
೯೦ರ ದಶಕದ ಅತಿ ಪ್ರಖ್ಯಾತ ಹಾಡುಗಳಲ್ಲಿ ಒಂದಾದ 'ಚೈಯ್ಯ ಚೈಯ್ಯ' ಈಗ ಹೊಸ ಫ್ಯೂಶನ್ ಅವತಾರದಲ್ಲಿ ಕಾಣಿಸಿಕೊಂಡಿದೆ.
ಶಾರುಕ್ ಅವರ 'ದಿಲ್ ಸೆ' ಸಿನೆಮಾದ ಈ ಪ್ರಖ್ಯಾತ ಹಾಡನ್ನು ಸಂಗೀತ ನಿರ್ಮಾಪಕ ಕರ್ಟ್ ಶ್ನೈಡರ್, ಸ್ಯಾಮ್ ಸ್ಯುಇ ಅವರುಗಳು ವಿದ್ಯಾ ಮತ್ತು ಶಂಕರ್ ಟಕರ್ ಅವರುಗಳೊಂದಿಗೆ ಮತ್ತೆ ಕಂಪೋಸ್ ಮಾಡಿ ನಿರ್ದೇಶಿಸಿದ್ದಾರೆ.
ಮೈಕೆಲ್ ಜ್ಯಾಕ್ಸನ್ ಅವರ 'ಡೋಂಟ್ ಸ್ಟಾಪ್' ಮತ್ತು 'ಚೈಯ್ಯ ಚೈಯ್ಯ' ಎರಡನ್ನು ಮರು ಮಿಕ್ಸ್ ಮಾಡಿ ನಿರ್ದೇಶಿಸಿರುವ ಈ ಹಾಡು ಶಾರುಕ್ ಅವರಿಂದಲೇ ಪ್ರಶಂಸೆಗೆ ಒಳಗಾಗಿದೆ.
"'ಚೈಯ್ಯ ಚೈಯ್ಯ'ದ ಅದ್ಭುತ ಮ್ಯಾಶ್ ಅಪ್. ಸಂತಸಗೊಂಡೆ" ಎಂದು ಶಾರುಕ್ ಟ್ವೀಟ್ ಮಾಡಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
Advertisement