
ನವದೆಹಲಿ: ಹಾಲಿವುಡ್ ನಟ ವಿನ್ ಡೀಸೆಲ್ ಅವರೊಂದಿಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ವದಂತಿಗೆ ರೆಕ್ಕೆ ಪುಕ್ಕ ಬಂದಿದೆ.
ಇತ್ತೀಚೆಗಷ್ಟೇ ನಟ ವಿನ್ ಡಿಸೇಲ್ ಅವರೊಂದಿಗಿನ ತಮ್ಮ ಚಿತ್ರವನ್ನು ದೀಪಿಕಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಆ ಚಿತ್ರದ ಹಿಂಭಾಗ 'ಕ್ಷ್Xಕ್ಷ್' ಎಂದಿತ್ತು. ಆದುದರಿಂದ ಅಭಿಮಾನಿಗಳು ದೀಪಿಕಾ ಮುಂದಿನ ಚಿತ್ರದಲ್ಲಿ ವಿನ್ ಡೀಸೆಲ್ ಜೊತೆಗೆ ನಟಿಸಲಿದ್ದಾರೆ ಎಂದು ಊಹಿಸಿದ್ದಾರೆ.
'ತಮಾಶಾ' ನಟಿ ಸದ್ಯಕ್ಕೆ 'ಬಾಜಿರಾವ್ ಮಸ್ತಾನಿ' ಸಿನೆಮಾ ಬಿಡುಗಡೆಗೆ ಕಾಯುತ್ತಿದ್ದಾರೆ.
Advertisement