ಶಶಿ ಕಪೂರ್‌ಗೆ ನಾಳೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

ಬಾಲಿವುಡ್ ಹಿರಿಯ ನಟ ಶಶಿ ಕಪೂರ್ ಅವರು ನಾಳೆ ೨೦೧೪ನೆ ಸಾಲಿನ ದೇಶದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ...
ಶಶಿ ಕಪೂರ್‌
ಶಶಿ ಕಪೂರ್‌

ಮುಂಬೈ: ಬಾಲಿವುಡ್ ಹಿರಿಯ ನಟ ಶಶಿ ಕಪೂರ್ ಅವರು ನಾಳೆ ೨೦೧೪ನೆ ಸಾಲಿನ ದೇಶದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಅವರ ಪುತ್ರ ಕುನಲ್ ಅವರು ಖಚಿತಪಡಿಸಿದ್ದಾರೆ.

ಹೌದು, ಮೇ 10ರಂದು ನಗರದ ಪೃಥ್ವಿ ಚಿತ್ರಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ನನ್ನ ತಂದೆಯವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಆ ಕಾರ್ಯಕ್ರಮದಲ್ಲಿ ಅರ್ಧದಿನ ವಿಶೇಷ ಕಾರ್ಯಕ್ರಮಗಳು ಸಹ ನಡೆಯಲಿವೆ ಎಂದು ಕುನಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಶಶಿಕಪೂರ್ ಅವರ ಕುಟುಂಬದ ಸದಸ್ಯರು ಭಾಗಿಯಾಗಲಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಶಶಿ ಕಪೂರ್(77) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ಮುಂಬೈಯಿಂದ ದೆಹಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರಿಗೆ ನಾಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಈ ಪ್ರಶಸ್ತಿಯನ್ನು ಪಡೆಯುತ್ತಿರುವ ೪೬ ನೆ ವ್ಯಕ್ತಿ ೭೭ ವರ್ಷದ ಶಶಿಕಪೂರ್ ಮತ್ತು ಕಪೂರ್ ಕುಟುಂಬದಲ್ಲಿ ಪ್ರಶಸ್ತಿ ಪಡೆಯುತ್ತಿರುವ ಮೂರನೆ ವ್ಯಕ್ತಿ. ಶಶಿ ಅವರ ತಂದೆ ಪೃಥ್ವಿರಾಜ್ ಕಪೂರ್ (೧೯೭೧)ಮತ್ತು ಸಹೋದರ ರಾಜ್ ಕಪೂರ್ (೧೯೮೭) ಇದೆ ಪ್ರಶಸ್ತಿಯನ್ನು ಪಡೆದ ಕುಟುಂಬ ಸದಸ್ಯರು. ೧೯೬೧ರಲ್ಲಿ 'ಧರ್ಮಪುತ್ರ' ಚಲನಚಿತ್ರ ಶಶಿ ಅವರ ಚೊಚ್ಚಲ ಸಿನೆಮಾ. ನಂತರ ಈ ಹಿರಿಯ ನಟ ನೂರಾರು ಸಿನೆಮಾಗಳಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com