ಎಸ್ ಎಸ್ ರಾಜಮುಳಿ ನಿರ್ದೇಶನದ 'ಬಾಹುಬಲಿ, ಭಾರತೀಯ ಚಿತ್ರೋದ್ಯಮದಲ್ಲೆ ಅತೀ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಗಳಿಕೆ ಕಂಡು ದಾಖಲೆ ಬರೆದ ಸಿನೆಮಾ. ಹೇಳಿಕೇಳಿ ಇದು ಯುದ್ಧ ಮತ್ತು ಇತಿಹಾಸದ ಕಥೆ ಹೇಳುವಂತಹ ಸಿನೆಮಾ. ಆದರೆ ಇದರ ಇತಿಹಾಸ ಕಲ್ಪಿತ. ಈಗ ಸಂಜಯ್ ಲೀಲಾ ಭನ್ಸಾಲಿ ಅವರ ಸಿನೆಮಾ 'ಬಾಜಿರಾವ್ ಮಸ್ತಾನಿ' ಕಥೆ ಕೂಡ ಇಂತಹುದೇ ಒಂದು ಐತಿಹಾಸಿಕ ಕಥಾಹಂದರವುಳ್ಳದ್ದು ಆದರೆ ನೈಜ ಇತಿಹಾಸದ ಮೇಲೆ ಹೆಣೆದಿರುವ ಕಥೆ. ಈ ಸಿನೆಮಾ ಬಾಹುಬಲಿಯ ದಾಖಲೆಗಳನ್ನು ಸರಿಗಟ್ಟಬಲ್ಲುದೇ? ಮೀರಬಲ್ಲುದೇ? ಎಂದು ಸಿನೆಮಾ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಹಾಗೆ ನೋಡಿದರೆ ಸಂಜಯ್ ಲೀಲಾ ಭನ್ಸಾಲಿ, ಎಸ್ ಎಸ್ ರಾಜಮೌಳಿಗಿಂತ ಹಳಬರು ಮತ್ತು ಪಳಗಿದವರು. 'ದೇವದಾಸ್', 'ಹಮ್ ದಿಲ್ ದೇ ಚುಕೆ ಸನಮ್' 'ಬ್ಲ್ಯಾಕ್' ಇತ್ಯಾದಿ ಹಿಟ್ ಸಿನೆಮಾಗಳನ್ನು ನೀಡಿದವರು. ಈಗ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಛೋಪ್ರಾ ಅವರುಗಳನ್ನು ಹಾಕಿಕೊಂಡು ಈ ಸಿನೆಮಾ ಮಾಡಿದ್ದಾರೆ. ಹಾಗೆ ನೋಡಿದರೆ ಪ್ರಭಾಸ್ ಮತ್ತು ತಮನ್ನ (ಬಾಹುಬಲಿ ನಟರು) ಇವರಿಗಿಂತಲೂ ಈ ನಟ ನಟಿಯರು ಹೆಚ್ಚು ಹೆಸರುವಾಸಿ ಹಾಗೂ ಹಲವಾರು ಸಿನೆಮಾ ಪ್ರಶಸ್ತಿ ವಿಜೇತರು. ಮತ್ತು ಹಿಂದಿ ಭಾಷಿಕರು ಹಾಗು ಹಿಂದಿ ಬಲ್ಲ ಭಾಷಿಕರು ಹೆಚ್ಚು ಜನ ಇರುವ ದೇಶ ಇದು. ಅಲ್ಲದೆ ಐತಿಹಾಸಿಕ ಸಿನೆಮಾಗಳಷ್ಟೇ ಅಲ್ಲದೆ ನೃತ್ಯ, ಸಂಗೀತ ಇವುಗಳನ್ನು ಚೆನ್ನಾಗಿ ಪಳಗಿಸಿಕೊಳ್ಳಬಲ್ಲ ಛಾತಿ ಹೊಂದಿರುವವರು ಸಂಜಯ್ ಲೀಲಾ ಭನ್ಸಾಲಿ. ಈ ಎಲ್ಲಾ ಅನುಕೂಲಗಳಿದ್ದರು 'ಬಾಜಿರಾವ್ ಮಸ್ತಾನಿ' ಎಂಬ ಯುದ್ಧ ಸಿನೆಮಾ 'ಬಾಹುಬಲಿ'ಯನ್ನು ಮೀರಿಸುವುದೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಏನೇ ಆಗಲಿ 'ಬಾಜಿರಾವ್ ಮಸ್ತಾನಿ'ಯ ಈ ಟ್ರೇಲರ್ ನೋಡಿ.
Advertisement