ಸೆನ್ಸಾರ್ ಮಂಡಲಿಯಿಂದ ನನಗೆಂದೂ ತೊಂದರೆಯಾಗಿಲ್ಲ: ಭನ್ಸಾಲಿ

೧೯೯೬ ರಲ್ಲಿ "ಖಾಮೋಶಿ: ದ ಮ್ಯೂಸಿಕಲ್' ಸಿನೆಮಾದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಸಂಜಯ್ ಲೀಲಾ ಭನ್ಸಾಲಿ ಅವರು ಸೆನ್ಸಾರ್ ಮಂಡಲಿಯ ಜೊತೆಗಿನ
ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ
ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ

ಮುಂಬೈ: ೧೯೯೬ ರಲ್ಲಿ "ಖಾಮೋಶಿ: ದ ಮ್ಯೂಸಿಕಲ್' ಸಿನೆಮಾದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಸಂಜಯ್ ಲೀಲಾ ಭನ್ಸಾಲಿ ಅವರು ಸೆನ್ಸಾರ್ ಮಂಡಲಿಯ ಜೊತೆಗಿನ ತಮ್ಮ ಸಂಬಂಧ ಯಾವತ್ತೂ ಚೆನ್ನಾಗಿತ್ತು ಎಂದಿದ್ದಾರೆ.

"ಸೆನ್ಸಾರ್ ಮಂಡಲಿಯಿಂದ ನಾನು ಯಾವುದೇ ತೊಂದರೆಗಳನ್ನು ಅನುಭವಿಸಿಲ್ಲ. ನಿಮ್ಮ ಯೋಚನೆ ಮತ್ತು ಕೆಲಸದ ಶುದ್ಧತೆ ಅವರಿಗೆ ತಿಳಿದಾಗ ಅರ್ಥ ಮಾಡಿಕೊಳ್ಳುತ್ತಾರೆ. ನನಗೆ ಎಂದಿಗೂ ಕೆಟ್ಟ ಅನುಭವವಾಗಿಲ್ಲ" ಎಂದು ಭನ್ಸಾಲಿ ಹೇಳಿದ್ದಾರೆ.

ಬಾಜಿರಾವ್ ಮಸ್ತಾನಿಯ ಯಶಸ್ಸಿನಿಂದ ಖುಷಿಯಾಗಿರುವ ಭನ್ಸಾಲಿ ಈ ಸಿನೆಮಾ ನನಗೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹಲವರು ಭಾವಿಸಿದ್ದರು ಎಂದಿದ್ದಾರೆ. "ಇದು ಸಾಧ್ಯವಾಗುವುದೇ ಇಲ್ಲ ಎಂದವರಿದ್ದರು. ಆದರೆ ಸ್ಕ್ರಿಪ್ಟ್ ಎಷ್ಟು ಶಕ್ತಿಯುತವಾಗಿತ್ತೆಂದರೆ ನಾನೇ ಈ ಸಿನೆಮಾ ಮಾಡಬೇಕೆಂದು ನಿಶ್ಚಯಿಸಿದ್ದೆ. ೧೨ ವರ್ಷಗಳಿಂದ ಈ ಯೋಜನೆಯನ್ನು ತಿದ್ದುತ್ತಾ ಬಂದಿದ್ದೇನೆ. ಒಂದು ಸಮಯದಲ್ಲಿ ಈ ಸಿನೆಮಾ ಮಾಡೇ ತೀರುತ್ತೇನೆಂದು ನಾನು ತಿಳಿದಿದ್ದೆ" ಎಂದು ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ನಟಿಸಿರುವ ಸಿನೆಮಾದ ನಿರ್ದೇಶಕ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com