
ನವದೆಹಲಿ: ೧೯೭೫ ರ ಬ್ಲಾಕ್ ಬಸ್ಟರ್ ಚಲನಚಿತ್ರ 'ಶೋಲೆ'ಯನ್ನು ಸಿನೆಮಾ ನಿರ್ದೇಶಕ ರಮೇಶ್ ಸಿಪ್ಪಿ ಅವರ ಪರವಾನಗಿ ಇಲ್ಲದೆ ರಿಮೇಕ್ ಮಾಡಿದ್ದಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಅವರ ನಿರ್ಮಾಣ ಸಂಸ್ಥೆಗೆ ೧೦ ಲಕ್ಷ ರೂ ದಂಡ ವಿಧಿಸಿದೆ.
"ರಾಮ್ ಗೋಪಾಲ್ ವರ್ಮಾ 'ರಾಮ್ ಗೋಪಾಲ್ ವರ್ಮಾ ಕಿ ಆಗ್' ಚಿತ್ರ ನಿರ್ಮಿಸಿ ಬೇಕಂತಲೇ ಹಕ್ಕು ಸ್ವಾಮ್ಯಗಳ ಕಾನೂನು ಮುರಿದಿದ್ದಾರೆ" ಎಂದು ನ್ಯಾಯಾಧೀಶ ಮನಮೋಹನ್ ಸಿಂಗ್ ಹೇಳಿದ್ದಾರೆ.
ಶೋಲೆ ಮಿಡಿಯಾ ಮತ್ತು ಮನರಂಜನೆ ಸಂಸ್ಥೆ ಹೊಂದಿರುವ ಹಕ್ಕು ಸ್ವಾಮ್ಯವನ್ನು ರಾಮ್ ಗೋಪಾಲ್ ವರ್ಮಾ ಮುರಿದಿದ್ದಾರೆ ಎಂದು ಮೂಲ ನಿರ್ಮಾಪಕರಾದ ವಿಜಯ್ ಸಿಪ್ಪಿ ಮತ್ತು ಜಿ ಪಿ ಸಿಪ್ಪಿ ಅವರ ಕುಟುಂಬ ವರ್ಗದ ಸಾಚಾ ಸಿಪ್ಪಿ ರಾಮ್ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಕೋರ್ಟ್ ರಾಮ್ ಗೋಪಾಲ್ ವರ್ಮಾ ಮತ್ತು ಅವರ ನಿರ್ಮಾಣ ಸಂಸ್ಥೆಗೆ ೧೦ ಲಕ್ಷ ರೂ ದಂಡ ಹಾಕಿ, 'ಗಬ್ಬರ್ ಅಥವಾ ಗಬ್ಬರ್ ಸಿಂಗ್' ಹೆಸರಿನ ಪಾತ್ರವನ್ನು ಮತ್ತೆ ಬಳಸದಂತೆ ಸೂಚನೆ ನೀಡಿದೆ.
Advertisement