ಸನ್ನಿ ಮಹಾತ್ಮೆ!

ಒಂದೇ ವಾರಕ್ಕೆ ಎಂಬತ್ತು ಲಕ್ಷ ಯೂಟ್ಯೂಬ್ ಹಿಟ್ಸ್ ಪಡೆದು ರಜನಿಕಾಂತ್ ದಾಖಲೆಗಳನ್ನೂ ಧೂಳಿಪಟ ಮಾಡಿದೆ ಎಕ್ ಪಹೇಲಿ ಲೀಲಾ ಚಿತ್ರದ ಟ್ರೇಲರ್. ಅಂಥದ್ದೇನಿದೆ ಚಿತ್ರದಲ್ಲಿ?...
ಸನ್ನಿಲಿಯೋನ್
ಸನ್ನಿಲಿಯೋನ್

ಒಂದೇ ವಾರಕ್ಕೆ ಎಂಬತ್ತು ಲಕ್ಷ ಯೂಟ್ಯೂಬ್ ಹಿಟ್ಸ್ ಪಡೆದು ರಜನಿಕಾಂತ್ ದಾಖಲೆಗಳನ್ನೂ ಧೂಳಿಪಟ ಮಾಡಿದೆ ಎಕ್ ಪಹೇಲಿ ಲೀಲಾ ಚಿತ್ರದ ಟ್ರೇಲರ್. ಅಂಥದ್ದೇನಿದೆ ಚಿತ್ರದಲ್ಲಿ?

ಬಹುಶಃ ಈ ಪ್ರಶ್ನೆಯೇ ಆ ವೀಡಿಯೋವನ್ನು ಇಷ್ಟೊಂದು ಹಿಟ್ ಮಾಡಿರೋದು! ಆದರೆ ಆ ಪ್ರಶ್ನೆ ಹುಟ್ಟೋಕೆ ಕಾರಣ ಸನ್ನಿಲಿಯೋನ್. ಶೀರ್ಷಿಕೆಯಲ್ಲಿ ಲೀಲಾ ಅಂತ ಇರೋದಕ್ಕೂ ಸನ್ನಿಲಿಯೋನ್ ನಟಿಸಿರೋದಕ್ಕೂ ಟ್ಯಾಲಿ ಮಾಡಿಕೊಂಡ ರಸಿಕಪ್ರೇಕ್ಷಕರು ರಾಸಲೀಲೆ ದೃಶ್ಯಗಳ ರಾಶಿಯೇ ಇರಬಹುದೆಂದು ನೋಡಿ ನೋಡಿ ನಿರಾಶರಾಗಿದ್ದಾರೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವಂತೇನೂ ಟ್ರೇಲರಲ್ಲಿ ಇಲ್ಲವಾದರೂ, ಟ್ರೇಲರ್‍ಗೆ ರಿಪೀಟ್ ಆಡಿಯೆನ್ಸ್ ಸಿಕ್ಕಿರೋದು ಹೌದು. ಇಷ್ಟು ದಿನ ಇಷ್ಟೆಲ್ಲ ಬಟ್ಟೆ ಧರಿಸಿದ ಸನ್ನಿಯನ್ನು ನೋಡಿರದ ಕಾರಣಕ್ಕೆ ಸನ್ನಿ ಹೊಸರೀತಿ ಕಾಣಿಸುತ್ತಿರಲಿಕ್ಕೂ ಸಾಕು.

 ರಾಜಕುಮಾರಿಯ ಪಾತ್ರದಲ್ಲಿ ನಟಿಸುತ್ತಿರುವ ಸನ್ನಿಲಿಯೋನ್‍ಗೂ ಇದು ಹೊಸ ಅನುಭವವಂತೆ. ಬಾಬ್ಬಿ ನಿರ್ದೇಶನದ ಈ ಚಿತ್ರ ಸನ್ನಿಲಿಯೋನ್ ಳನ್ನು ಬಾಲಿವುಡ್ ಮುಖ್ಯವಾಹಿನಿಯ ನಾಯಕಿಯರ ಪಟ್ಟಿಗೆ ಸೇರಿಸಲಿದೆ ಎಂಬುದು ಸಿನಿಪಂಡಿತರ ಸದ್ಯದ ಲೆಕ್ಕಾಚಾರ. ಚಿತ್ರಕ್ಕಾಗಿ ಕಾಯುತ್ತಿರುವವರು ಬಿಡುಗಡೆಯ ದಿನಾಂಕವನ್ನು ಕ್ಯಾಲೆಂಡರ್‍ನಲ್ಲಿ ಗುರುತು ಮಾಡಿಕೊಳ್ಳಬಹುದು. ಏಪ್ರಿಲ್ ಹತ್ತರಂದು ಚಿತ್ರ ಬಿಡುಗಡೆ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com