ಪುಟ್ಟಗೌರಿ-ದೊಡ್ಡಮಾತು

ಕನ್ನಡದ ಹಿಟ್ ಧಾರಾವಾಹಿ ಪುಟ್ಟಗೌರಿ ಮದುವೆಯ ಮೂಲ ಹಿಂದಿಯ ಬಾಲಿಕಾ ವಧು ಎಂಬುದು ಗೊತ್ತಿರೋ ವಿಷಯವೇ. ಅಲ್ಲಿಯೂ ವರುಷಗಳಿಂದ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಎಂದಿಗೂ ಟಿಆರ್‍ಪಿಯಲ್ಲಿ ನಂಬರ್‍ಒನ್ ಸ್ಥಾನದಲ್ಲಿ ಆಭಾದಿತವಾಗಿ ಮುನ್ನಡೆಯುತ್ತಿದೆ...
ಗ್ರೇಸಿ ಗೋಸ್ವಾಮಿ
ಗ್ರೇಸಿ ಗೋಸ್ವಾಮಿ

ಕನ್ನಡದ ಹಿಟ್ ಧಾರಾವಾಹಿ ಪುಟ್ಟಗೌರಿ ಮದುವೆಯ ಮೂಲ ಹಿಂದಿಯ ಬಾಲಿಕಾ ವಧು ಎಂಬುದು ಗೊತ್ತಿರೋ ವಿಷಯವೇ. ಅಲ್ಲಿಯೂ ವರುಷಗಳಿಂದ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಎಂದಿಗೂ ಟಿಆರ್‍ಪಿಯಲ್ಲಿ ನಂಬರ್‍ಒನ್ ಸ್ಥಾನದಲ್ಲಿ ಆಭಾದಿತವಾಗಿ ಮುನ್ನಡೆಯುತ್ತಿದೆ.

ಇದೀಗ ಈ ಧಾರಾವಾಹಿಗೆ ಮನ್ವಂತರದ ಸಮಯ. ಧಾರಾವಾಹಿಗೆ ಹೊಸರೂಪ ಸಿಗುತ್ತಿದೆ. ಬಾಲಿಕಾವಧು ಗ್ರೇಸಿ ಗೋಸ್ವಾಮಿ ಈಗ ಭಾರತದ ಕಿರುತೆರೆಯ ಮನೆಮಾತು. ಬಾಲ್ಯವಿವಾಹವೇ ಕೇಂದ್ರ ವಿಷಯವಾಗಿರುವ ಈ ಧಾರಾ ವಾಹಿಯ ನಾಯಕಿ ವಯಸ್ಸು ಚಿಕ್ಕದಿದ್ದರೂ ಸಾಮಾಜಿಕ ಅರಿವಿನಲ್ಲಿ ದೊಡ್ಡ ವರಿಗೆ ಸರಿಸಮ ನಿಲ್ಲುತ್ತಾಳೆ.

ಬಾಲ್ಯ ವಿವಾಹವನ್ನು ಕಟುವಾಗಿ ವಿರೋಧಿಸುವ ಗ್ರೇಸಿ, ತಾನು ಶಾಲೆಯಲ್ಲಿ ಟೀಚರ್ ಮೂಲಕ ಬಾಲ್ಯವಿವಾಹದ ದುಷ್ಪರಿ ಣಾಮವನ್ನು ವಿವರವಾಗಿ ತಿಳಿದುಕೊಂಡಿದ್ದೇನೆ ಎನ್ನುತ್ತಾಳೆ. ಡ್ರಾಮೇಬಾಜ್ ಎಂಬ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಗ್ರೇಸಿ, ಮಕ್ಕಳಿಗೆ ಶಿಕ್ಷಣ ಸೌಲಭ್ಯ ಸಿಕ್ಕಿದಲ್ಲಿ ಬಾಲ್ಯವಿವಾಹ ಸಮಸ್ಯೆ ತಂತಾನೇ ನಿರ್ಮೂಲನೆಯಾಗುತ್ತದೆ ಎಂದು ಪ್ರಬುದ್ಧ ನಾಯಕಿಯಂತೆ ಮಾತನಾಡುತ್ತಾಳೆ. ಧಾರಾವಾಹಿಯನ್ನು ಕೇವಲ ಮನರಂಜನೆಗೆ ನೋಡಿ, ಅದರಲ್ಲಿನ ಉತ್ತಮ ಸಂದೇಶ ಅಳವಡಿಸಿಕೊಳ್ಳಿ ಎನ್ನುವುದು ಆಕೆಯ ಅಡ್ವೈಸು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com