
ಮುಂಬೈ: ದಶರಥ್ ಮಾಂಝಿ ಅವರ ಸತ್ಯಕಥೆ ಆಧಾರಿತ 'ಮಾಂಝಿ-ದ ಮೌಂಟೈನ್ ಮ್ಯಾನ್' (ಪರ್ವತ ಮನುಷ್ಯ) ಸಿನೆಮಾದ ಟ್ರೇಲರ್ ನೆನ್ನೆ ಬಿಡುಗಡೆಯಾಗಿದೆ. ಕೇತನ್ ಮೆಹ್ತಾ ಅವರ ನಿರ್ದೇಶನದ ಈ ಸಿನೆಮಾದಲ್ಲಿ ನಟಿಸಿರುವ ನಟ ನವಾಜುದ್ದೀನ್ ಸಿದ್ಧಿಕಿ ಅವರು ಈ ಪಾತ್ರದಿಂದ ಹೊರಬರಲು ಬಹಳ ಕಷ್ಟಪಟ್ಟಿರುವುದಾಗಿ ತಿಳಿಸಿದ್ದಾರೆ.
"ಈ ಪಾತ್ರದಿಂದ ಹೊರಬರಲು ಕಳೆದ ಒಂದೂವರೆ ತಿಂಗಳಿನಿಂದ ಬಹಳಷ್ಟು ತ್ರಾಸ ಪಡಬೇಕಾಗಿ ಬಂತು. ಜೈಸಾಲ್ಮೇರ್ ಗೆ ಒಬ್ಬನೇ ಹೋಗಿ ೮-೧೦ ದಿನ ಕಳೆದುಹೋಗುತ್ತಿದ್ದೆ. ನನ್ನನ್ನು ಪತ್ತೆ ಹಚ್ಚದ ಜನ ಇರುವ ಹಲವಾರು ಪ್ರದೇಶಗಳಿಗೆ ಹೋಗಿಬಿಡುತ್ತಿದ್ದೆ. ನಾನು ಸಾಮಾನ್ಯ ಮನುಷ್ಯ ಎಂಬುದನ್ನು ಧೃಢೀಕರಿಸಿಕೊಳ್ಳಬೇಕಿತ್ತು" ಎಂದು ಸೋಮವಾರ ಮುಂಬೈನಲ್ಲಿ ಟ್ರೇಲರ್ ಬಿಡುಗಡೆ ವೇಳೆಯಲ್ಲಿ ಮಾಧ್ಯಮಗಳಿಗೆ ನವಜುದ್ದೀನ್ ತಿಳಿಸಿದ್ದಾರೆ,
ಬೆಟ್ಟದಿಂದ ಜಾರಿ ಬಿದ್ದ ತನ್ನ ಹೆಂಡತಿಯ ನೆನಪಿಗಾಗಿ ೨೨ ವರ್ಷಗಳ ಕಾಲ ಒಬ್ಬನೇ ಪರ್ವತ ಕಡೆದು ರಸ್ತೆ ನಿರ್ಮಿಸಿದ ಸತ್ಯ ಕಥೆ ಆಧಾರಿತ ಸಿನೆಮಾ ಆಗಸ್ಟ್ ೨೧ರಂದು ಬಿಡುಗಡೆಯಾಗಲಿದೆ.
ನವಾಜುದ್ದೀನ್ ಜೊತೆ ರಾಧಿಕ ಆಪ್ಟೆ ಕೂಡ ನಟಿಸಿದ್ದು ಸಂದೇಶ್ ಶಾಂಡಿಲ್ಯ ಅವರ ಸಂಗೀತವಿದೆ.
Advertisement