'ಮಸಾನ್' ಹಿಂದಿಯ ಅತ್ಯುತ್ತಮ ಚಲನಚಿತ್ರಗಳಲ್ಲೊಂದು: ಜಾವೇದ್ ಅಕ್ತರ್

'ಮಸಾನ್' ಚಿತ್ರ ನೋಡಿ ಮನಸೋತಿರುವ ಖ್ಯಾತ ಕವಿ-ಗೀತರಚನಕಾರ ಜಾವೇದ್ ಅಕ್ತರ್ "ಇದು ಹಿಂದಿ ಸಿನೆಮಾರಂಗದಲ್ಲೇ ಅತ್ಯುತ್ತಮ ಚಲನಚಿತ್ರಗಳಲ್ಲೊಂದು"
'ಮಸಾನ್' ಚಿತ್ರದ ದೃಶ್ಯ
'ಮಸಾನ್' ಚಿತ್ರದ ದೃಶ್ಯ

ಮುಂಬೈ: 'ಮಸಾನ್' ಚಿತ್ರ ನೋಡಿ ಮನಸೋತಿರುವ ಖ್ಯಾತ ಕವಿ-ಗೀತರಚನಕಾರ ಜಾವೇದ್ ಅಕ್ತರ್ "ಇದು ಹಿಂದಿ ಸಿನೆಮಾರಂಗದಲ್ಲೇ ಅತ್ಯುತ್ತಮ ಚಲನಚಿತ್ರಗಳಲ್ಲೊಂದು" ಎಂದಿದ್ದಾರೆ.

ಶಬನ ಅಜ್ಮಿ, ರಾಜಕುಮಾರ್ ಹಿರಾನಿ, ರಾಜಕುಮಾರ್ ರಾವ್, ಕಲ್ಕಿ ಕೋಚ್ಲಿನ್, ಎಲ್ಲಿ ವಿಕ್ರಮ್, ರಾಧಿಕಾ ಆಪ್ಟೆ ಕೂಡ ಚಲನಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಎಲ್ಲರು ಸಿನೆಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

"ಒಳ್ಳೆಯ ಸಿನೆಮಾ ನೋಡಲಿದ್ದೇನೆ ಎಂಬ ನಿರೀಕ್ಷೆಯೊಂದಿಗೇ ಬಂದಿದ್ದೆ, ಆದರೆ ಸಿನೆಮಾ ನೋಡಿದ ಮೇಲೆ ಮಸೂರೆಗೊಂಡೆ" ಎಂದು ಅಕ್ತರ್ ತಿಳಿಸಿದ್ದಾರೆ.

"ಇದು ಹಿಂದಿ ಸಿನೆಮಾರಂಗದಲ್ಲೇ ಅತ್ಯುತ್ತಮ ಚಲನಚಿತ್ರಗಳಲ್ಲೊಂದು. ಅದ್ಭುತವಾಗಿದೆ. ನಟನೆ, ನಿರ್ದೇಶನ, ಸಿನೆಮ್ಯಾಟೋಗ್ರಫಿ, ಸ್ಕ್ರಿಪ್ಟ್ ಎಲ್ಲವೂ ನಂಬಲಾಗದಷ್ಟು ಚೆನ್ನಾಗಿದೆ. ವಿಶ್ವದ ಯಾವುದೇ ಗುಣಮಟ್ಟದಲ್ಲೂ ಇದು ಅದ್ಭುತ ಸಿನೆಮಾ" ಎಂದು ಮನಸಾರೆ ಹೊಗಳಿದ್ದಾರೆ.

ಈ ಭಾವನಾತ್ಮಕ ಚಲನಚಿತ್ರವನ್ನು ಶಬನ ಆಜ್ಮಿ ಕೂಡ ಅಷ್ಟೇ ಪ್ರಶಂಸಿಸಿದ್ದಾರೆ

"'ಮಾಸಾನ್' ನಿಜವಾಗಿಯೂ ಹಿಂದಿ ಸಿನೆಮಾರಂಗವನ್ನು ಮುಂದಕ್ಕೆ ಕರೆದೊಯ್ದಿದೆ. ಸ್ಕ್ರಿಪ್ಟ್, ನಿರ್ದೇಶನ, ಸಿನೆಮ್ಯಾಟೋಗ್ರಫಿ ಎಲ್ಲವೂ ವರ್ಣನಾತೀತ. ಇಂತಹ ಸಿನೆಮಾಗಳನ್ನು ಮಾಡಿದಾಗ ಹೆಮ್ಮೆಯಾಗುತ್ತದೆ. ಇದು ನೋಡಲೇಬೇಕಾದ ಸಿನೆಮಾ. ಎಲ್ಲರಿಗೂ ಒಳ್ಳೆಯದಾಗಲಿ" ಎಂದು ಹೇಳಿ ಹರಸಿದ್ದಾರೆ.

ನೀರಜ್ ಘಾಯ್ವನ್ ಅವರ ಚೊಚ್ಚಲ ನಿರ್ದೇಶನದ ಈ ಸಿನೆಮಾದಲ್ಲಿ ರಿಚಾ ಚಂದ್ರ, ಸಂಜಯ್ ಮಿಶ್ರ, ಶ್ವೇತಾ ತ್ರಿಪಾಠಿ ಮತ್ತು ವಿಕಿ ಕೌಶಲ್ ನಟಿಸಿದ್ದು ಸಿನೆಮಾ ನಾಳೆ ಶುಕ್ರವಾರ ರಾಷ್ಟ್ರದಾದ್ಯಂತ ಬಿಡುಗಡೆಯಾಗಲಿದೆ. ಕಾನ್ ಚಲನಚಿತ್ರೋತ್ಸವ ೨೦೧೫ರಲ್ಲಿ ಈ ಸಿನೆಮಾ ಎರಡು ಪ್ರಶಸ್ತಿಗಳನ್ನು ಗೆದ್ದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com