಯ. ರೈತ ತನ್ನನ್ನು ಕೊಂದುಕೊಳ್ಳಬಹುದಾದರೆ, ನಾಳೆ ಅವರು ನಿಮ್ಮನ್ನು ಕೊಲ್ಲಬಹುದು. ಅಸಹಾಯಕತೆ, ನಿರಾಶೆ ಅವರಲ್ಲಿ ರೋಷ ಹುಟ್ಟಿಸಬಹುದು. ಅವರು ನಮಗೆ ರೊಟ್ಟಿ ನೀಡುವಾಗ ಕನಿಷ್ಠ ಪಕ್ಷ ಸ್ವಲ್ಪ ವಿದ್ಯುತ್ ಮತ್ತು ನೀರು ನೀಡಲು ಸಾಧ್ಯವಿಲ್ಲವೇ?" ಎನ್ನುತ್ತಾರೆ.

ಇಲ್ಲಿಯವರೆಗೂ ಮಹಾರಾಷ್ಟ್ರದಾದ್ಯಂತ ಆತ್ಮಹತ್ಯೆ ಮಾಡಿಕೊಂಡಿರುವ ೧೧೨ ಕುಟುಂಬಗಳನ್ನು ಭೇಟಿ ಮಾಡಿರುವ ನಾನಾ, ಇನ್ನು ೭೦೦ ಕುಟುಂಬಗಳನ್ನು ಭೇಟಿ ಮಾಡುವವರಿದ್ದಾರೆ. ಇದರ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜೊತೆ ಕೂಡ ಚರ್ಚಿಸಿದ್ದು ಒಳ್ಳೆಯ ಬೆಳವಣಿಗೆಗಾಗಿ ಕಾಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com