ಅಂತಿಮ ಘಟಕ್ಕೆ ಬಂತು ಬಿಗ್‌ಬಾಸ್ ಸೀಸನ್-8

ಜನಪ್ರಿಯ ಟಿವಿ ರಿಯಾಲಿಟಿ ಷೋ 'ಬಿಗ್‌ಬಾಸ್-8' ಕಾರ್ಯಕ್ರಮ ಅಂತಿಮ ಘಟ್ಟಕ್ಕೆ ತಲುಪಿದ್ದು...
ಬಿಗ್‌ಬಾಸ್ ಸೀಸನ್-8 ಯಾರಗ್ತಾರೆ ವಿನ್ನರ್ ?
ಬಿಗ್‌ಬಾಸ್ ಸೀಸನ್-8 ಯಾರಗ್ತಾರೆ ವಿನ್ನರ್ ?
Updated on

ನವದೆಹಲಿ: ಜನಪ್ರಿಯ ಟಿವಿ ರಿಯಾಲಿಟಿ ಷೋ 'ಬಿಗ್‌ಬಾಸ್-8' ಕಾರ್ಯಕ್ರಮ ಅಂತಿಮ ಘಟ್ಟಕ್ಕೆ ತಲುಪಿದ್ದು, ಬಿಗ್‌ಬಾಸ್ ಗಿರಿ ಯಾರ ಮುಡಿಗೆ ಏರಲಿದೆ ಎಂಬುದು ಇಂದು ನಿರ್ಧಾರವಾಗಲಿದೆ.

ಒಂದೆಡೆ ಪ್ರೇಕ್ಷಕರಿಗೆ ಯಾರಾಗ್ತಾರೆ ವಿನ್ನರ್ ಎಂಬ ಕುತೂಹಲ ಉಂಟಾಗುತ್ತಿದ್ದರೆ, ಮತ್ತೊಂದೆಡೆ ಮನೆಯಲ್ಲಿ ಸ್ಫರ್ಧಿಗಳಾಗಿ ಫೈನಲ್ ಹಂತದವರೆಗೂ ಬಂದಿರುವ ಕರಿಷ್ಮಾ ತನ್ನಾ, ಪ್ರೀತಂ, ಗೌತಮ್ ಗುಲಾಟಿ, ಅಲಿ ಕುಲಿ ಮಿರ್ಜಾ, ಡಿಂಪಿ ಮಹಾಜನ್ ಅವರಲ್ಲಿ ದುಗುಡ ಮನೆ ಮಾಡಿದೆ.

ಈ ಬಾರಿಯ ಬಿಗ್‌ಬಾಸ್ ಸೀಸನ್-8 ಜನರಿಗೆ ಸಾಕಷ್ಟು ಮನರಂಜನೆ ನೀಡಿತ್ತಲ್ಲದೇ, ಈ ಹಿಂದೆ ಬಂದಿದ್ದ ಬಿಗ್‌ಬಾಸ್‌ನ 7 ಅವತರಣಿಗಿಂತ ಈ ಬಾರಿಯ ಕಾರ್ಯಕ್ರಮ ಹೆಚ್ಚು ಜನಪ್ರಿಯತೆಯನ್ನು ಕಂಡುಕೊಂಡಿತ್ತು. ಹೀಗಾಗಿ ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮದ ಅವಧಿಯನ್ನು ಮತ್ತೆ 1 ತಿಂಗಳು ಮುಂದುವರೆಸಿಕೊಂಡು ಹೋಗಲು ತೀರ್ಮಾನಿಸಿದ್ದರು. ಆಯೋಜಕರ ತೀರ್ಮಾನದಿಂದ ಈಗಾಗಲೇ ಹಲವು ಚಿತ್ರಗಳಿಗೆ ನಟ ಸಲ್ಮಾನ್ ಖಾನ್ ಸಹಿ ಮಾಡಿದ್ದು, ಆ ಚಿತ್ರಗಳ ಚಿತ್ರೀಕರಣಕ್ಕೆ ತೊಂದರೆ ಉಂಟಾಗುವುದರಿಂದ ಕಾರ್ಯಕ್ರಮವನ್ನು ತೊರೆದಿದ್ದರು. ನಂತರ ಸಲ್ಮಾನ್ ಖಾನ್ ಅವರ ಸ್ಥಾನಕ್ಕೆ ಫರಾಖಾನ್ ಬಂದಿದ್ದರು.

ಜ.3 ರಂದು ಬಿಗ್‌ಬಾಸ್-8ರ ಹಲ್ಲಾ ಬೋಲ್ ಎಂಬ ಹೊಸ ಅವತರಣಿಕೆಯನ್ನು ಪ್ರಾರಂಭಿಸಲಾಯಿತು. ಈ ಅವರಣಿಕೆಗೆ ಮತ್ತೈವರು ಸ್ಪರ್ಧಿಗಳನ್ನು ಮನೆಗೆ ಆಹ್ವಾನಿಸಲಾಯಿತು. ಆದರೆ ಪ್ರೇಕ್ಷಕರ ಗಮನ ಸೆಳೆಯಲು ಈ ಎಂಟ್ರಿ ಕೊಟ್ಟ ಐವರು ವಿಫಲರಾಗಿ ಕಾರ್ಯಕ್ರಮದಿಂದ ಹೊರಬಂದರು.

ಗ್ರಾಂಡ್ ಫಿನಾಲೆಗೆ ಸಲ್ಮಾನ್ ಬರುವುದಿಲ್ಲ
ಕಾರ್ಯಕ್ರಮವನ್ನು ಮತ್ತೊಂದು ತಿಂಗಳು ಮುಂದುವರಿಸಿಕೊಂಡು ಹೋಗುವ ಆಯೋಜಕರ ತೀರ್ಮಾನದಿಂದ ಕಳೆದ 5 ಸೀಸನ್‌ಗಳ ಬಿಗ್‌ಬಾಸ್ ಅನ್ನು ಹೋಸ್ಟ್ ಮಾಡಿದ್ದ ಸಲ್ಮಾನ್ ಖಾನ್ ಕಾರ್ಯಕ್ರಮ ತೊರೆದಿದ್ದರು. ಆದರೆ ಸಲ್ಮಾನ್ ಗ್ರಾಂಡ್ ಫಿನಾಲೆಗಾದರೂ ಬರುತ್ತಾರೆ ಎಂಬ ಅನಿಸಿಕೆಗಳು ಈಗ ಹುಸಿಯಾಗಿದ್ದು, ಪ್ರೇಕ್ಷಕರ ಆಸೆಗೆ ತಣ್ಣೀರೆರಚಿದಂತಾಗಿದೆ. ಸಲ್ಮಾನ್, ಕಬೀರ್ ಖಾನ್ ಅವರ 'ಬಜರಂಗಿ ಬೈಜಾನ್‌' ಚಿತ್ರೀಕರಣದಲ್ಲಿ ತೊಡಗಿರುವುದರಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಗೌತಮ್ ಗುಲಾಟಿ 'ಬಿಗ್‌ಬಾಸ್-8' ವಿನ್ನರ್
ಬಿಗ್‌ಬಾಸ್-8ರಲ್ಲಿ ತನ್ನ ಆಫ್ ಬಾಡಿ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಿದ್ದ, ಗೌತಮ್ ಗುಲಾಟಿ ಬಿಗ್‌ಬಾಸ್-8ರ ವಿನ್ನರ್ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ, ಈ ಕುರಿತಂತೆ ಕಾರ್ಯಕ್ರಮದ ಆಯೋಜಕರು ಯಾವುದೇ ರೀತಿಯ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com