
ಮುಂಬೈ: ಬ್ಲಾಗಿಂಗ್ ನಿರತ ಹಾಗೂ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಸಾಮಾಜಿಕ ಜಾಲತಾಣ ಮಾಧ್ಯಮ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಭಾರತೀಯ ಇಂಟರ್ ನೆಟ್ ಮತ್ತು ಮೊಬೈಲ್ ಒಕ್ಕೂಟ (ಐ ಎ ಎಂ ಎ ಐ) ನೀಡಿದೆ.
ಈ ಪ್ರಶಸ್ತಿ ಪ್ರಧಾನ ಸಮಾರಂಭ ದೆಹಲಿಯಲ್ಲಿ ನಡೆಯಲಿದ್ದು, ಬಿಗ್-ಬಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರಣಾಂತರಗಳಿಂದ ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ. ಆದುದರಿಂದ ಮಂಗಳವಾರವೇ ಮುಂಚಿತವಾಗಿ ಅವರಿಗೆ ಈ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಗಿದೆ.
"ಸಾಮಾಜಿಕ ಜಾಲತಾಣ ಮಾಧ್ಯಮಗಳ ಒಕ್ಕೂಟ ಒಂದಿದೆ. ಅವರು ನನಗೆ ಸಾಮಾಜಿಕ ಜಾಲತಾಣ ಮಾಧ್ಯಮ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ. ಈ ಗೌರವಕ್ಕೆ ನಾನು ಪಾತ್ರನಾಗಲು ನೀವೆಲ್ಲರೂ ಕಾರಾಣ. ಅದಕ್ಕಾಗಿ ನಿಮ್ಮನ್ನು ಅಭಿನಂದಿಸಬೇಕು" ಎಂದು ೭೨ ವರ್ಷದ ನಟ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದಾರೆ.
ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಫೋಟೊವನ್ನು ಕೂಡ ಅವರು ಹಾಕಿದ್ದಾರೆ.
ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಬಿಗ್-ಬಿ ಅವರಿಗೆ ಟ್ವಿಟ್ಟರ್ ನಲ್ಲಿ ಸುಮಾರು ೧೨.೫ ದಶಲಕ್ಷ ಅನುಯಾಯಿಗಳಿದ್ದಾರೆ ಹಾಗು ತಮ್ಮ ಫೇಸ್ ಬುಕ್ ಪುಟಕ್ಕೆ ೧೮,೮೫೭,೧೯೬ ಲೈಕ್ ಗಳಿವೆ.
Advertisement