ಭಾರತದ ಟಿವಿ ಷೋಗಳಿಗೆ ಈಜಿಪ್ಟ್ ನಲ್ಲಿ ಡಿಮ್ಯಾಂಡ್!

ಈಜಿಪ್ಟ್ ನಲ್ಲಿ ಭಾರತೀಯ ಟಿವಿ ಕಾರ್ಯಕ್ರಮಗಳು ದಿಢೀರ್ ಜನಪ್ರಿಯತೆ ಪಡೆದುಕೊಂಡಿವೆ...
ಜೋಧಾ ಅಕ್ಬರ್
ಜೋಧಾ ಅಕ್ಬರ್
Updated on

ಕೈರೋ: ಈಜಿಪ್ಟ್ ನಲ್ಲಿ ಭಾರತೀಯ ಟಿವಿ ಕಾರ್ಯಕ್ರಮಗಳು ದಿಢೀರ್ ಜನಪ್ರಿಯತೆ ಪಡೆದುಕೊಂಡಿವೆ.

ಜೋಧಾ ಅಕ್ಬರ್, ಗೀತ್? ಹುಯೀ ಸಬ್‍ಸೆ ಪರಾಯಿ, ಪುನರ್ ವಿವಾಹ ಮುಂತಾದ ಧಾರಾವಾಹಿಗಳಲ್ಲದೆ, ಕಾಮಿಡಿ ಕಾರ್ಯಕ್ರಮಗಳಿಗೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಭಾರತದ ಬಹುತೇಕ ಟಿವಿ ಕಾರ್ಯಕ್ರಮಗಳು ಅರೇಬಿಕ್ ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತಿವೆ. ಇತ್ತೀಚಿನ ತನಕ ಟರ್ಕಿಯ ಧಾರಾವಾಹಿ, ಸಿನಿಮಾ ಹಾಗೂ ಇನ್ನಿತರ ಷೋಗಳಿಗೆ ಅಂಟಿಕೊಂಡಿದ್ದ ಈಜಿಪ್ಟ್ ವೀಕ್ಷಕರು ಅವುಗಳಿಂದ ದೂರವಾಗಿ ಭಾರತೀಯ ಕಾರ್ಯಕ್ರಮಗಳನ್ನು ಇಷ್ಟಪಡಲಾರಂಭಿಸಿದ್ದಾರೆ.

ಟರ್ಕಿ ಮತ್ತು ಈಜಿಪ್ಟ್ ನಡುವಣ ರಾಜಕೀಯ ಸಂಬಂಧ ಹದಗೆಟ್ಟ ನಂತರ ಟರ್ಕಿಷ್ ಟಿವಿ ಕಾರ್ಯಕ್ರಮಗಳ ಪ್ರಸಾರ ಕಮ್ಮಿಯಾಗಿದ್ದವು. ಬಾಲಿವುಡ್ ನಟನಟಿಯರು ಈಜಿಪ್ಟ್ ನಲ್ಲೂ ಕೊಂಚ ಪರಿಚಿತ ಮುಖಗಳಾಗಿದ್ದರ ಜೊತೆಗೆ, ನಮ್ಮವರ ಹಾಡು, ನೃತ್ಯಗಳು, ವೇಷಭೂಷಣಗಳು, ಕಥಾಹಂದರಗಳು ಅಲ್ಲಿನವರನ್ನು ಆಕರ್ಷಿಸಿರುವುದಾಗಿ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com