
ನವದೆಹಲಿ: ೨೦೦೨ ಹಿಟ್ ಅಂಡ ರನ್ ಪ್ರಕರಣದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ದೋಷಮುಕ್ತ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿರುವುದಕ್ಕೆ ನಟಿ ಸೋನಮ್ ಕಪೂರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಸೂರಜ್ ಬರ್ಜತ್ಯ ಅವರ 'ಪ್ರೇಮ್ ರತನ್ ಧನ ಪಾಯೋ' ಸಿನೆಮಾದಲ್ಲಿ ಸಲ್ಮಾನ್ ಜೊತೆ ನಟಿಸಿದ ಸೋನಮ್ "ನಾನು ಅವರ ಈ ತೀರ್ಪಿಗೆ ಖುಷಿಯಾಗಿದ್ದೇನೆ. ಅವರು ನನ್ನ ಗೆಳೆಯ. ಯಾವ ನನ್ನ ಗೆಳೆಯರಿಗೂ ನೋವಾಗುವುದು ನನಗೆ ಇಷ್ಟವಿಲ್ಲ. ಸಲ್ಮಾನ್ ಒಳ್ಳೆಯ ಮನುಷ್ಯ" ಎಂದು ಶುಕ್ರವಾರ ಹೇಳಿದ್ದಾರೆ.
ಗುರುವಾರ ಸಲ್ಮಾನ್ ನನ್ನು ಎಲ್ಲ ಆರೋಪಗಳಿಂದ ದೋಷಮುಕ್ತಗೊಳಿಸಿದೆ ಬಾಂಬೆ ಹೈಕೋರ್ಟ್.
ದೀಪಾವಳಿಗೆ ಬಿಡುಗಡೆಯಾದ 'ಪ್ರೇಮ್ ರತನ್ ಧನ ಪಾಯೋ' ಒಳ್ಳೆಯ ಯಶಸ್ಸು ಕಂಡು ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ.
Advertisement