ಸಲ್ಮಾನ್ ಖಾನ್
ಬಾಲಿವುಡ್
ಗುಲಾಂ ಅಲಿ ವಿಷಯದಲ್ಲಿ ರಾಜಕೀಯ ಅಜೆಂಡಾ ಏನೂ ಇಲ್ಲ: ಸಲ್ಮಾನ್ ಖಾನ್
ಕಲೆಗೆ ಯಾವುದೇ ಸೀಮಾರೇಖೆಗಳಿಲ್ಲ. ಎಲ್ಲರೂ ಅದನ್ನು ಪ್ರಶಂಸಿಸಲೇ ಬೇಕು. ಗುಲಾಂ ಅಲಿಯವರ ಕಾರ್ಯಕ್ರಮ ರದ್ದತಿಯ ಹಿಂದೆ ರಾಜಕೀಯವೇನೂ ಇಲ್ಲ...
ನವದೆಹಲಿ: ಪಾಕಿಸ್ತಾನಿ ಗಜಲ್ ಗಾಯಕ ಗುಲಾಂ ಅಲಿ ಭಾರತದಲ್ಲಿ ನಿಗದಿಯಾಗಿದ್ದ ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಭಾರತದ ರಾಜಕಾರಣದಲ್ಲಿನ ಜಟಾಪಟಿಯ ನಡುವೆ ನನ್ನ ಹೆಸರು ತರುವುದು ಬೇಡ ಎಂದು ಹೇಳಿ ಗುಲಾಂ ಅಲಿ ಕಾರ್ಯಕ್ರಮವನ್ನು ರದ್ದು ಮಾಡಿದ್ದರು.
ಆದರೆ ಗುಲಾಂ ಅಲಿ ವಿಷಯದಲ್ಲಿ ಯಾವುದೇ ರಾಜಕೀಯ ಅಜೆಂಡಾ ಇದೆ ಎಂದು ನನಗನಿಸುತ್ತಿಲ್ಲ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ. ಕಲೆಗೆ ಯಾವುದೇ ಸೀಮಾರೇಖೆಗಳಿಲ್ಲ. ಎಲ್ಲರೂ ಅದನ್ನು ಪ್ರಶಂಸಿಸಲೇ ಬೇಕು. ಗುಲಾಂ ಅಲಿಯವರ ಕಾರ್ಯಕ್ರಮ ರದ್ದತಿಯ ಹಿಂದೆ ರಾಜಕೀಯವೇನೂ ಇಲ್ಲ. ಕಲೆ ಮತ್ತು ಸಂಸ್ಕೃತಿಯ ವಿಷಯದಲ್ಲಿ ಹೀಗೆಲ್ಲಾ ಆಗುವುದಕ್ಕೆ ಸಾಧ್ಯವಿಲ್ಲ ಎಂದು ಸಲ್ಮಾನ್ ಹೇಳಿದ್ದಾರೆ.
ಸಲ್ಮಾನ್ ಖಾನ್ ರ ಬಜರಂಗಿಭಾಯಿಜಾನ್ ಪಾಕಿಸ್ತಾನದಲ್ಲಿಯೂ ಉತ್ತಮ ಗಳಿಕೆ ಕಂಡು ಪ್ರಶಂಸೆಗೆ ಅರ್ಹವಾಗಿತ್ತು.
ಇದೊಂದು ಕಲೆ, ಅದಕ್ಕೆ ಸೀಮಾರೇಖೆಗಳಿಲ್ಲ. ಜಿಂದಗೀ ಶೋ ನೋಡಿ, ಅವರೆಷ್ಟು ಚೆನ್ನಾಗಿ ಮಾಡುತ್ತಿದ್ದಾರೆ. ಎಲ್ಲರೂ ಅದನ್ನು ನೋಡಲು ಇಷ್ಟಪಡುತ್ತಾರೆ. ನನ್ನಮ್ಮನೂ ಆ ಶೋ ನೋಡ್ತಾರೆ. ಕಲೆಯನ್ನು ಎಲ್ಲರೂ ಗೌರವಿಸಬೇಕು ಎಂದು ಸಲ್ಲು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ