
ಹಮ್ ಆಪ್ ಕೆ ಹೈ ಕೌನ್, ಮೈನೇ ಪ್ಯಾರ್ ಕಿಯಾ ಮುಂತಾದ ಸೂಪರ್ ಹಿಟ್ ಕೌಟುಂಬಿಕ ಸಿನಿಮಾ ನೀಡಿದ ರಾಜಶ್ರೀ ಪ್ರೊಡಕ್ಷನ್‍ನ ಸೂರಜ್ ಬರ್ಜಾತ್ಯಾ ಈಗಿನ ಕಾಲದ ಬಾಲಿವುಡ್‍ಗೆ ಸಲ್ಲುವುದಿಲ್ಲ ಅಂತ ಅಂದುಕೊಳ್ಳುವ ಹೊತ್ತಿಗೆ ಸಲ್ಲು ನಾಯಕತ್ವದಲ್ಲಿ ಹೊಸ ಚಿತ್ರವೊಂದನ್ನು ತಯಾರಿಸಿಬಿಟ್ಟಿದ್ದಾರೆ.
ಗಮನಿಸಿದ್ದೀರಾ? ಅವರ ಹಿಟ್ ಚಿತ್ರಗಳ ಖಾಯಂ ನಾಯಕ ಸಲ್ಮಾನ್ ಖಾನ್ ಹಾಗೂ ಅದರಲ್ಲೆಲ್ಲ ಅವರ ಹೆಸರು ಪ್ರೇಮ್. ಈ ಶಕುನವನ್ನೇ ನಂಬುವುದಾದರೆ ಅವರ ಹೊಸ ಚಿತ್ರ `ಪ್ರೇಮ್ ರತನ್ ಧನ್ ಪಾಯೋ' ಚಿತ್ರ ಮತ್ತೊಮ್ಮೆ ಬಾಲಿವುಡ್ಡಲ್ಲಿ ದಾಖಲೆಗಳನ್ನು ಧೂಳೀಪಟ ಮಾಡಲೇಬೇಕು. ಉದ್ದುದ್ದ ಸಿನಿಮಾ ಶೀರ್ಷಿಕೆ ಮತ್ತು ಶ್ರೀಮಂತ ದೊಡ್ಡ ಅವಿಭಕ್ತ ಕುಟುಂಬ, ಹತ್ತಾರು ಹಾಡು, ಸೀರೆ, ಪಂಚೆ,ಸಂಪ್ರದಾಯ, ಎಮೋಷನಲ್ ದೃಶ್ಯಗಳನ್ನು ತುಂಬಿಸಿ ಭಾರತೀಯ ಸಂಸ್ಕೃತಿ ಬಿಂಬಿಸುತ್ತಿದ್ದ ಸೂರಜ್ ಚಿತ್ರ ಹಾಲಿವುಡ್ ಟ್ರೆಂಡಿನಲ್ಲಿರುವ ಇಂದಿನ ಹಿಂದಿ ಚಿತ್ರರಂಗದಲ್ಲಿ ಏನು ಮೋಡಿ ಮಾಡುತ್ತದೆಂದು ನೋಡಬೇಕಿದೆ.
ಈ ಬಾರಿ ಅವರ ಚಿತ್ರದ ನಾಯಕಿ ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ! ಆಕೆಗೂ ಅರ್ಜೆಂಟಾಗೊಂದ್ ಹಿಟ್ ಬೇಕಿರೋದ್ರಿಂದ ಈ ಚಿತ್ರದ ಮೇಲೆ ಕನಸಿಟ್ಟುಕೊಂಡಿದ್ದಾಳೆ. ಯಾರ್ ಯಾರಿಗೋ ಲೈಫ್ ಕೊಟ್ಟಿರುವ ಸಲ್ಲು, ತನ್ನ ಸೀನಿಯರ್ ಫ್ರೆಂಡ್ ಮಗಳಿಗೆ ವೃತ್ತಿಬದುಕಿನಲ್ಲಿ ಬ್ರೇಕ್ ನೀಡಬಲ್ಲನಾ ಎಂಬ ಪ್ರಶ್ನೆಗೆ ಬರುವ ದೀಪಾವಳಿ ಹೊತ್ತಿಗೆ ಉತ್ತರ ಸಿಕ್ಕೀತು. ಸದ್ಯಕ್ಕೆ ಸೀರೆ ಸೊಂಟದ ಮೇಲೆ ನಿಲ್ಲುವಷ್ಟು ದಪ್ಪ ಆಗುವ ಪ್ರಯತ್ನದಲ್ಲಿದ್ದಾಳಂತೆ ಸೋನಮï.
Advertisement