

ನವದೆಹಲಿ: ಅಜಯ್ ದೇವಗನ್ ಅಭಿನಯದ 'ದೃಶ್ಯಂ' ಸಿನೆಮಾದ ಟ್ರೇಲರ್ ಅನ್ನು ಯೂಟ್ಯೂಬಿನಲ್ಲಿ ೧೬ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ಈ ಸಿನೆಮಾ ಕೆರಳಿಸಿರುವ ಕುತೂಹಲವನ್ನು ಇದು ತೋರಿಸುತ್ತದೆ. ಮಲಯಾಳಮ್ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ಚಿತ್ರದ ಹಿಂದಿ ಅವತರಿಣಿಕೆ ಇದು.
ಜೂನ್ ೪ ರಂದು ಬಿಡುಗಡೆಯಾದ ಸಿನೆಮಾದ ಮೊದಲ ನೋಟ ಜನರನ್ನು ತುದಿಗಾಲ ಮೇಲೆ ನಿಲ್ಲಿಸಿ ಸಿನೆಮಾ ಬಿಡುಗಡೆಗೆ ಕಾಯುವಂತೆ ಮಾಡಿದೆ.
ದೃಶ್ಯಂ ಮಲಯಾಳಮ್ ಸಿನೆಮಾ ಈಗಾಗಲೇ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಿಮೇಕ್ ಮಾಡಲಾಗಿದೆ. ಹಿಂದಿ ಅವತರಿಣಿಕೆಯಲ್ಲಿ ಟಬು ಪೊಲೀಸ್ ಅಧಿಕಾರಿ ಪಾತ್ರ ವಹಿಸಿದ್ದಾರೆ.
ನಿಶಾಂತ್ ಕಾಮತ್ ನಿರ್ದೇಶಿಸಿರುವ ಈ ಸಿನೆಮಾ ಜುಲೈ ೩೧ಕ್ಕೆ ಬಿಡುಗಡೆಯಾಗಲಿದೆ.
Advertisement