
'ದಿಲ್ ವಾಲೆ' ಚಿತ್ರದಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ರೋಮಾಂಚನಕಾರಿ ಹಾಗೂ ಡೆಜಂರೆಸ್ ಕಾರ್ ಸ್ಟಂಟ್ ಮಾಡಿದ್ದಾರಂತೆ.
ಅಭಿಮಾನಿಗಳಿಗೆ ಇದು ಸಕತ್ ಕಿಕ್ ನೀಡಲಿದ್ದು, ಶಾರುಖ್ ಮತ್ತು ಕೃಷ್ಣ ಸುಂದರಿ ಕಾಜೋಲ್ ಅಭಿನಯದ ದಿಲ್ವಾಲೆ ಚಿತ್ರ ಬಹು ನಿರೀಕ್ಷೆ ಮೂಡಿಸಿದೆ.
ಕಾಜೋಲ್ ಹಾಗೂ ಶಾರುಖ್ ''ದಿಲ್'ವಾಲೆ''ಯಲ್ಲಿ ಮತ್ತೊಮ್ಮೆ ಒಂದಾಗಿರುವುದು ಚಿತ್ರಪ್ರೇಮಿಗಳಿಗೆ ರೋಮ್ಯಾಂಟಿಕ್'ನ ರಸದೌತಣವೂ ಉಣಬಡಿಸಲಿದೆ ಎಂದು ಹೇಳಲಾಗುತ್ತಿದೆ.
ಬಲ್ಗೇರಿಯಾದಲ್ಲಿ ಕಾರ್ ಸ್ಟಂಟ್ ಶೂಟ್ ಮಾಡಲಾಗಿದ್ದು, ಶಾರುಖ್ ಟ್ವಿಟರ್ ನಲ್ಲಿ ಅಭಿಮಾನಿಗಳೊಂದಿಗೆ ಕಾರ್ ಸ್ಟಂಟ್ ನ ರೋಮಾಂಚನಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ.
ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಹಾಗೂ ರೋಹಿತ್ ಶೆಟ್ಟಿ ಪ್ರೊಡಕ್ಷನ್ ಹೌಸ್'ನಿಂದ ತಯಾರಾಗುತ್ತಿರುವ ''ದಿಲ್'ವಾಲೆ''ಯನ್ನು ವರ್ಷದ ಕೊನೆಯಲ್ಲಿ ಅಭಿಮಾನಿಗಳಿಗೆ ಅರ್ಪಿಸುವ ಪ್ರಯತ್ನದಲ್ಲಿದ್ದಾರೆ ನಿರ್ದೇಶಕ ರೋಹಿತ್ ಶೆಟ್ಟಿ. ಅಲ್ಲದೆ ಚಿತ್ರದ ಪ್ರಧಾನ ಪಾತ್ರಗಳಿಗೆ ವಿನೋದ್ ಖನ್ನಾ, ಬೋಮನ್ ಹಿರಾನಿ,ಕಬೀರ್ ಬೇಡಿ,ಸಂಜಯ್ ಮಿಶ್ರಾ ಹಾಗೂ ವರುಣ್ ಶರ್ಮಾ ಬಣ್ಣ ಹಚ್ಚಿದ್ದಾರೆ.
Advertisement