
ಸಿನೆಮಾ ತಾರೆಯರು ಮತ್ತು ರಾಜಕಾರಣಿಗಳಿಗೆ ಟ್ವಿಟ್ಟರ್ ಕಾದಾಟದ ವೇದಿಕೆಯಾಗಿದೆ. ಒಬ್ಬರೊಬ್ಬರ ಮೇಲೆ ವಾಗ್ದಾಳಿ ಮಾಡುವುದು ಇಲ್ಲಿ ಸರ್ವೇಸಾಮಾನ್ಯ.
ಒಂದು ಕಾಲಕ್ಕೆ ಒಟ್ಟಿಗೇ ಕೆಲಸ ಮಾಡುತ್ತಿದ್ದ ಇಬ್ಬರು ನಿರ್ದೇಶಕರ ನಡುವೆ ಟ್ವಿಟ್ಟರ್ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅನುರಾಗ್ ಕಶ್ಯಪ್ ಅವರ ಬಾಂಬೆ ವೆಲ್ವೆಟ್ ಚಲನಚಿತ್ರದ ಬಿಡುಗಡೆ ಹಿನ್ನಲೆಯಲ್ಲಿ 'ಆಗ್' ನಿರ್ದೇಶಕ ರಾಮಗೋಪಾಲ್ ವರ್ಮಾ ಮತ್ತು ಕಶ್ಯಪ್ ನಡುವಿನ ಈ ಟ್ವಿಟ್ಟರ್ ಕಾಳಗ ಈಗ ಅಂತರ್ಜಾಲದಲ್ಲಿ ಟ್ರೆಂಡಿಂಗ್ ವಿಷಯ!
'ಸತ್ಯ' ಸಿನೆಮಾದಲ್ಲಿ ವರ್ಮಾ ಮತ್ತು ಕಶ್ಯಪ್ ಒಟ್ಟಿಗೆ ಕೆಲಸ ಮಾಡಿ ನಂತರ ಬೇರೆ ಬೇರೆ ದಾರಿ ಹಿಡಿದಿದ್ದರು. ಈಗ ಅವರಿಬ್ಬರೂ ಈ ಟ್ವಿಟ್ಟರ್ ಕಾಳಗದ ಮೂಲಕ ಒಂದಾಗಿದ್ದಾರೆ.
ಬಾಂಬೆ ವೆಲ್ವೆಟ್ ಚಿತ್ರ ಬಾಲಿವುಡ್ ನಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲದ್ದ ಕ್ಕೆ ಕುಚೋದ್ಯ ಮಾಡಿರುವ ವರ್ಮಾ ಟ್ವೀಟ್ ಒಂದರಲ್ಲಿ "ಪ್ರೇಕ್ಷಕರು ನಿರಾಕರಿಸಿದ ಸಿನೆಮಾವನ್ನು ನಿರ್ದೇಶಕ ಸಮರ್ಥಿಸಿಕೊಳ್ಳುವುದು ಹೇಗೆಂದರೆ ತನ್ನ ಪ್ರೇಯಸಿಗೆ 'ನಾನು ನನ್ನನು ಪ್ರೀತಿಸಿಕೊಳ್ಳುತ್ತೇನೆ. ನೀನು ನನ್ನನ್ನು ಪ್ರೀತಿಸದಿದ್ದರೆ ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ'" ಎಂದಂತೆ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಶ್ಯಪ್, ವರ್ಮಾ ಅವರಿಗೆ "ಸರ್ ನಾನು ನಿಮ್ಮನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತೇನೆ. ಈಗ ವೋಡ್ಕಾ ಪಕ್ಕಕಿಟ್ಟು ಮಲಗಿಕೊಳ್ಳಿ.. ಮುತ್ತುಗಳು" ಎಂದಿದ್ದಾರೆ.
ಹೀಗೆ ಮಾತು ಮುಂದುವರೆದು ಬಾಂಬೆ ವೆಲ್ವೆಟ್ ನಲ್ಲಿ ನಟಿಸಿರುವ 'ಕರಣ್ ಜೋಹರ್' ಅವರನ್ನು ಕೂಡ ವರ್ಮಾ ಮೂದಲಿಸಿದ್ದಾರೆ.
Advertisement