ನಿರ್ದೇಶನಕ್ಕೆ ಕೊಂಕಣಬಲ
ಕೊಂಕಣ ಸುತ್ತಿ ಮೈಲಾರಕ್ಕೆ ಬರೋ ಬದಲು `ಡೈರೆಕ್ಟ್' ಆಗಿ ಹೇಳಿಬಿಡೋಣ. ಕೊಂಕಣಾ ಸೇನ್ ಶರ್ಮಾ ಡೈರೆಕ್ಟರ್ ಆಗ್ತಿದ್ದಾಳೆ. ಕೊಂಕಣಾ ಸಿನಿಮಾಗೆ ಎಂಟ್ರಿ ಕೊಟ್ಟಿದ್ದೇ ನಿರ್ದೇಶಕಿ ಆಗೋ ಆಸೆ ಹೊತ್ತು.ಆದರೆ ನಟನೆ ಆಕೆಯನ್ನು ಕೈಬೀಸಿ ಕರೆಯಿತು. ಪ್ರಶಸ್ತಿಗಳು ಕೂಡ ಒಲಿದು ಬಂದವು, ಮಿಸ್ಟರ್ ಆ್ಯಂಡ್ ಮಿಸಸ್ ಐಯ್ಯರ್, ಲೈಫ್ ಇನ್ ಮೆಟ್ರೋ
ಹಾಗೂ ಓಂಕಾರ ಮುಂತಾದ ಚಿತ್ರಗಳಿಗೆ ಪ್ರಶಸ್ತಿ ಗಳಿಸಿರುವ ಈಕೆ ಈಗಲೂ ನಟನೆಗೇನೂ ಗುಡ್ ಬೈ ಹೇಳಿಲ್ಲ .ಆದರೆ ನಿರ್ದೇಶಕಿಯಾಗಿ ರಾಷ್ಟ್ರಪ್ರಶಸ್ತಿ ಗಳಿಸಿರುವ ತಾಯಿ ಅಪರ್ಣಾ ಸೇನ್ ರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಕೊಂಕಣಾ ನಿರ್ದೇಶನಕ್ಕಿಳಿದಿದ್ದಾಳೆ. ಚಿತ್ರದ ಬಗ್ಗೆ ಹೆಚ್ಚೇನೂ ಮಾಹಿತಿಗಳು ಲಭ್ಯವಿಲ್ಲದಿದ್ದರೂ, ಇದೊಂದು ಬಹುಭಾಷಾ ಚಿತ್ರವಾಗಲಿದ್ದು ಕಥೆ ಚಿತ್ರಕಥೆ ಕೂಡ ಕೊಂಕಣಾರದ್ದೇ ಎಂಬುದು ದೃಢವಾಗಿದೆ.
ತನ್ನ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ತಾನು ನಟಿಸುತ್ತಿಲ್ಲ ಎಂಬುದನ್ನೂ ಆಕೆ ಖಾತ್ರಿ ಪಡಿಸಿದ್ದಾಳೆ. ತಾಯಿ ಅಪರ್ಣಾ ಸೇನ್ ರ ಅನುಭವವನ್ನು ತಮ್ಮ ಚೊಚ್ಚಲ ನಿರ್ದೇಶನಕ್ಕೆ ಬಳಸಿಕೊಳ್ಳುವುದಾಗಿ ಹೇಳುವ ಕೊಂಕಣಾ, ದೊಡ್ಡ ಚಿತ್ರ ಮಾಡುವ ಮೊದಲು ಶಾರ್ಟ್ ಫಿಲ್ಕ್ ಮಾಡಿ ತನ್ನ ಸಾಮರ್ಥ್ಯ ಅರಿಯುವ ಯೋಜನೆ ಇಟ್ಟುಕೊಂಡಿದ್ದಳು. ಆದರೆ ಈಗ ಆ ಪ್ಲಾನ್ ಕೈ ಬಿಟ್ಟಿದ್ದಾಳೆ. ಒಟ್ಟಾರೆ ಈಕೆಗೆ ನಿರ್ದೇಶಕಿಯಾಗಲು ಕೊಂಕಣಬಲ ಕೂಡಿ ಬಂದಿದೆ ಅನ್ನಲಡ್ಡಯಿಲ್ಲ.

