
ನವದೆಹಲಿ: ಹಾಂಗ್ ಕಾಂಗ್ ನ ಖ್ಯಾತ ನಟ ಜಾಕಿ ಚ್ಯಾನ್ ಅವರ ಮುಂಬರಲಿರುವ ಆಕ್ಷನ್ ಸಿನೆಮಾ 'ಕುಂಗ್ ಫು ಯೋಗ' ಸಿನೆಮಾದಲ್ಲಿ ಬಾಲಿವುಡ ನಟಿ ಕತ್ರಿನಾ ಕೈಫ್ ನಟಿಸಲಿದ್ದಾರೆ ಎಂಬ ಸುದ್ದಿ ಈಗಾಗಲೇ ಹರಡಿದ್ದರೂ, ಅವರಿನ್ನೂ ಧೃಢೀಕರಿಸಿಲ್ಲ ಎಂದು ನಟಿಯ ಪ್ರತಿನಿಧಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ 'ಕುಂಗ್ ಫು ಯೋಗ' ಸಿನೆಮಾದಲ್ಲಿ ಲಂಡನ್ ಮೂಲದ ೩೧ ವರ್ಷದ ನಟಿ ಚೈನಾ ವಿಶ್ವವಿದ್ಯಾಲಯದಲ್ಲಿ ಭಾರತೀಯ ಪ್ರೊಫೆಸರ್ ಪಾತ್ರ ನಿರ್ವಹಿಸಲಿದ್ದಾರೆ ಹಾಗು ಚಾನ್ ಚೈನಾ ಪಳೆಯುಳಿಕೆ ತಜ್ಞನಾಗಿ ಮಗಧಾ ರಾಜ್ಯಭಾರದ ನಿಘೂಡಗಳನ್ನು ಹೊರಗೆಡವಲು ಪ್ರೊಫೆಸರ್ ಗೆ ನೆರವಾಗುವ ಪಾತ್ರ ಎನ್ನಲಾಗಿತ್ತು.
ಆದರೆ ಕತ್ರಿನಾ ಅವರ ವಕ್ತಾರರ ಪ್ರಕಾರ ಪಾತ್ರದ ಬಗ್ಗೆ ನಟಿ ಇನ್ನೂ ನಿರ್ಧರಿಸಬೇಕಿದೆ ಎಂದಿದ್ದಾರೆ.
ಇದಕ್ಕೂ ಮುಂಚೆ, ಸ್ಟ್ಯಾನ್ಲಿ ಟಾಂಗ್ ನಿರ್ದೇಶನದ ಈ ಸಿನೆಮಾದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಕೂಡ ನಟಿಸಲಿದ್ದಾರೆ ಎಂಬ ವರದಿಯಿತ್ತು. ಆದರೆ ಇದನ್ನು ನಟ ನಂತರ ನಿರಾಕರಿಸಿದ್ದರು.
Advertisement